ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್ ತಮ್ಮ ಕುಟುಂಬದ ಜತೆ ಈದ್ ಆಚರಿಸಿಕೊಂಡಿದ್ದಾರೆ. ಈ ಬಗ್ಗೆ ಫೋಟೋವೊಂದನ್ನು ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಈ ಬಾರಿಯ ಈದ್ ಕರೀನಾ ಕಪೂರ್ ಗೆ ವಿಶೇಷವಾಗಿತ್ತು. ಎರಡನೇ ಪುತ್ರನ ಆಗಮನದಿಂದ ತುಂಬಾ ಖುಷಿಯಾಗಿರುವ ಕರೀನಾ ತಮ್ಮಿಬ್ಬರ ಪುತ್ರರೊಂದಿಗೆ ಈದ್ ಆಚರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ತಮ್ಮ ಪುತ್ರರಾದ ತೈಮೂರ್ ಅಲಿ ಖಾನ್ ಹಾಗೂ ಜಹಂಗೀರ್ ಹಾಗೂ ಸೈಫ್ ಅಲಿ ಖಾನ್ ಅವರ ಸಹೋದರಿ ಸೋಹಾ ಅಲಿಖಾನ್ ಪತಿ ಕುನಾಲ್ ಖೇಮು ಹಾಗೂ ಸಾಬಾ ಜತೆ ಈದ್ ಆಚರಿಸಿರುವ ಫೋಟೋವನ್ನು ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ.