'ಇಂಜಿ ವೆಲ್ಲಂ'ನಲ್ಲಿ ಸಾಯಿ ಪಲ್ಲವಿ ಲುಕ್ 
ಸಿನಿವಾಣಿ

ಶಾರ್ಟ್ ಹೇರ್ ಸ್ಟೈಲ್, ತುಂಬು ಗರ್ಭಿಣಿ; Inji Vellamನ 'ಆಚಿ ಆಚಿ' ಹಾಡಿನಲ್ಲಿ ಸಾಯಿ ಪಲ್ಲವಿ ಹೊಸ ಲುಕ್​ಗೆ ಫ್ಯಾನ್ಸ್​​​ ಕ್ಲೀನ್​ ಬೋಲ್ಡ್​

  • ಇಂಜಿ ವೆಲ್ಲಂ ಸಿನಿಮಾದ ಮೊದಲ ಹಾಡು 'ಆಚಿ ಆಚಿ' ರಿಲೀಸ್​​.

  • ಸಾಯಿ ಪಲ್ಲವಿ ಹೊಸ ಲುಕ್​, ಹಾಡಿನ ಲಿರಿಕ್ಸ್, ಸಂಗೀತಕ್ಕೆ ಫಿದಾ ಆದ ಸಿನಿ ಪ್ರೇಮಿಗಳು.

  • ಮಣಿರತ್ನಂ ನಿರ್ದೇಶನದಲ್ಲಿ ಮತ್ತೊಂದು ಬ್ಲಾಕ್​ ಬ್ಲಸ್ಟರ್ ಸಿನಿಮಾ ಸಿದ್ಧವಾಗಿದೆ ಎಂದ ನೆಟ್ಟಿಗರು.

ಪ್ರತಿ ಸಿನಿಮಾ ಆಯ್ಕೆಯಲ್ಲಿಯೂ ವಿಭಿನ್ನ ಪಾತ್ರದಲ್ಲಿ ಮಿಂಚುವ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ, ಸದ್ಯ ಮಣಿರತ್ನಂ ನಿರ್ದೇಶನದ 'ಇಂಜಿ ವೆಲ್ಲಂ' ಸಿನಿಮಾದಲ್ಲಿ ಶಾರ್ಟ್ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನ.25ರಂದು ಸಿನಿಮಾದ 'ಆಚಿ ಆಚಿ' ಹಾಡು ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರೇಮಂನಲ್ಲಿ ಟೀಚರ್ ಮಲರ್ ಆಗಿ ಮನಸ್ಸು ಕದ್ದವರು, ಗಾರ್ಗಿಯಲ್ಲಿ ಮನೆಯ ಜವಾಬ್ದಾರಿ ಹೊತ್ತ ಹಿರಿಯ ಮಗಳಾಗಿ ಕಣ್ಣೀರು ಹರಿಸಿದವರು, ಲವ್ ಸ್ಟೋರಿಯಲ್ಲಿ ಡ್ಯಾನ್ಸ್ ಟೀಚರ್ ಆಗಿ ಕುಣಿಸಿದವರು, ಶ್ಯಾಮ್ ಸಿಂಗ್ ರಾಯ್‌ನಲ್ಲಿ ದೇವದಾಸಿ ಪದ್ಧತಿಯಲ್ಲಿ ಸಿಲುಕಿದ ಪ್ರತಿಭಾವಂತ ನೃತ್ಯಗಾರ್ತಿಯಾಗಿ.. ಇತ್ತೀಚೆಗೆ ರಿಲೀಸ್ ಆದ ರಾಮಾಯಣದಲ್ಲಿ ಸೀತೆಯಾಗಿ ದೈವತ್ವ ತುಂಬಿದವರು. ಈಗ ಓಂ ಸಿನಿಮಾದಲ್ಲಿ IPS ಅಧಿಕಾರಿ ನಿತ್ಯಾ ರೆಡ್ಡಿಯಾಗಿ ಸಾಯಿ ಪಲ್ಲವಿ ಮತ್ತೊಮ್ಮೆ ಮಿಂಚಿದ್ದರು.

ಫಸ್ಟ್ ಹಾಡು ರಿಲೀಸ್

ಸದ್ಯ ಮಣಿರತ್ನಂ ಅವರ ಬಹುನಿರೀಕ್ಷಿತ ರೊಮ್ಯಾಂಟಿಕ್ ಡ್ರಾಮಾ 'ಇಂಜಿ ವೆಲ್ಲಂ' ಚಿತ್ರದ ಮೊದಲ ಹಾಡು 'ಆಚಿ ಆಚಿ' ರಿಲೀಸ್ ಆಗಿದೆ. ಈ ಹಾಡಿಗೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಯೋಜನೆಯ ಈ ಹಾಡಿಗೆ ಇಳಂಗೋ ಕೃಷ್ಣನ್ ಸಾಹಿತ್ಯ ಬರೆದಿದ್ದು, ವೈಶಾಲಿ ಸಮಂತ್ ಮತ್ತು ಶರಣ್ಯಾ ಶ್ರೀನಿವಾಸ್ ಧ್ವನಿ ನೀಡಿದ್ದಾರೆ.

ಸಾಯಿ ಪಲ್ಲವಿ ಹೊಸ ಅವತಾರ

ಆಚಿ ಆಚಿ ಹಾಡಿನಲ್ಲಿ ಸಾಯಿ ಪಲ್ಲವಿ ಶಾರ್ಟ್​ ಹೇರ್​ ಸ್ಟೈಲ್​​ನಲ್ಲಿ...ಗುಲಾಬಿ ಬಣ್ಣದ ಫ್ರಾಕ್​ ತೊಟ್ಟು ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ತುಂಬು ಗರ್ಭಿಣಿಯಾಗಿರುವ ಅವರು ಭರ್ಜರಿಯಾಗಿ ಈ ಹಾಡಿಗೆ ಕುಣಿದಿದ್ದಾರೆ. ನಟಿಯ ಈ ಬದಲಾವಣೆಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಜ.29ರಂದು ರಿಲೀಸ್​ ಆಗಲಿದೆ.

ಕಥೆ ಊಹಿಸಿದ ಫ್ಯಾನ್ಸ್

ಸಾಯಿ ಪಲ್ಲವಿ ಅವರು ಕ್ಯಾನ್ಸರ್​ ರೋಗಿ ಪಾತ್ರದಲ್ಲಿ ನಟಿಸುತ್ತಿರಬಹುದು ಎಂದು ಕೆಲವರು ನಿರೀಕ್ಷಿಸಿದ್ದಾರೆ. ಆದರೆ, ಸಾಯಿ ಪಲ್ಲವಿ ನಿಜಕ್ಕೂ ನಿರ್ವಹಿಸುತ್ತಿರುವ ಪಾತ್ರ ಯಾವುದು. ಚೈತ್ರಾ ಜೆ ಆಚಾರ್ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಕತೆಗಳೊಳಗೆ ಕತೆ ಇದೆಯಾ...ಸಾಯಿ ಪಲ್ಲವಿ ಅವರ ನಂತರ ಚೈತ್ರಾ ಜೆ ಆಚಾರ್​ರ ಎಂಟ್ರಿಯಾಗುತ್ತದೆಯಾ ಎನ್ನುವ ಕುತೂಹಲಕಾರಿ ಪ್ರಶ್ನೆಗಳನ್ನು ಪ್ರೇಕ್ಷಕರು ಹೊರ ಹಾಕುತ್ತಿದ್ದಾರೆ.

ನೆಟ್ಟಿಗರು ಏನಂತಿದ್ದಾರೆ?

ಸಾಯಿ ಪಲ್ಲವಿ ಅವರ ಹೊಸ ಲುಕ್​​ ಮತ್ತು ಪಾತ್ರದ ಆಯ್ಕೆ ಬಗ್ಗೆ ನಟಿ ಫ್ಯಾನ್ಸ್ ಹಾಗೂ ಸಿನಿಮಾ ಪ್ರೇಮಿಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದು ಹೀಗೆ, ಶಾರ್ಟ್ ಹೇರ್ ಲುಕ್‌ನಲ್ಲಿ ಸಾಯಿ ಪಲ್ಲವಿ ಇದೊಂದು ಅನಿರೀಕ್ಷಿತ ಬದಲಾವಣೆ, ಆದರೆ ಅವರು ಈ ಲುಕ್​ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಮಣಿರತ್ನಂ ಅವರ 'ಇಂಜಿ ವೆಲ್ಲಂ' ಚಿತ್ರದ 'ಆಚಿ ಆಚಿ' ಹಾಡು ಬಿಡುಗಡೆಯಾಗಿದೆ. ಸಾಯಿ ಪಲ್ಲವಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಹಾಡು ಕೋಲ್ಕತ್ತಾ ಹಿನ್ನೆಲೆಯ ಪ್ರೇಮಕಥೆಯ ಸುಳಿವು ನೀಡುತ್ತಿದೆ. ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಯೌವನದಿಂದ ಪೋಷಕರಾಗುವವರೆಗಿನ ಪಯಣವನ್ನು ಸಿನಿಮಾ ತೋರಿಸುತ್ತದೆ. ಅಮರ ಪ್ರೇಮಕಥೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಮತ್ತೊಬ್ಬ ಬಳಕೆದಾರರು ಪೋಸ್ಟ್ ಹಂಚಿಕೊಂಡಿದ್ದಾರೆ.

ಅದ್ಭುತ! ಸಾಯಿ ಪಲ್ಲವಿ ತಮ್ಮ ಶಾರ್ಟ್ ಹೇರ್ ಲುಕ್ ಅನ್ನು ಬಹಳ ಸುಂದರವಾಗಿ ಕ್ಯಾರಿ ಮಾಡಿದ್ದಾರೆ. 'ಇಂಜಿ ವೆಲ್ಲಂ' ಮಣಿರತ್ನಂ ಅವರ ಕ್ಲಾಸಿಕ್ ಲವ್ ಸ್ಟೋರಿಯಾಗಲಿ ಎಂದು ತಿಳಿಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, 'ಸಾಯಿ ಪಲ್ಲವಿ ಶಾರ್ಟ್ ಹೇರ್ ಲುಕ್ ತುಂಬಾ ಇಷ್ಟವಾಯಿತು. ಎ.ಆರ್. ರೆಹಮಾನ್ ಅವರ ಮ್ಯಾಜಿಕ್ ಮತ್ತೆ ಮರಳಿದೆ. ಈ ತಮಿಳು ಹಾಡಿನಲ್ಲಿ ಮಲಯಾಳಂ ಸಾಹಿತ್ಯ ಬೆರೆತಿರುವ ರೀತಿ ಮೈನವಿರೇಳಿಸುತ್ತದೆ. ಮಣಿರತ್ನಂ ಸರ್ ಅವರಿಂದ ಮತ್ತೊಂದು ಮಾಸ್ಟರ್‌ಪೀಸ್ ಸಿನಿಮಾ ಸಿದ್ಧವಾಗುತ್ತಿದೆ' ಎಂದು ಕಾಮೆಂಟ್ ಮಾಡಿದ್ದಾರೆ.

ಗರ್ಭಿಣಿಯ ಪಾತ್ರದಲ್ಲಿ ಸಾಯಿ ಪಲ್ಲವಿ ಅವರ ಫ್ರೆಶ್ ಲುಕ್ ಮತ್ತು ಎನರ್ಜಿಟಿಕ್ ಡ್ಯಾನ್ಸ್ ಕಣ್ಣಿಗೆ ಹಬ್ಬವಾಗಿದೆ. ಮಣಿರತ್ನಂ ಮತ್ತು ಎ.ಆರ್. ರೆಹಮಾನ್ ಕಾಂಬಿನೇಷನ್‌ನಲ್ಲಿ ತಮಿಳು-ಮಲಯಾಳಂ ಫ್ಯೂಷನ್‌ನ ಅದ್ಭುತ ಹಾಡು ಮೂಡಿಬಂದಿದೆ ಎಂದಿದ್ದಾರೆ.

ಇಂಜಿ ವೆಲ್ಲಂ ಸಿನಿಮಾ ಬಗ್ಗೆ

ಇಂಜಿ ವೆಲ್ಲಂ ಮೂಲಕ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವುದು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ವರದಿಗಳ ಪ್ರಕಾರ, ಚಿತ್ರದ ಬಹುಪಾಲು ಚಿತ್ರೀಕರಣ ಕೋಲ್ಕತ್ತಾದಲ್ಲಿ ನಡೆದಿದೆ. ಸದ್ಯಕ್ಕೆ ಚಿತ್ರತಂಡವು ಪಾತ್ರಗಳು ಮತ್ತು ಕಥಾಹಂದರದ ಕುರಿತು ಹೆಚ್ಚಿನ ಮಾಹಿತಿಯನ್ನು ಗೌಪ್ಯವಾಗಿಟ್ಟಿದೆ.

ಮಣಿರತ್ನಂ ಮತ್ತು ಎ.ಆರ್. ರೆಹಮಾನ್ ಜೋಡಿ ಈ ಹಿಂದೆ ಅನೇಕ ಯಶಸ್ವಿ ಚಿತ್ರಗಳನ್ನು ನೀಡಿದ್ದು, ಈ ಸಿನಿಮಾದ ಮೂಲಕ ಮತ್ತೊಮ್ಮೆ ಒಂದಾಗಿದ್ದಾರೆ. ಚಿತ್ರಕ್ಕೆ ಅವಿಕ್ ಮುಖೋಪಾಧ್ಯಾಯ ಅವರ ಛಾಯಾಗ್ರಹಣವಿದ್ದು, ಶ್ರೀಕರ್ ಪ್ರಸಾದ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಭಾಸ್ಕರನ್, ಮಣಿರತ್ನಂ ಮತ್ತು ಶಿವ ಅನಂತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ, (ಏಜೆನ್ಸೀಸ್).