'ಕನ್ನಡ ಗೊತ್ತಿಲ್ಲ' ಎಂದ ಸಾಯಿ ಪಲ್ಲವಿ ವಿರುದ್ಧ ಕಿಡಿಕಾರಿದ ಕನ್ನಡಿಗರು.
ಬಡಗ ಸಮುದಾಯಕ್ಕೆ ಸೇರಿದವರಾದ ಇವರಿಗೆ ಕನ್ನಡ ಬರಲ್ಲ ಅಂದ್ರೆ ನಂಬಬೇಕಾ? ಎಂದ ನೆಟ್ಟಿಗರು.
ರಾಮಾಯಣ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಕನ್ನಡ ಮಾತನಾಡಿದ್ಯಾಕೆ ಎಂದು ಕಿಡಿ.
sai pallavi about kannada: ರಾಮಾಯಣ ಪ್ರಚಾರ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಬಂದಿದ್ದ ಸಾಯಿ ಪಲ್ಲವಿ ಅವರು, 'ಇಲ್ಲಿ ಬಂದಿರೋದು ನನಗೆ ತುಂಬಾ ಸಂತೋಷವಾಗುತ್ತದೆ' ಎಂದು ಕನ್ನಡದಲ್ಲಿ ಮಾತು ಆರಂಭಿಸಿದ್ದರು. 'ಗಾರ್ಗಿ' ಸಿನಿಮಾಕ್ಕಾಗಿ ಕನ್ನಡ ಕಲಿತಿದ್ದಾಗಿ ಹೇಳಿಕೊಂಡಿದ್ದರು. ಆದರೆ, ಈಗ ಜಗಪತಿ ಬಾಬು ಅವರ ಪಾಡ್ಕಾಸ್ಟ್ನಲ್ಲಿ 'ಕನ್ನಡವೇ ಗೊತ್ತಿಲ್ಲ' ಎಂದಿರುವುದು ಸದ್ಯ ಕನ್ನಡಿಗರ ಸಿಟ್ಟಿಗೆ ಕಾರಣವಾಗಿದೆ. ನಟಿ ಡಬಲ್ ಸ್ಟ್ಯಾಂಡರ್ಡ್ ಮೈಂಡ್ಸೆಟ್ ಹೊಂದಿದ್ದಾರೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ನಟಿ ಸಾಯಿಪಲ್ಲವಿ ಅವರ ನಡೆ, ನುಡಿ. ನ್ಯಾಚುರಲ್ ಮೇಕಪ್ ಎಲ್ಲರಿಗೂ ತುಂಬಾನೆ ಇಷ್ಟವಾಗುತ್ತದೆ. ಅವರಿಗೆ ಕರ್ನಾಟಕದಲ್ಲಿ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಸಾಯಿ ಪಲ್ಲವಿಯನ್ನ ಇಷ್ಟಪಡಲು ಕಾರಣ ಅವರ ಡ್ರೆಸ್ ಸೆನ್ಸ್ ಕೂಡ ಒಂದು. ಆದರೆ, ಸದ್ಯ ಕನ್ನಡಿಗರು ನಟಿ ವಿರುದ್ಧ ಸಿಕ್ಕಾಪಟ್ಟೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅವರು ಜಗಪತಿ ಬಾಬು ಅವರೊಂದಿಗೆ ಮಾತನಾಡಿದ ವಿಡಿಯೋ ತುಣುಕುಗಳು ವೈರಲ್ ಆಗಿದೆ.
ರಾಮಾಯಣ ಸಿನಿಮಾದ ಪ್ರಚಾರದ ಭಾಗವಾಗಿ ತೆಲುಗಿನ ಜನಪ್ರಿಯ ಟಾಕ್ ಶೋ ಜಯಮ್ಮು ನಿಶ್ಚಯಮ್ಮು ರಾ' ಸೀಸನ್ 2ದಲ್ಲಿ ಪಾಲ್ಗೊಂಡಿದ್ದರು. ಶೋದಲ್ಲಿ ಸಾಯಿ ಪಲ್ಲವಿ ಅವರ ಬಳಿ ನಟ ಜಗಪತಿ ಬಾಬು ಅವರು, 'ನಿಮಗೆ ಯಾವ್ಯಾವ ಭಾಷೆ ಬರುತ್ತದೆ' ಎಂದು ಕೇಳುತ್ತಾರೆ. ಆಗ ಉತ್ತರಿಸಿದ ಸಾಯಿ ಪಲ್ಲವಿ 'ನನಗೆ ತೆಲುಗು, ಮಲಯಾಳಂ ಮ್ಯಾನೇಜ್ ಮಾಡ್ತೇನೆ. ತಮಿಳು ಬರುತ್ತದೆ. ಹಿಂದಿ ಸಹ' ಎಂದು ಹೇಳುತ್ತಾರೆ.
ಈವೇಳೆ ನಟ ಜಗಪತಿ ಬಾಬು ಆಗ 'ಒಂದು ಲೈನ್ನ್ನ ಎಲ್ಲ ಭಾಷೆಯಲ್ಲೂ ಹೇಳಿ' ಎನ್ನುತ್ತಾರೆ. ಸುಗಮಾಣೋ ಮಲಯಾಳಂನಲ್ಲಿ, ನಲ್ಲ ಇರಕ್ಕೀಂಗ್ಲಾ ತಮಿಳಿನಲ್ಲಿ, ಬಾವುನ್ನಾರ ತೆಲುಗಿನಲ್ಲಿ ಹಾಗೂ ಹಿಂದಿಯಲ್ಲಿ ಅಬ್ ಟೀಕೋ, ಬಡಿಗದಲ್ಲಿ ಒಳ್ಳೆಇದಿರ'...ಎನ್ನುತ್ತಾರೆ. ಆಗ ನಟ ಕನ್ನಡ ಎನ್ನುತ್ತಾರೆ. 'ಕನ್ನಡ ಐ ಡೋಂಟ್ ನೋ' ಎನ್ನುತ್ತಾರೆ. ಆಗ ಜಗಪತಿ ಬಾಬು ಜೋರಾಗಿ ನಕ್ಕು 'ಹಹ್ಹಹ್ಹಾ ಕನ್ನಡ ಬರಲ್ಲ ಅಂತೆ ನೋಟ್ ಮಾಡ್ಕೊಳಿ' ಎನ್ನುತ್ತಾರೆ
ಬೆಂಗಳೂರಿಗೆ ರಾಮಾಯಣ ಪ್ರಚಾರಕ್ಕೆ ಬಂದು ಕನ್ನಡದಲ್ಲಿ ಮಾತನಾಡಿದ್ದು ಇದೆ. 'ಎಲ್ಲರಿಗೂ ನಮಸ್ಕಾರ, ಇಲ್ಲಿ ಬಂದಿರೋದು ನನಗೆ ತುಂಬಾ ಸಂತೋಷವಾಗುತ್ತದೆ' ಎಂದು ತಮ್ಮ ಮಾತನ್ನು ಆರಂಭಿಸಿದ್ದರು. ಆದರೆ ಅವರು ಪಾಡ್ಕಾಸ್ಟ್ನಲ್ಲಿ 'ಕನ್ನಡನೇ ಗೊತ್ತಿಲ್ಲ' ಎಂದಿರುವುದು ಟೀಕೆಗೆ ಕಾರಣವಾಗಿದೆ.
2022ರಲ್ಲಿ ಬಿಡುಗಡೆಯಾದ ಗಾರ್ಗಿ ಸಿನಿಮಾಕ್ಕಾಗಿ ಕನ್ನಡ ಕೊಟ್ಟಿದ್ದಾರೆ. ಹಲವು ಪದ ಕನ್ನಡದಲ್ಲಿ ಮಾತನಾಡಿದ್ದಾರೆ.ಈ ಹಿಂದೆ ಗಾರ್ಗಿ ಸಿನಿಮಾಕ್ಕಾಗಿ ಅವರು ಕನ್ನಡ ಕಲಿತ ಬಗ್ಗೆ ಹೇಳಿದ್ದರು. ಲ, ಣ ಉಚ್ಛರಿಸಲು ಕಷ್ಟ ಆಗ್ತಿತ್ತು. ಆದರೂ ಕಲಿತು ಮಾತನಾಡಿದ ಬಗ್ಗೆ ಅವರು ಹೆಮ್ಮೆ ಪಟ್ಟುಕೊಂಡಿದ್ದರು. ಇನ್ನೂ ಸಿನಿಮಾ ತಂಡ 'ಸಾಯಿ ಪಲ್ಲವಿ ಅವರೇ ಕನ್ನಡ ಕಲಿತಿದ್ದಾರೆ, ಕನ್ನಡ ಪದ ಉಚ್ಛಾರ ಮಾಡುವುದು ಸಾಯಿ ಪಲ್ಲವಿಗೆ ಸುಲಭ ಇರಲಿಲ್ಲ' ಎಂದು ನಾನಾ ಸಂದರ್ಶನದಲ್ಲಿ ಹೇಳಿಕೆ ಕೊಟ್ಟಿದ್ದರು. ಆದರೆ, ಬಡಗ ಸಮುದಾಯದ ಈಕೆಗೆ ಕನ್ನಡ ಬರಲ್ಲ ಅನ್ನುತ್ತಿರೋದ್ಯಾಕೆ ಎಂದು ಸದ್ಯ ಕನ್ನಡಿಗರು ಕಿಡಿಕಾರುತ್ತಿದ್ದಾರೆ.
'ಎಲ್ಲ ಭಾಷೆ ಸ್ವಲ್ಪ ಸ್ವಲ್ಪ ಬರುತ್ತೆ ಅಂತೆ ಕನ್ನಡ ಅಂದ್ರೆ i dont knowಅಂತೆ ರಾಮಾಯಣ ಚಿತ್ರದ ನಟಿ ಸಾಯಿ ಪಲ್ಲವಿ ಈಕೆಯ ಮಾತೃ ಭಾಷೆ ಬಡಗ ಅಂತ ತಮಿಳು ಹಾಗೂ ಕನ್ನಡ ಮಿಶ್ರಿತ ಭಾಷೆ ಇದು ನೀಲಗಿರಿ ಅಂದ್ರೆ ಊಟಿ ಯಲ್ಲಿ ಹೆಚ್ಚಾಗಿ ಬಳಸುತ್ತಾರೆ.. ಇಂಥವರಿಗೆ ಕನ್ನಡ ಅಂದ್ರೆ ಯಾಕೆ ಹೀಗೆ ನಿಷ್ಠುರ' ಎಂದು ಪ್ರದೀಪ್ ಎಂಬುವವರು ಕಿಡಿಕಾರಿದ್ದಾರೆ.
ಮತ್ತೊಬ್ಬ ಫೇಸ್ಬುಕ್ ಬಳಕೆದಾರರು ಕಾಮೆಂಟ್ ಮಾಡಿದ್ದು, ಈಕೆಗೆ ವಿವಾದ ಅನ್ನೋದು ಹೊಸದಲ್ಲ ಈ ಹಿಂದೆ ಒಮ್ಮೆ ಹಿಂದಿ ಭಾಷೆಯ ವಿಚಾರದಲ್ಲಿ, ಏಕ್ ದಿನ್ ಚಿತ್ರ ಪ್ರಚಾರ 2026, ಕಾಶ್ಮೀರಿ ಪಂಡಿತರ ವಿಚಾರದಲ್ಲಿ 2022ರಲ್ಲಿ, ಭಾರತೀಯ ಸೈನಿಕರ ವಿಚಾರದಲ್ಲಿ 2022ರಲ್ಲಿ, ಈಗ ಒಂದು ಪ್ರಾದೇಶಿಕ ನುಡಿ ಕನ್ನಡದ ವಿಚಾರದಲ್ಲಿ 2026 , ಈಗೆಯೇ ಭಾರತೀಯರ ಗುಂಡಿಗೆಗೆ ನೋವು ಮಾಡ್ತಾನೆ ಇರ್ತಾರೆ.
ಭಾಷೆ ಗೊತ್ತಿಲ್ಲ ಅಂದ್ರೆ ಸಹಿಸುತ್ತಾರೆ ಆದರೆ ಗೊತ್ತಿದ್ದು ಗೊತ್ತಿಲ್ಲ ಅಂದ್ರೆ ಎಂದಿಗೂ ಕ್ಷಮಿಸುವುದಿಲ್ಲ. ಇವರಮಾತೃ ಭಾಷೆ ಬಡಗ ಕನ್ನಡ ಈಕೆಗೆ ಕನ್ನಡ ಭಾಷೆ ಚೆನ್ನಾಗೇ ಗೊತ್ತು ತುಂಬಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಆದರೆ ಕನ್ನಡಿಗರನ್ನು ಕೆಣಕಲು ವಿವಾದದಿಂದಿರಲು ಈ ರೀತಿ ಹೇಳಿಕೆ ನೀಡಿದ್ದಾರ ಗೊತ್ತಿಲ್ಲ ಕನ್ನಡ ಗೊತ್ತಿಲ್ಲ ಅನ್ನೋ ಈಕೆ ರಾಮಾಯಣ ಸಿನಿಮಾ ಪ್ರಚಾರದಲ್ಲಿ ನನ್ನ ಸಿನಿಮಾ ನೋಡಿ ಅಂತ ಕೇಳಿಕೊಂಡಿದ್ದು ಯಾಕೆ ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್).