ಕಲ್ಕಿ 2898 AD Part 2 ಸಿನಿಮಾದ ಸುಮತಿ ಪಾತ್ರಕ್ಕೆ ನಟಿ ಸಾಯಿಪಲ್ಲವಿ ಆಯ್ಕೆ
ಸಂಭಾವನೆ, ಸಮಯ ಸೇರಿದಂತೆ ಹಲವು ವಿಚಾರದಿಂದ ಹೊರನಡೆದಿದ್ದ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಅವರು ನಿರ್ವಹಿಸಿದ ಸುಮತಿ ಪಾತ್ರಕ್ಕೆ ನಟಿ ಸಾಯಿಪಲ್ಲವಿ ಫೈನಲ್?
Sai Pallavi To Replace Deepika Padukone In Kalki 2898 AD Part 2 : ಕಲ್ಕಿ 2898 AD Part 2 ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರನಡೆದಿದ್ದಾರೆ. ಅವರು ನಿರ್ವಹಿಸುತ್ತಿದ್ದ ಸುಮತಿ ಪಾತ್ರಕ್ಕೆ ಯಾವ ನಟಿ ಆಯ್ಕೆಯಾಗಿದ್ದಾರೆ ಎನ್ನುವ ಸಾಕಷ್ಟು ಪ್ರಶ್ನೆಗಳು ಹಲವರಲ್ಲಿ ಮೂಡಿತ್ತು. ಆಲಿಯಾ ಭಟ್, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರ ಹೆಸರು ಕೇಳಿ ಬಂದಿತ್ತು. ಆದರೆ, ಸದ್ಯ ಸಾಯಿ ಪಲ್ಲವಿ ಅವರನ್ನು ಈ ಪಾತ್ರಕ್ಕೆ ಫೈನಲ್ ಮಾಡಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 AD Part 2 ಸಿನಿಮಾದ ಚಿತ್ರೀಕರಣ ಶೇ.30ರಷ್ಟು ಮುಗಿದಿದೆ. ಅಮಿತಾಬ್ ಬಚ್ಚನ್ ಅವರ ಪ್ರಮುಖ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಆದರೆ, ಮೊದಲ ಪಾರ್ಟ್ನಲ್ಲಿದ್ದ ದೀಪಿಕಾ ಪಡುಕೋಣೆಯವರು 2898 AD Part 2ನಿಂದ ಹೊರನಡೆದಿದ್ದಾರೆ. ಸದ್ಯ ಅವರ SUM-80 ಅಲಿಯಾಸ್ ಸುಮತಿ ಪಾತ್ರಕ್ಕೆ ನಟಿಯರು ಯಾರು ಆಯ್ಕೆಯಾಗಿದ್ದಾರೆ ಎನ್ನುವ ಗೊಂದಲಕ್ಕೆ ಸ್ಪಷ್ಟನೆ ಮಾತ್ರ ಚಿತ್ರ ತಂಡದಿಂದ ಸಿಕ್ಕಿಲ್ಲ.
ದೀಪಿಕಾ ಪಡುಕೋಣೆ ಕ್ಯಾತೆ ಏನು?
ಸಂಭಾವನೆ, ಮಾತೃತ್ವದ ರಜೆ, ಕೆಲಸದ ಸಮಯ ಬದಲಾವಣೆ ಹಾಗೂ ನಿರ್ಮಾಪಕರೊಂದಿಗಿನ ಒಪ್ಪಂದದ ವಿಚಾರಗಳಲ್ಲಿ ವೈಮನಸ್ಸು ಉಂಟಾದ ಬೆನ್ನಲ್ಲೇ, ದೀಪಿಕಾ ಅವರು ಕಲ್ಕಿ ಸಿನಿಮಾದ ಎರಡನೇ ಭಾಗದಿಂದ ಹೊರನಡೆದರು. ಜೊತೆಗೆ ಪ್ರಭಾಸ್ ನಟನೆಯ, ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನದ ಸ್ಪಿರಿಟ್ ಸಿನಿಮಾದಲ್ಲಿಯೂ ನಟಿಸಲ್ಲ ಎನ್ನುವ ಸ್ಪಷ್ಟನೆ ಸಿಕ್ಕಿತ್ತು. ಅನಿಮಲ್ ಸಿನಿಮಾದಲ್ಲಿಯೂ ಅವರನ್ನು ಕೈಬಿಟ್ಟು ತ್ರಿಪ್ತಿ ದಿಮ್ರಿ ಅವರನ್ನು ಆಯ್ಕೆ ಮಾಡಲಾಗಿತ್ತು ಎನ್ನುವ ಚರ್ಚೆಗಳು ಇವೆ. ಇದಕ್ಕೆಲ್ಲ ಅವರ ಭಾರಿ ಬೇಡಿಕೆಯೇ ಕಾರಣ ಎನ್ನುವ ಚರ್ಚೆಗಳು ಇವೆ.
ಆರಂಭದಲ್ಲಿ ಈ ಸುಮತಿ ಪಾತ್ರವನ್ನು ಆಲಿಯಾ ಭಟ್ ನಿರ್ವಹಿಸಲಿದ್ದಾರೆ ಎನ್ನುವ ಚರ್ಚೆ ಇತ್ತು. ಅದಾದ ನಂತರ ಇಲ್ಲ ನ್ಯಾಶನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರು ಈ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ, ಈಗ ಎಲ್ಲ ಊಹಾಪೋಹಕ್ಕೆ ತೆರೆ ಬೀಳುವಂತೆ ಸೌತ್ ಇಂಡಿಯಾದ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ ಅವರೇ ಸುಮತಿ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ ಎನ್ನುವುದು ಚರ್ಚೆಯಾಗುತ್ತಿದೆ. ಆದರೆ ಸಿನಿಮಾ ತಂಡ ಮಾತ್ರ ಸಾಯಿಪಲ್ಲವಿ ಅವರೇ ಈ ಸಿನಿಮಾಕ್ಕೆ ಫೈನಲ್ ಮಾಡಲಾಗಿದೆ ಎನ್ನುವ ಅಧಿಕೃತ ಮಾಹಿತಿ ನೀಡುತ್ತಿಲ್ಲ.
ಇದನ್ನೂ ಓದಿ: ರಿಲೀಸ್ಗೂ ಮುನ್ನವೇ ಗಿನ್ನೆಸ್ ದಾಖಲೆ ಬರೆದ ರಾಕಾ; ಹೆಮ್ಮೆಯ ಕ್ಷಣ ಹಂಚಿಕೊಂಡ ಅಲ್ಲು ಅರ್ಜುನ್..Raaka
ಸಾಯಿ ಪಲ್ಲವಿ ಯಾವುದೇ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ಜೀವಂತಿಕೆ ತುಂಬುವ ನಟಿ. ಕ್ಲಾಸಿ, ಡಿ ಗ್ಲಾಮ್, ಟೀಚರ್, ಹಳ್ಳಿ ಹುಡುಗಿ, ವೈದ್ಯಯಾಗಿ ಇಲ್ಲಿಯವರೆಗೂ ಹಲಾವಾರು ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ,. ಅದಿರನ್ ಸಿನಿಮಾದಲ್ಲಿ ಕಲರಿ ಪಟು ಆಗಿ ಪಾತ್ರ ನಿರ್ವಹಿಸಿದ್ದರು.
ಜಾತಿ ರತ್ನಾಲು ಸಿನಿಮಾ ಮತ್ತು ಪಿಟ್ಟ ಕತಲು ವೆಬ್ಸೀರಿಸ್ನಂತಹ ಹಿಟ್ ಕತೆಗಳನ್ನು ನಾಗ್ ಅಶ್ವಿನ್ ಅವರು ಭಾರತೀಯ ಸಿನಿಮಾ ರಂಗಕ್ಕೆ ಕೊಟ್ಟಿದ್ದಾರೆ. ಸಿಂಗ್ ಗೀತಮ್, ಮಹಾನಟಿ, ಸಿಂಗ್ ಗೀತಮ್, ಯೆವಡೆ ಸುಬ್ರಮಣ್ಯಂ, ಕಲ್ಕಿ ಪಾರ್ಟ್ 1 ಸಿನಿಮಾಗಳನ್ನು ಟಾಲಿವುಡ್ಗೆ ಕೊಟ್ಟಿದ್ದಾರೆ.
ಸಾಯಿಪಲ್ಲವಿ ನಟನೆಯ, ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ದೀಪಾವಳಿ ವೇಳೆಗೆ ರಿಲೀಸ್ ಆಗಲಿದೆ. ಈಗಾಗಲೇ ಸಿನಿಮಾದ ಹಾಡು, ಟ್ರೇಲರ್ ಸಾಕಷ್ಟು ಕುತೂಹಲವನ್ನು ಹೆಚ್ಚಿಸಿದೆ. ಮಣಿರತ್ನಂ ಅವರು ರೊಮ್ಯಾಂಟಿಕ್ ಸಿನಿಮಾದತ್ತ ಮುಖ ಮಾಡಿದ್ದು, ಅವರು ಆಕ್ಷನ್ ಕಟ್ ಹೇಳಿರುವ ಇಂಜಿ ವೆಲ್ಲಮ್ ಸಿನಿಮಾವು 2027 ಜನವರಿಗೆ ರಿಲೀಸ್ ಆಗಲಿದೆ, (ಏಜೆನ್ಸೀಸ್).