ಸಾಯಿ ಪಲ್ಲವಿ 
ಸಿನಿವಾಣಿ

'ಅಡುಗೆ ಮಾಡ್ಲಿಕ್ಕೆ ಗೊತ್ತಿರಬೇಕು..ತಪ್ಪುತಿದ್ದಿಕೊಳ್ಳುವ ಗುಣವಿರಬೇಕು'; ಸಾಯಿ ಪಲ್ಲವಿ ಮದುವೆಯಾಗುವ ಹುಡುಗ ಹೀಗಿರಬೇಕಂತೆ..Sai Pallavi

  • ಸಾಯಿ ಪಲ್ಲವಿ ಮದುವೆಯಾಗುವ ಹುಡುಗನ ಗುಣ ಲಕ್ಷಣ ಹೀಗಿರಬೇಕಂತೆ!.

  • 'ಕೌನ್ ಬನೇಗಾ ಕರೋಡ್‌ಪತಿ' ಸೀಸನ್ 18ರಲ್ಲಿ ಮದುವೆಯಾಗುವ ಹುಡುಗನ ಗುಣಗಳ ಬಗ್ಗೆ ಸಾಯಿ ಪಲ್ಲವಿ ಮಾತು.

  • ತಪ್ಪು ಮಾಡಿ ಬೇರೆಯವರ ಮೇಲೆ ಹೊರಿಸ ಬಾರದು, ಒಳ್ಳೆಯ, ಪ್ರಾಮಾಣಿಕ ಮನುಷ್ಯನಾಗಿರಬೇಕು ಎಂದ ನಟಿ.

ದೇಶ-ವಿದೇಶದಲ್ಲಿ ಸದ್ಯ ಬಹು ಬಜೆಟ್​ ಸಿನಿಮಾ ರಾಮಾಯಣ ಹವಾ ಕ್ರಿಯೇಟ್ ಮಾಡಿದೆ. ಇತ್ತೀಚೆಗೆ ಸಿನಿಮಾವು ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿ ಮೊದಲ ಪ್ರದರ್ಶನ ನಡೆದಿತ್ತು. ಒಂದು ಕಡೆ ಸಿನಿಮಾದ ಬಗ್ಗೆ, ದೃಶ್ಯ ವೈಭವದ ಬಗ್ಗೆ ಮಾತುಗಳು ಕೇಳು ಬರುತ್ತಿದ್ದರೆ, ಮತ್ತೊಂದು ಕಡೆ ಭಾರಿ ಗಮನ ಸೆಳೆಯುತ್ತಿರುವುದು ಕೌನ್​ ಬನೇಗಾ ಕರೋಡ್​ ಪತಿಯಲ್ಲಿ ತಮ್ಮ ಹುಡುಗ ಹೇಗಿರಬೇಕು ಎಂದು ಮಾತನಾಡಿರುವುದು.

ಹೌದು,'ಕೌನ್ ಬನೇಗಾ ಕರೋಡ್‌ಪತಿ' ಸೀಸನ್ 18 ರ ದೀಪಾವಳಿ ವಿಶೇಷ ಸಂಚಿಕೆಯಲ್ಲಿ ರಾಮಾಯಣ ತಂಡ ಭಾಗಿಯಾಗಿತ್ತು. ರಣಬೀರ್ ಕಪೂರ್ ಮತ್ತು ರವಿ ದುಬೆ ಅವರೊಂದಿಗೆ ಸಾಯಿ ಪಲ್ಲವಿ ಭಾಗಿಯಾಗಿದ್ದರು. ಸಾಯಿ ಪಲ್ಲವಿ ಅವರು ಅಮಿತಾ ಬಚ್ಚನ್​ ಅವರೊಂದಿಗೆ ಪ್ಯಾನಲ್​ನಲ್ಲಿದ್ದರು. ರಸಪ್ರಶ್ನೆ ಕಾರ್ಯಕ್ರಮದ ವೇಳೆ ಸಾಯಿ ಪಲ್ಲವಿ ತಮ್ಮ ಜೀವನ ಸಂಗಾತಿಯಲ್ಲಿರಬೇಕಾದ ಗುಣಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.

ಹೀಗಿರಬೇಕಂತೆ ಸಾಯಿ ಪಲ್ಲವಿಯ ಹುಡುಗ

ನಾನು ಇಷ್ಟ ಪಡುವ ವ್ಯಕ್ತಿಯು ಮೊದಲು ಒಳ್ಳೆಯ ಮನುಷ್ಯರಾಗಿರಬೇಕು. ಅವರು ಹೆಚ್ಚು ಸ್ವಾರ್ಥಿಯಾಗಿರಬಾರದು. ಅವರಿಗೆ ತಮ್ಮದೇ ಆದ ಆಂತರಿಕಾವಲೋಕನ ಇರಬೇಕು. ತಮ್ಮ ತಪ್ಪು-ಒಪ್ಪುಗಳನ್ನು ತಾವೇ ಪರಿಶೀಲಿಸಿಕೊಳ್ಳುವ ಗುಣವಿರಬೇಕು. ಒಟ್ಟಿನಲ್ಲಿ ಜೀವನದಲ್ಲಿ ತಮ್ಮ ಸ್ಥಾನವೇನು ಎಂಬ ಅರಿವು ಅವರಿಗೆ ಇರಬೇಕು. ತಪ್ಪು ಎಲ್ಲರೂ ಮಾಡುತ್ತಾರೆ ಸಹಜ. ಆದರೆ, ಅವರಿಗೆ ಅದನ್ನು ತಿದ್ದಿಕೊಳ್ಳುವ ಗುಣ ಇರಬೇಕು. ತಮ್ಮ ತಪ್ಪುಗಳನ್ನು ಬೇರೆಯವರ ಮೇಲೆ ಹೊರಿಸುವವರಾಗಿರಬಾರದು. ಇದು ದೊಡ್ಡ ಪಟ್ಟಿಯೇನಲ್ಲ, ಆದರೆ ಅವರು ಒಳ್ಳೆಯ ವ್ಯಕ್ತಿಯಾಗಿರಬೇಕು ಅಡುಗೆ ಮಾಡುವುದೂ ತಿಳಿದಿದ್ದರೆ ಒಳ್ಳೆಯದು ಎಂದರು ನಸುನಗುತ್ತಾ ಸಾಯಿ ಪಲ್ಲವಿ.

ರಾಮಾಯಣ ಸಿನಿಮಾ ಬಗ್ಗೆ

ರಾಮಾಯಣ ಸಿನಿಮಾವು ಬರೋಬ್ಬರಿ 4,000 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ನಿತೀಶ್​ ತಿವಾರಿ ನಿರ್ದೇಶನದ ಈ ಸಿನಿಮಾವು ದೀಪಾವಳಿಯ ಮುನ್ನ ಅಂದರೆ 2026ರ ನವೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಆದರೆ, ಲಾಸ್​ ಏಂಜಲೀಸ್​ನಲ್ಲಿ ಮಾತನಾಡಿದ ಸಾಯಿ ಪಲ್ಲವಿ ಸಿನಿಮಾ ಶೂಟಿಂಗ್ ಇನ್ನೂ ಶುರುವಾಗಿಲ್ಲ ಎಂದು ಹೇಳಿರುವುದು ಚರ್ಚೆಗೆ ಕಾರಣವಾಗಿತ್ತು.

ಸೀತಾ ಪಾತ್ರದ ಬಗ್ಗೆ ಸಾಯಿಪಲ್ಲವಿ ಹೇಳಿದ್ದಿಷ್ಟು

ಸೀತಾ ಪಾತ್ರೆಯನ್ನು ಮಾಡುವಾಗ ನಾನು ಬುದ್ಧಿ ಪ್ರಯೋಗಿಸಿಲ್ಲ. ಪಾತ್ರಕ್ಕೆ ನಾನೇನು ಕೊಡಬಲ್ಲೆ. ಪಾತ್ರವನ್ನು ನಿರ್ವಹಿಸುವುದರಿಂದ ನನಗೆ ಸಿಗುವ ಜ್ಞಾನವೇನು? ಎನ್ನುವುದನ್ನು ಯೋಚಿಸಿದ್ದೆ. ನಾನು ಯಾವುದರ ಬಗ್ಗೆಯೂ ಹೆಚ್ಚು ಯೋಚಿಸಲು ಬಯಸಲಿಲ್ಲ. ಸೀತಾ ಮಾತೆಯನ್ನು ಪ್ರಾರ್ಥಿಸಿ ಮುಂದೆ ಸಾಗಿದೆ ಎಂದು ಹೇಳಿಕೊಂಡಿದ್ದಾರೆ.

ಹುಚ್ಚ ಎಂದುಕೊಂಡಿದ್ದರು

ಸಿನಿಮಾ ನಿರ್ಮಾಣದ ಬಗ್ಗೆ ನಮಿತ್ ಮಲ್ಹೋತ್ರಾ ಅವರು ಪ್ರಖರ್ ಗುಪ್ತಾ ಅವರೊಂದಿಗೆ ಮಾತನಾಡಿ, ನಾವು 6-7 ವರ್ಷಗಳ ಹಿಂದೆ ಇದನ್ನು ಮಾಡಲು ಹೊರಟಾಗ, ಯಾವುದೇ ಭಾರತೀಯ ಚಿತ್ರವು ಈ ಮಟ್ಟಿಗೆ ಇರಲು ಸಾಧ್ಯವಿಲ್ಲ. ಜನರು ನನ್ನನ್ನು ಹುಚ್ಚ ಎಂದುಕೊಂಡಿದ್ದರು. ಸರಳವಾಗಿ ಹೇಳುವುದಾದರೆ, ಎರಡೂ ಭಾಗಗಳಿಗೆ ಸೇರಿ ಒಟ್ಟು ಬಜೆಟ್ ಸುಮಾರು 500 ಮಿಲಿಯನ್ ಡಾಲರ್‌ಗಳಾಗಿದ್ದು, ಇದು 4,000 ಕೋಟಿ ರೂ.ಗಳಿಗೂ ಅಧಿಕವಾಗಿದೆ ಎಂದರು, (ಏಜೆನ್ಸೀಸ್).