ಕಾಲೇಜ್ ಕ್ರಶ್ ಭಾರತಿಯನ್ನು ಮರೆಯದ ಜಕ್ಕಣ್ಣ: ಮೊದಲ ಪ್ರೀತಿ ನೆನೆದು ರೋಚಕ ಸಂಗತಿ ಬಿಚ್ಚಿಟ್ಟ ರಾಜಮೌಳಿ! S S Rajamouli  
ಸಿನಿವಾಣಿ

ಕಾಲೇಜ್ ಕ್ರಶ್ ಭಾರತಿಯನ್ನು ಮರೆಯದ ಜಕ್ಕಣ್ಣ: ಮೊದಲ ಪ್ರೀತಿ ನೆನೆದು ರೋಚಕ ಸಂಗತಿ ಬಿಚ್ಚಿಟ್ಟ ರಾಜಮೌಳಿ! S S Rajamouli

ಪ್ರಮುಖ ಮುಖ್ಯಾಂಶಗಳು

  • ವಿಶ್ವವಿಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ 'ಫಸ್ಟ್ ಲವ್' ನೆನಪು ಮತ್ತೆ ಮುನ್ನೆಲೆಗೆ
  • ತರಗತಿಯ ಹುಡುಗಿ ಭಾರತಿಗೆ ರಾಜಮೌಳಿ ಕೇಳಿದ್ದ ಆ ಒಂದೇ ಒಂದು ಪ್ರಶ್ನೆ ಏನು ಗೊತ್ತಾ
  • ಇಡೀ ವರ್ಷ ಕಾಯ್ದು ಮೊದಲ ಪ್ರೀತಿಯ ಜೊತೆ ರಾಜಮೌಳಿ ಮಾತನಾಡಿದ್ದ ಆ ಒಂದು ಮಾತು
  • ಕಾಲೇಜು ದಿನಗಳ ಪ್ರೇಮ ಕಥೆ ಬಿಚ್ಚಿಟ್ಟ ಜಕ್ಕಣ್ಣ ಆಕೆಯ ನೋಟ ಎಂದಿಗೂ ಮರೆಯಲ್ಲ ಎಂದ ನಿರ್ದೇಶಕ
S S Rajamouli : ವಿಶ್ವ ಚಿತ್ರರಂಗವೇ ಬೆರಗುಗಣ್ಣಿನಿಂದ ನೋಡುವ 'ಪ್ಯಾನ್ ವರ್ಲ್ಡ್' ಸಿನಿಮಾಗಳ ಸೃಷ್ಟಿಕರ್ತ ಎಸ್.ಎಸ್. ರಾಜಮೌಳಿ ಅವರ ಯಶಸ್ಸಿನ ಪಯಣ ಪ್ರತಿಯೊಬ್ಬರಿಗೂ ಪ್ರೇರಣೆ. ಇಂದು ಸ್ಟಾರ್ ನಿರ್ದೇಶಕರಾಗಿ ಮಿಂಚುತ್ತಿರುವ ರಾಜಮೌಳಿ, ಅಂದು ಪ್ರತಿಯೊಬ್ಬ ಸಾಮಾನ್ಯ ಯುವಕನಂತೆ ಪ್ರೀತಿಯ ಸೆಳೆತಕ್ಕೆ ಒಳಗಾಗಿದ್ದರಂತೆ! ತಮ್ಮ ಮೊದಲ ಪ್ರೀತಿಯ ಬಗ್ಗೆ ರಾಜಮೌಳಿ ಹಂಚಿಕೊಂಡ ಆ ಅಪರೂಪದ ಹಳೆಯ ನೆನಪು ಇಲ್ಲಿದೆ ನೋಡಿ.
ಸ್ಟಾರ್​ ನಿರ್ದೇಶಕ ಎಸ್.ಎಸ್. ರಾಜಮೌಳಿ ತಮ್ಮ ಕಾಲೇಜು ದಿನಗಳ ಮೊದಲ ಪ್ರೀತಿಯ ನೆನಪನ್ನು ಹಳೆಯ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದು, ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ನಾನು ಇಂಟರ್‌ಮೀಡಿಯೇಟ್ (ಪದವಿ ಪೂರ್ವ ಶಿಕ್ಷಣ) ಓದುತ್ತಿದ್ದಾಗ ನಮ್ಮ ತರಗತಿಯಲ್ಲೊಬ್ಬ ಹುಡುಗಿಯಿದ್ದಳು. ಆಕೆ ತುಂಬಾ ಇಷ್ಟವಾಗುತ್ತಿತ್ತು, ಆದರೆ ಆ ವಿಷಯವನ್ನು ಅವಳ ಬಳಿ ಹೋಗಿ ಹೇಳುವಷ್ಟು ಧೈರ್ಯ ನನಗಿರಲಿಲ್ಲ ಎಂದು ರಾಜಮೌಳಿ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ತಮ್ಮ ನಾಚಿಕೆ ಸ್ವಭಾವದ ಕುರಿತು ಮಾತನಾಡುತ್ತಾ, ನನಗೆ ಆ ಹುಡುಗಿಯ ಮೇಲೆ ಇಷ್ಟವಿದೆ ಎಂಬ ವಿಷಯ ತರಗತಿಯಲ್ಲಿದ್ದ ಉಳಿದೆಲ್ಲ ಹುಡುಗರಿಗೂ ತಿಳಿದಿತ್ತು. ಅವರೆಲ್ಲರೂ ಇದನ್ನು ಇಟ್ಟುಕೊಂಡು ನನ್ನನ್ನು ತಮಾಷೆ ಮಾಡುತ್ತಿದ್ದರು, ಚೇಷ್ಟೆ ಮಾಡಿ ಅಳಿಸುತ್ತಿದ್ದರು. ಆದರೆ, ನಾನು ವರ್ಷವಿಡೀ ಕಷ್ಟಪಟ್ಟು ಸುಮ್ಮನಿರುತ್ತಿದ್ದೆ. ಕೊನೆಗೆ ವರ್ಷದ ಕೊನೆಯಲ್ಲಿ ಆಕೆಯ ಜೊತೆ ಒಂದೇ ಒಂದು ಬಾರಿ ಮಾತನಾಡಲು ಯಶಸ್ವಿಯಾಗಿದ್ದೆ ಎಂದು ರಾಜಮೌಳಿ ತಿಳಿಸಿದ್ದಾರೆ.
ಆ ಒಂದು ಸಣ್ಣ ಭೇಟಿಯ ಬಗ್ಗೆ ವಿವರಿಸುತ್ತಾ, ಆ ಹುಡುಗಿ ನನ್ನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದಳು. ಅತ್ಯಂತ ಶ್ರಮಪಟ್ಟು ಆಕೆಯನ್ನು 'ಭಾರತಿ' ಎಂದು ಕರೆದು, 'ಟ್ಯೂಷನ್ ಫೀಸ್ ಕಟ್ಟಿದ್ದೀಯಾ?' ಎಂದು ಕೇಳಿದೆ. ಆಕೆ ಒಮ್ಮೆ ಹಿಂತಿರುಗಿ ನನ್ನತ್ತ ನೋಡಿದಳು. ಹಲವು ದಿನಗಳಿಂದ ನಾನು ಕಾಯುತ್ತಿದ್ದ ನೋಟ ಅದಾಗಿತ್ತು ಎಂಬುದು ನನಗೆ ತಕ್ಷಣವೇ ಅರಿವಾಯಿತು. ಆಕೆಯ ಮುಖದಲ್ಲಿದ್ದ ಆ ಭಾವನೆಗಳನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ರಾಜಮೌಳಿ ಹೇಳಿದ್ದಾರೆ.
ಈ ಘಟನೆ ನಡೆದದ್ದು ರಾಜಮೌಳಿ ಅವರು ಏಳೂರು ನಗರದಲ್ಲಿ ಇಂಟರ್‌ಮೀಡಿಯೇಟ್ ಮೊದಲ ವರ್ಷ ಓದುತ್ತಿದ್ದಾಗ. ಆ ದಿನಗಳ ನಂತರ ಅವರು ತಮ್ಮ ವ್ಯಾಸಂಗವನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು. ಕೆಲವು ವರ್ಷಗಳ ಬಳಿಕ ಎರಡನೇ ವರ್ಷದ ಶಿಕ್ಷಣವನ್ನು ಪೂರ್ಣಗೊಳಿಸಿ, ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸಿನಿಮಾರಂಗದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, ತಮ್ಮ ಕುಟುಂಬಕ್ಕೆ ಆಪ್ತರಾಗಿದ್ದ ಫ್ಯಾಷನ್ ಡಿಸೈನರ್ ರಮಾ ಅವರನ್ನು ಪ್ರೀತಿಸಿ ವಿವಾಹವಾದರು, (ಏಜೆನ್ಸೀಸ್​).