ಬೆಂಗಳೂರು: ಬಾರದ ಲೋಕಕ್ಕೆ ಹೋಗಿರುವ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆಯೆ ಸಕಲ ಸಿದ್ಧತೆ ನಡೆದದೆ. ಅವರ ಪಾರ್ಥಿವ ಶರೀರ ಇಟ್ಟಿರುವ ಕಂಠೀರವ ಸ್ಟುಡಿಯೋದ ಗೇಟ್ ಬಂದ್ ಮಾಡಲಾಗಿದೆ.
ಕಳೆದ ಎರಡು ದಿನಗಳಿಂದ ಪುನೀತ್ ಅವರನ್ನು ನೋಡುವುದಕ್ಕಾಗಿ ರಾಜ್ಯದ ಮೂಲೆಮೂಲೆಗಳಿಂದ ಅವರ ಅಭಿಮಾನಿಗಳು ಕಂಠೀರವ ಸ್ಟುಡಿಯೋಕ್ಕೆ ಜಮಾಯಿಸುತ್ತಿದ್ದಾರೆ. ಈಗಲೂ ಅವರ ಅಭಿಮಾನಿಗಳ ಸಾಲು ಸಾಲು ನಿಂತಿದೆ.
ಕಂಠೀರವ ಸ್ಟೇಡಿಯಂ ಗೇಟನ್ನು ಬಂದ್ ಮಾಡಲಾಗಿದೆ. ಲಕ್ಷಲಕ್ಷ ಅಭಿಮಾನಿಗಳು ಬಂದಿದ್ದಾರೆ. ಆದರೆ ಇದಾಗಲೇ ಸ್ಟುಡಿಯೋದ ಗೇಟನ್ನು ಬಂದ್ ಮಾಡಿರುವ ಕಾರಣ, ಹಲವು ಅಭಿಮಾನಿಗಳು ಸ್ಟುಡಿಯೋದ ಹೊರಗಡೆಯೇ ನಿಂತು ತಮ್ಮ ನೆಚ್ಚಿನ ನಾಯಕನಿಗೆ ವಿದಾಯ ಹೇಳುತ್ತಿದ್ದಾರೆ.
ಈ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಅಂತಿಮಯಾತ್ರೆಯಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ಬೊಮ್ಮಾಯಿಯವರು ಪುನೀತ್ ಅವರ ಪಾರ್ಥಿವ ಶರೀರ ಇಟ್ಟಿರುವ ಶವಪೆಟ್ಟಿಗೆಯ ಮುಚ್ಚಳವನ್ನು ತೆರೆದು ಕೊನೆಯ ಬಾರಿ ಅಪ್ಪುವಿನ ಹಣೆಗೆ ಮುಟ್ಟಿಟ್ಟು ಭಾವುಕರಾಗಿ ವಿದಾಯ ಹೇಳಿದ್ದಾರೆ. ಇದೇ ವೇಳೆ ಜಮಾಯಿಸಿರುವ ಅಭಿಮಾನಿಗಳು ಆಕ್ರಂದನ ಮುಗಿಲು ಮುಟ್ಟಿದೆ.ಪುನೀತ್ ರಾಜ್‌ಕುಮಾರ್ ಅವರ ಪತ್ನಿ, ಮಕ್ಕಳು ಸೇರಿದಂತೆ ಕುಟುಂಬಸ್ಥರು ಕೂಡ ಈಗ ಸ್ಟುಡಿಯೋಕ್ಕೆ ಬಂದಿದ್ದಾರೆ.