ಸಿನಿವಾಣಿ

ಕರೊನಾ: ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಆಸ್ಪತ್ರೆಗೆ ದಾಖಲು- ವಿಡಿಯೋ ಸಂದೇಶ

suchetana

ಚೆನ್ನೈ: ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯ ಅವರಿಗೆ ಕರೊನಾ ಪಾಸಿಟಿವ್‌ ಬಂದಿದ್ದು, ಅವರನ್ನು ಚೆನ್ನೈನ ಆಸ್ಪತ್ರೆ ದಾಖಲು ಮಾಡಲಾಗಿದೆ.

74 ವರ್ಷದ ಎಸ್‌ಪಿ ಬಾಲಸುಬ್ರಹ್ಮಣ್ಯ ಅವರಿಗೆ ಸೋಂಕಿನ ಆರಂಭಿಕ ಲಕ್ಷಣಗಳಿದ್ದು, ಚೆನ್ನೈನ ಎಂಜಿಎಂ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಈ ಕುರಿತು ಫೇಸ್‌ಬುಕ್‌ ಲೈವ್‌ನಲ್ಲಿ ಮಾಹಿತಿ ನೀಡಿರುವ ಸುಬ್ರಹ್ಮಣ್ಯ ಅವರು, ‘ ನಾನು ಚೆನ್ನಾಗಿ ಇದ್ದೇನೆ. ಯಾರೂ ಹೆದರುವ ಅಗತ್ಯವಿಲ್ಲ. ಶೀತದ ಲಕ್ಷಣಗಳು ಇರುವುದು ಬಿಟ್ಟರೆ ಹೆಚ್ಚೇನೂ ಇಲ್ಲ. ಕಳೆದ ಮೂರು ದಿನಗಳಿಂದ ಸ್ವಲ್ಪ ಅಸ್ವಸ್ಥನಾಗಿದ್ದೆ ಅಷ್ಟೇ' ಎಂದಿದ್ದಾರೆ.

ವೈದ್ಯರು ಮನೆಯಲ್ಲಿಯೇ ಟ್ರೀಟ್‌ಮೆಂಟ್‌ ತೆಗೆದುಕೊಳ್ಳಬಹುದು ಎಂದು ಸಲಹೆ ಇತ್ತರು. ಆದರೆ ನನ್ನಿಂದ ಮನೆಯವರಿಗೆಲ್ಲಾ ತೊಂದರೆ ಆಗುವುದು ಬೇಡ ಎನ್ನುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಅನೇಕ ಮಂದಿ ನನಗೆ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಯಾರೇ ಭಯಪಡುವ ಅಗತ್ಯವಿಲ್ಲ. ನಾನು ಆರೋಗ್ಯದಿಂದ ಇದ್ದೇನೆ. ಯಾರಿಗೆ ಆದರೂ ಯಾವುದೇ ಕ್ಷಣದಲ್ಲಿ ಕರೆ ಮಾಡಬೇಕು ಎನ್ನಿಸಿದರೆ ಮಾಡಬಹುದು. ಇನ್ನು 2-3 ದಿನಗಳಲ್ಲಿ ನಾನು ಡಿಸ್‌ಚಾರ್ಜ್‌ ಆಗಿ ಬರುತ್ತೇನೆ ಎಂದಿದ್ದಾರೆ.