ಸಿನಿವಾಣಿ

ಹಿರಿಯ ನಟಿ ಭಾರ್ಗವಿ ನಾರಾಯಣ ಇನ್ನಿಲ್ಲ

suchetana

ಬೆಂಗಳೂರು: ರಂಗಭೂಮಿ ಕಲಾವಿದೆ, ಹಿರಿಯ ನಟಿ ಭಾರ್ಗವಿ ನಾರಾಯಣ ಅವರು ಇಂದು ಅಗಲಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು.

20ಕ್ಕೂ ಅಧಿಕ ಚಿತ್ರದಲ್ಲಿ ನಟಿಸಿದ್ದ ಭಾರ್ಗವಿ ಅವರು, ಮಂಥನಾ ಮತ್ತು ಮುಕ್ತಾ ಧಾರಾವಾಹಿಯ ಮೂಲಕ ಮನೆ ಮಾತಾಗಿದ್ದರು. ಎರಡು ಕನಸು, ಪ್ರೊಫೆಸರ್ ಹುಚ್ಚೂರಾಯ, ಪಲ್ಲವಿ, ಮುಯ್ಯಿ, ಅ೦ತಿಮ ಘಟ್ಟ. ಜ೦ಬೂ ಸವಾರಿ, ಕಾದ ಬೆಳದಿ೦ಗಳು, ಇದೊಳ್ಳೆ ರಾಮಾಯಣ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ.

ಇವರ ಆತ್ಮಚರಿತ್ರೆ 'ನಾನು, ಭಾರ್ಗವಿ' 2012ರಲ್ಲಿ ಬಿಡುಗಡೆಯಾಗಿದೆ. ಇವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು - ಅತ್ಯುತ್ತಮ ಪೋಷಕ ನಟಿ, ಕರ್ನಾಟಕ ರಾಜ್ಯನಾಟಕ ಅಕಾಡೆಮಿ ಪ್ರಶಸ್ತಿಗಳು, ಮಂಗಳೂರು ಪ್ರತಿಷ್ಠಿತ ಸಂದೇಶ ಪ್ರಶಸ್ತಿ, ಆಳ್ವಾಸ್ ನಡಿಸಿರಿ ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಸ್ಪರ್ಧೆ - ಅತ್ಯುತ್ತಮ ನಟಿ, ಕರ್ನಾಟಕ ರಾಜ್ಯ ಮಕ್ಕಳ ನಾಟಕ ಸ್ಪರ್ಧೆ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಿಕ್ಕಿವೆ.

ಸುಜಾತಾ, ನಟ ಪ್ರಕಾಶ್‌ ಬೆಳವಾಡಿ, ಪ್ರದೀಪ್‌ ಮತ್ತು ನಟಿ ಸುಧಾ ಬೆಳವಾಡಿ ಇವರ ಮಕ್ಕಳು.