ಸಿನಿವಾಣಿ

ತುಂಬ ದಿನದಿಂದ ಒಂದ್​ ವಿಷ್ಯಾ ಹೇಳ್ಬೇಕಿತ್ತು.. ಹೇಳ್ಲಾ? ಇಬ್ರು ಮದ್ವೆ ಆಗ್ಬಿಡೋಣ್ವಾ.. ರಾಧಿಕಾಗೆ ಯಶ್​ ಪ್ರಪೋಸ್;​ ಅದಕ್ಕೆ ರಾಧಿಕಾ ಉತ್ತರ ಹೇಗಿತ್ತು ನೋಡಿ..

ಬೆಂಗಳೂರು: ಸಹಜವಾಗಿ ಸಿನಿಮಾ ಮಂದಿಯೆಂದರೆ ಸಾಮಾನ್ಯರಿಗೆ ಒಂದು ರೀತಿ ಅಚ್ಚರಿ. ಅವರು ಏನೇ ಮಾಡಿದರೂ ಬೆರಗುಗಣ್ಣಿನಿಂದಲೇ ನೋಡುತ್ತಾರೆ. ಅದರಲ್ಲೂ ಸಿನಿಮಾದವರ ಪ್ರೀತಿ ಪ್ರೇಮದ ವಿಚಾರ ಬಂದಾಗ ಕುತೂಹಲ ತುಸು ಜಾಸ್ತಿನೇ ಆಗುತ್ತದೆ. ಸ್ಯಾಂಡಲ್​ವುಡ್​ ಸೆನ್ಷೆಷನಲ್​ ಜೋಡಿ ಯಶ್​-ರಾಧಿಕಾ ವಿಚಾರದಲ್ಲೂ ಆಗಿದ್ದು ಅದೇ. ಹಾಗಾದರೆ, ಯಶ್​ಗೆ ರಾಧಿಕಾ ಪ್ರಪೋಸ್​ ಮಾಡಿದ್ದಾ ಅಥವಾ ರಾಧಿಕಾಗೆ ಯಶ್​ ಪ್ರೇಮನಿವೇದನೆ​ ಮಾಡಿದ್ರಾ? ಆ ಪ್ರೇಮನಿವೇದನೆ ಹೇಗಿತ್ತು?
ರಾಧಿಕಾ ಮತ್ತು ಯಶ್​ ಒಟ್ಟಿಗೆ ಕರಿಯರ್​ ಆರಂಭಿಸಿದವರು. ಸಿನಿಮಾಕ್ಕೂ ಒಟ್ಟಿಗೆ ಬಂದವರು. ಒಟ್ಟಿಗೆ ಹಲವು ಸಿನಿಮಾ ಮಾಡಿ, ಇದೀಗ ಒಟ್ಟಾಗಿಯೇ ಬಾಳ ಪಯಣದಲ್ಲಿ ಸಾಗಿದ್ದಾರೆ. ಅದೆಲ್ಲ ಒತ್ತಟ್ಟಿಗಿರಲಿ. ಈ ಜೋಡಿಯ ಪ್ರೇಮನಿವೇದನೆಯೇ ಒಂದು ರೀತಿ ಮಜವಾಗಿದೆ. ಅದನ್ನು ಸ್ವತಃ ಯಶ್​ ಹೇಳಿಕೊಂಡಿದ್ದಾರೆ. ‘ಫೋನ್ ಕೈಗೆತ್ತಿಕೊಂಡು.. ತುಂಬ ದಿನದಿಂದ ಒಂದು ವಿಷ್ಯಾ ಹೇಳ್ಬೇಕಿತ್ತು.. ಹೇಳ್ಲಾ.. ಅದೂ ಅದು.. ನಾವಿಬ್ರು ಮದ್ವೆ ಆಗೋಣ್ವಾ..’ ಎಂದು ನೇರವಾಗಿ ರಾಧಿಕಾಗೆ ಪ್ರಪೋಸ್​ ಮಾಡಿದ್ದರಂತೆ ಯಶ್​. ಅದಕ್ಕೆ ರಾಧಿಕಾ ಸಹ ಹೀಗೆ ಪ್ರತಿಕ್ರಿಯಿಸಿದ್ದರು. ‘ಫೋನ್​ನಲ್ಲಿ ಹೀಗಾ ಪ್ರಪೋಸ್​ ಮಾಡೋದು..’ ಎಂದಿದ್ದರಂತೆ. ಬದಲಿಗೆ ಕೈಯಲ್ಲಿ ರೋಸ್ ಹಿಡಿದು, ಕಣ್ಣಲ್ಲಿ ಕಣ್ಣಿಟ್ಟು, ಪ್ರಪೋಸ್​ ಮಾಡಬೇಕಿತ್ತಂತೆ. ಹಾಗಾಗಿ ಆ ಆಸೆಯನ್ನೂ ‘ಮಿಸ್ಟರ್​ ಆ್ಯಂಡ್​ ಮಿಸೆಸ್​ ರಾಮಾಚಾರಿ’ ಸಿನಿಮಾದಲ್ಲಿ ದೃಶ್ಯವೊಂದನ್ನು ಸೃಷ್ಟಿಸಿ ಲವ್​ ಯೂ ಎಂದಿದ್ದರು ಯಶ್​.
ಅಂದಹಾಗೆ, ಶನಿವಾರ ಸಂಜೆ ಕಲರ್ಸ್​ ಕನ್ನಡದಲ್ಲಿ ‘ಕಲರ್ಸ್​ ಸಿನಿಮಾ ಗೌರವ’ ಕಾರ್ಯಕ್ರಮವನ್ನು ಮರುಪ್ರಸಾರ ಮಾಡಲಾಗಿತ್ತು. ಆ ಕಾರ್ಯಕ್ರಮದಲ್ಲಿ ರಾಧಿಕಾಗೆ ಹೇಗೆ ಪ್ರಪೋಸ್​ ಮಾಡಿದ್ದೆ ಎಂಬುದನ್ನು ಯಶ್​ ಹೇಳಿಕೊಂಡಿದ್ದರು.