ಬೆಂಗಳೂರು: ಅವನೇ ಶ್ರೀಮನ್ನಾರಾಣ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯೊಂದನ್ನು ಸೃಷ್ಟಿಸಿದ ಸಿನಿಮಾ. ಸಿನಿ ರಸಿಕರು, ಯುವಜನತೆ ಸೇರಿದಂತೆ ಅನೇಕರು 'ಇದು ಚರಿತ್ರೆ ಸೃಷ್ಟಿಸೊ ಅವತಾರ...' ಎನ್ನುತ್ತಾ ಚಿತ್ರದ ಸಿಗ್ನೇಚರ್ ಸ್ಟೆಪ್ ಹಾಕಿದ್ದರು. ಇದೀಗ ರಾಬರ್ಟ್ನ ಜೈ ಶ್ರೀರಾಮ್ ಹಾಡು ಕೂಡ ಸಖತ್ ಸುದ್ದಿ ಮಾಡಲಾರಂಭಿಸಿದೆ.
ಸಿನಿ ರಸಿಕರು, ದರ್ಶನ್ ಅಭಿಮಾನಿಗಳು ಸೇರಿದಂತೆ ಅನೇಕರು ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಜೈ ಶ್ರೀರಾಮ್ ಹಾಡಿನ ಸಿಗ್ನೇಚರ್ ಸ್ಟೆಪ್ಗೆ ಹೆಜ್ಜೆ ಹಾಕುತ್ತಿದ್ದಾರೆ. ಟ್ವಿಟ್ಟರ್, ಟಿಕ್ಟಾಕ್ ಸೇರಿ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೃತ್ಯದ ವಿಡಿಯೋ ತುಣುಕನ್ನು ಹಾಕಿ, ಡಿ ಬಾಸ್ಗೆ ಆಲ್ ದಿ ಬೆಸ್ಟ್ ಹೇಳಲಾರಂಭಿಸಿದ್ದಾರೆ.
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ನಟ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ. ಏಪ್ರಿಲ್ 9ರಂದು ಸಿನಿಮಾ ತೆರೆ ಕಾಣಲಿದ್ದು, ಚಿತ್ರತಂಡ ಈಗಾಗಲೇ ಎರಡು ಹಾಡುಗಳನ್ನು ಬಿಡುಗಡೆ ಮಾಡಿದೆ. ಚಿತ್ರದ ಎರಡನೇ ಹಾಡಾಗಿರುವ ಜೈ ಶ್ರೀರಾಮ್ ಮೊನ್ನೆ (ಮಾ.9) ಬಿಡುಗಡೆಗೊಂಡಿದ್ದು, ಅದರಲ್ಲಿ ದರ್ಶನ್ ಹನುಮಂತನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿ ಆಶಾ ಭಟ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)