ಸಿನಿವಾಣಿ

ಬಿಡುಗಡೆಯಾದ ದಿನವೇ ಲೀಕ್​ ಆದ ರಾಬರ್ಟ್​! 3,200ಕ್ಕೂ ಹೆಚ್ಚು ಲಿಂಕ್​ ಪತ್ತೆ!

Mandara

ಬೆಂಗಳೂರು: ಚಾಲಿಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಗುರುವಾರದಂದು ಬಿಡುಗಡೆಯಾಗಿ ಭಾರೀ ಸೌಂಡ್​ ಮಾಡಲಾರಂಭಿಸಿದೆ. ಸಿನಿಮಾ ಬಿಡುಗಡೆಯಾಗಿ ಒಂದೇ ದಿನದಲ್ಲಿ ಲೀಕ್​ ಆಗಿರುವ ವಿಚಾರವೂ ಹೊರಬಿದ್ದಿದೆ.

ಹೌದು ಡಿ ಬಾಸ್ ಅಭಿನಯದ ರಾಬರ್ಟ್​ ಸಿನಿಮಾದ ಕನ್ನಡ ಮತ್ತು ತೆಲುಗು ವರ್ಷನ್​ ಪೈರಸಿಯಾಗಿದೆ. ತಮಿಳು ರಾಕರ್ಸ್​ ಸೇರಿ ಹಲವು ಕಡೆಗಳಲ್ಲಿ ಪೈರಸಿ ಕಾಪಿ ಹರಿದಾಡುತ್ತಿದೆ. ಪೈರಸಿ ಕಾಪಿಗಳಿರುವ 3,200ಕ್ಕೂ ಹೆಚ್ಚು ಲಿಂಕ್​ಗಳನ್ನು ಚಿತ್ರತಂಡ ಪತ್ತೆಹಚ್ಚಿದೆ. ಪತ್ತೆಯಾಗಿರುವ ಎಲ್ಲ ಲಿಂಕ್​ಗಳನ್ನು ಈಗಾಗಲೇ ಡಿಲೀಟ್​ ಮಾಡಲಾಗಿದೆ. ಇನ್ನೂ ಹಲವಾರು ಲಿಂಕ್​ಗಳಲ್ಲಿ ಪೈರಸಿ ಕಾಪಿ ಇರುವುದಾಗಿ ಹೇಳಲಾಗಿದೆ. ಪೈರಸಿ ಮಾಡಿದವರು ಯಾರು ಎನ್ನುವುದನ್ನು ಇನ್ನೆರೆಡು ದಿನಗಳಲ್ಲಿ ಪತ್ತೆ ಹಚ್ಚುವುದಾಗಿ ರಾಬರ್ಟ್​ ಸಿನಿಮಾ ತಂಡ ತಿಳಿಸಿದೆ.

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಬಿಡುಗಡೆಯಾದ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಪಡೆದ ಚಿತ್ರ ಎಂಬ ಖ್ಯಾತಿಗೆ ರಾಬರ್ಟ್ ಚಿತ್ರ ಭಾಜನವಾಗಿದ್ದು, ಮೊದಲ ದಿನವೇ 17.24 ಕೋಟಿ ರೂಪಾಯಿ ಗಳಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ