ಸಿನಿವಾಣಿ

‘ಕಾಂತಾರ’ ಚಿತ್ರದಲ್ಲಿ ಕೋಣ ಓಡಿಸಿದ್ದ ರಿಷಬ್ ಶೆಟ್ಟಿ ಈಗ ಉಗ್ರ ರೂಪದಲ್ಲಿ ದರ್ಶನ; ಭಯಂಕರ ಮರ್ರೆ ಎಂದ್ರು ಫ್ಯಾನ್ಸ್

ಬೆಂಗಳೂರು: ಸ್ಯಾಂಡಲ್​ವುಡ್​​​ ನಟ ರಿಷಬ್​​ ಶೆಟ್ಟಿ ನಟ, ನಿರ್ದೇಶಕನಾಗಿ ಸಾಕಷ್ಟು ಹಿಟ್​ ಸಿನಿಮಾಗಳನ್ನು ಈ ಹಿಂದೆ ನೀಡಿದ್ದಾರೆ. ಆದರೆ ಕಾಂತಾರ ಸಿನಿಮಾವನ್ನು ಮಾತ್ರ ರಿಷಬ್​​ ಶೆಟ್ಟಿ ಸೇರಿದಂತೆ ಸ್ಯಾಂಡಲ್​ವುಡ್​ಗೆ ಸಖತ್​ ಸ್ಪೇಷಲ್​​ ಆಗಿದೆ. ಈ ಸಿನಿಮಾ ಜನಮನ್ನಣೆ ಗಳಿಸುತ್ತಿದ್ದಂತೆ ಪಾರ್ಟ್​​ 2 ಕಾಂತಾರ ಸಿನಿಮಾ ಮಾಡುತ್ತಾರಾ ಎನ್ನುವ ಪ್ರಶ್ನೆ ಮುನ್ನೆಲೆ ಬಂದಿತ್ತು. ಇದೀಗ ಚಿತ್ರ ತಂಡ ಕಾಂತಾರ ಅಧ್ಯಾಯ 1 ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಚಿತ್ರ ಇನ್ನೂ ಸ್ಪೇಷಲ್​ ಆಗಿರಲಿದೆ ಎನ್ನುವುದು ಪೋಸ್ಟರ್, ಟೀಸರ್​ ನಾನಾ ಚರ್ಚೆಗಳನ್ನು ಹುಟ್ಟು ಹಾಕುವಂತಿದೆ.

ಹೊಂಬಾಳೆ ಫಿಲಂಸ್‌, ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ, ‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸುವ ಪ್ರಯತ್ನವಿದು. ಹಿಂದೆಂದೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನಿರೀಕ್ಷಿಸಿ. ಇದು ಬರಿ ಬೆಳಕಲ್ಲ, ದರ್ಶನ’ ಎಂದು ಬರೆದುಕೊಂಡಿದೆ.

ಕಾಂತಾರ ಟೀಸರ್​ ಪ್ರಾರಂಭವಾಗುತ್ತಿದ್ದಂತೆ ಓ...ಎಂದು ಜೋರಾಗಿ ಕೂಗುತ್ತಿರುವ ರಿಶಬ್​ ಅವರ ಧ್ವನಿ ನಮಗೆ ಕೇಳಿಸುತ್ತದೆ. ಬೆಳಕು....ಬೆಳಕಲ್ಲ ಕಣ್ಣ ಮುಂದೆ ಇರುವುದೆಲ್ಲ ಕಾಣುತ್ತದೆ.. ಆದರೆ ಇದು ಬೆಳಕಲ್ಲ ದರ್ಶನ.... ಹಿಂದೆ ನಡೆದಿದ್ದು..ಮುಂದೆ ನಡೆಯೋದು ಎಲ್ಲವನ್ನು ತೋರಿಸುವ ಬೆಳಕು.. ಕಾಣ್ತದೆ.. ಓಓಓಓ..ಎನ್ನುವ ಧ್ವನಿ ಕೇಳುತ್ತಿದೆ. ನಂತ್ರ ರಿಷಬ್​ ಅವರ ಉಗ್ರ ಅವತಾರ ಕಾಣಿಸುತ್ತದೆ. ‘ಕಾಂತಾರ’ ಚಿತ್ರದಲ್ಲಿ ಕಂಬಳದ ದೃಶ್ಯ ಬರುತ್ತದೆ. ಇದರಲ್ಲಿ ರಿಷಬ್ ಶೆಟ್ಟಿ ಅವರು ಕೋಣ ಓಡಿಸುವ ಒಬ್ಬ ಬಡ ಕುಟುಂಬದ ಹಳ್ಳಿಯ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ‘ಕಾಂತಾರ ಚಾಪ್ಟರ್ 1’ರಲ್ಲಿ ರಿಷಬ್​ ಅವರ ಪಾತ್ರ ಸಂಪೂರ್ಣವಾಗಿ ಬದಲಾಗಿದೆ.  ರಿಷಬ್ ಶೆಟ್ಟಿ ಅವರು ಉಗ್ರಾವತಾರ ತಾಳಿದ್ದಾರೆ. ಅಶ್ಚರ್ಯ ಏನೆಂದರೆ ರಿಷಬ್ ಮುಖ ರಿವೀಲ್ ಆಗುವ ಸಮಯದಲ್ಲಿ ಅವರ ಹಿಂದೆ ಶಿವನ ತ್ರಿಶೂಲ ಕಾಣಿಸುತ್ತದೆ.

ದಟ್ಟ ಗುಹೆಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಉಗ್ರ ಅವತಾರದಲ್ಲಿ ನಿಂತಿರುವ ರಿಷಬ್‌ನ ಈ ಫಸ್ಟ್‌ ಲುಕ್‌ನಲ್ಲಿ ನೋಡಬಹುದು. ಮೈ ತುಂಬಾ ರಕ್ತದ ಕಲೆಯನ್ನು ನೋಡಬಹುದು. ಮತ್ತೊಂದು ಅಶ್ಚರ್ಯ ಏನೆಂದರೆ ರಿಷಬ್ ಮುಖ ರಿವೀಲ್ ಆಗುವ ಸಮಯದಲ್ಲಿ ಅವರ ಹಿಂದೆ ಶಿವನ ತ್ರಿಶೂಲ ಕಾಣಿಸುತ್ತದೆ. ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಖಡ್ಗ ಇದೆ. ಅವರು ಬಾವಿಯಲ್ಲಿ ನಿಂತಂತೆ ಕಂಡಿದೆ. ಮೇಲ್ಭಾಗದಲ್ಲಿ ಬೆಂಕಿ ಇದೆ. ಅವರ ಮೇಲೆ ಯಾರೋ ದಾಳಿ ಮಾಡಲು ಬರುತ್ತಿದ್ದಾರೆ.

ಈ ಟೀಸರ್​ ವಿಡಿಯೋ ನೋಡಿ ಫ್ಯಾನ್ಸ್​​ ಮೊದಲ ಅಧ್ಯಾಯ ಈಗ ಶುರು, ಭಯಂಕರ ಮಾರ್ರೆ,  ರೋಮಾಂಚನ ವಾಯ್ತು, ಇದನ್ನು ನೋಡಿ ಕನ್ನಡಿಗ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ, ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುವ ಸಿನಿಮಾ ಇದಾಗಲಿ. ಅಸಲಿ ಆಟ ಈಗ ಶುರು ಎಂದು ಕಾಮೆಂಟ್​ ಮಾಡುತ್ತಿದ್ದಾರೆ . ಈಗಾಗಲೇ ಯೂಟ್ಯೂಬ್​ನಲ್ಲಿ  ಇಂದು ಗಂಟೆಗೆ ಎಂಟುವರೆ ಸಾವಿರ ಮಂದಿ ಟೀಸರ್​ ವೀಕ್ಷಣೆ ಮಾಡಿದ್ದಾರೆ.

ಕಾಂತಾರ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ಹಿಟ್ ಆದ ನಂತರ ಹಲವು ಭಾಷೆಗಳಲ್ಲಿ ಅದನ್ನು ಡಬ್ ಮಾಡಲಾಯಿತು. ಆದರೆ, ಕಾಂತಾರ 2 ಬರೋಬ್ಬರಿ ಏಳು ಭಾಷೆಗಳಲ್ಲಿ ನಿರ್ಮಾಣವಾಗಲಿದೆಯಂತೆ. ಹಾಗಾಗಿ ಅದ್ಧೂರಿ ಮೇಕಿಂಗ್ ಕೂಡ ಇರಲಿದೆಯಂತೆ.

ಇಂದು (ನವೆಂಬರ್ 27) ಚಿತ್ರತಂಡ ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ ಆನೆಗುಡ್ಡೆ ದೇವಸ್ಥಾನದಲ್ಲಿ ‘ಕಾಂತಾರ ಚಾಪ್ಟರ್ 1’  ಚಿತ್ರದ ಮುಹೂರ್ತ ನೆರವೇರಿಸುವುದರ ಜೊತೆಗೆ ಮೊದಲ ಪೋಸ್ಟರ್ ಅನಾವರಣ ಮಾಡಿದೆ. ಇದನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಜನವರಿಯಲ್ಲಿ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ.