ಸಿನಿವಾಣಿ

ಸೆನ್ಸಾರ್​ ಪಾಸ್​ ಆದ ಬರ್ಗೆಟ್​ ಬಸ್ಯಾ! ರಿಶ್​ ಹಿರೇಮಠ ನಟಿಸಿ, ನಿರ್ದೇಶಿಸಿರುವ ಚಿತ್ರ

ಹರ್ಷವರ್ಧನ್ ಬ್ಯಾಡನೂರು

ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಬರ್ಗೆಟ್ ಬಸ್ಯಾ’ ಸಿನಿಮಾ ಸೆನ್ಸಾರ್ ಪಾಸ್​ ಆಗಿದೆ. ಸಿನಿಮಾ ವೀಕ್ಷಿಸಿದ ಸೆನ್ಸಾರ್​ ಮಂಡಳಿ  ಸದಸ್ಪ್ರಯರು ಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಚಿತ್ರತಂಡದವರು ಸಂಭ್ರಮಿಸಿದ್ದಾರೆ. ರಿಶ್‌ ಹಿರೇಮಠ್ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಿರುವ ಚಿತ್ರವಿದು. ಡೈರಕ್ಷನ್ ಕೋರ್ಸ್ ಮುಗಿಸಿದ ನಂತರ ಕೆಲವು ನಿರ್ದೇಶಕರ ಬಳಿ ಕೆಲಸ ಕಲಿತು ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ರಿಶ್​, ಬರ್ಗೆಟ್​ ಬಸ್ಯಾ ಮೂಲಕ ನಾಯಕ, ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರಿಗೆ ಚಿತ್ರದಲ್ಲಿ ಸಂಗೀತ.ಎನ್.ಸ್ವಾಮಿ ನಾಯಕಿಯಾಗಿದ್ದಾರೆ.

ಕಂಡಕಂಡ ಹುಡುಗಿಯರನ್ನೆಲ್ಲ ಲವ್ ಮಾಡಿ ಅಂತ ಬರ್ಗೆಟ್​ ಬಸ್ಯಾ ಹಿಂದೆ ಬೀಳುತ್ತಿರುತ್ತಾನೆ. ಆತನ ಜೀವನದ ಸುತ್ತ ಸಂಪೂರ್ಣ ಹಾಸ್ಯಮಯ ಕಥೆ ಹೇಳುವ ಪ್ರಯತ್ನ ರಿಶ್​ ಅವರದು. ನಲವತ್ತು ಹುಡುಗಿಯರು ಬಸ್ಯನ ಜೀವನದಲ್ಲಿ ಹೇಗೆ ಬಂದು ಹೋಗುತ್ತಾರೆ? ಅವರಿಂದ ಬಸ್ಯಾ ಏನೆಲ್ಲಾ ಕಳೆದುಕೊಳ್ಳುತ್ತಾನೆ? ಪಡೆದುಕೊಳ್ಳುತ್ತಾನೆ ಎಂಬುದೇ ಚಿತ್ರದ ತಿರುಳು. ಬೆಂಗಳೂರು, ತೀರ್ಥಹಳ್ಳಿ, ಕೊಪ್ಪ, ಬೆನಗನಹಳ್ಳಿ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಶೂಟಿಂಗ್​ ನಡೆಸಲಾಗಿದೆ.

ಚಿತ್ರಕ್ಕೆ ಪ್ರಕಾಶ್.ಜಿ ಸಾಹಿತ್ಯಕ್ಕೆ ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶಾಮ್‌ಸಾಲ್ವಿನ್, ಸಂಕಲನ ಸಿದ್ದು ದಳವಾಯಿ ಅವರದಾಗಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ತರಲು ತಂಡ ಯೋಜನೆ ರೂಪಿಸಿಕೊಂಡಿದೆ.