ಸಿನಿವಾಣಿ

'ರಿಚರ್ಡ್ ಆಂಟನಿ ಸ್ಕ್ರಿಪ್ಟ್ ಮುಗಿದಿದೆ, ಪ್ರಿ-ಪ್ರೊಡಕ್ಷನ್ ಸ್ಟಾರ್ಟ್ ಆಗತ್ತೆ'; 2036ರವರೆಗೆ ಪ್ರಮೋದ್​ ಶೆಟ್ಟಿ ಇದೇ ಹೇಳ್ತಾರೆ ಎಂದು ಲೇವಡಿ

  • ರಿಚರ್ಡ್ ಆಂಟನಿ ಸಿನಿಮಾ ಶೂಟಿಂಗ್​ ಬಗ್ಗೆ ಪ್ರಮೋದ್ ಶೆಟ್ಟಿ ಹೇಳಿದ್ದೇನು?.

  • ಪ್ರತಿ ಮಾಧ್ಯಮಗಳ ಪ್ರಶ್ನೆಗೆ 2024ರಿಂದ ಒಂದೇ ಉತ್ತರ ಕೊಡುತ್ತಿರುವ ಪ್ರಮೋದ್ ಶೆಟ್ಟಿ.

  • 2036ರಲ್ಲಿ ರಿಚರ್ಡ್ ಆಂಟನಿ ಸಿನಿಮಾ ಶೂಟಿಂಗ್ ಬಗ್ಗೆ ಕೇಳಿದ್ರು ಪ್ರಮೋದ್ ಶೆಟ್ಟಿ ಸ್ಕ್ರಿಪ್ಟ್ ಮುಗಿದಿದೆ, ಪ್ರಿ-ಪ್ರೊಡಕ್ಷನ್ ಸ್ಟಾರ್ಟ್ ಆಗತ್ತೆ ಅಂತಾನೆ ಹೇಳ್ತಾರೆ ಎಂದು ವ್ಯಂಗ್ಯ.

Pramod Shetty On Richard Anthony: Lord of the Sea: ರಿಚರ್ಡ್ ಆಂಟನಿ ಸಿನಿಮಾ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲ ಪ್ರಮೋದ್ ಶೆಟ್ಟಿ ಕೊಡೋದು ಒಂದೇ ಉತ್ತರ - ಸ್ಕ್ರಿಪ್ಟ್ ಮುಗಿದಿದೆ, ಪ್ರಿ-ಪ್ರೊಡಕ್ಷನ್ ಸ್ಟಾರ್ಟ್ ಆಗತ್ತೆ ಎಂದು. ಅವರ ಉಸಿರು ಹೋಗುವ ಮುನ್ನ ಕೇಳಿದ್ರೂ ಹೀಗೆ ಹೇಳ್ತಾರೆ. ಇನ್ನೊಂದು 20 ವರ್ಷ ಬಿಟ್ಟು ಬಂದು ಕೇಳಿದ್ರೂ ಒಂದೇ ಉತ್ತರ ಎಂದು ಸಾಲು ಸಾಲು ಟೀಕೆಗಳು, ಮೀಮ್‌ಗಳು ಹರಿದಾಡುತ್ತಿವೆ. ಟ್ರೋಲ್‌ಗೆ ಪ್ರಮೋದ್ ಶೆಟ್ಟಿ ತುತ್ತಾಗಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಂತರ ಕಣ್ಮರೆಯಾಗಿರುವ ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ..ರಿಚರ್ಡ್ ಆಂಟನಿ ಸಿನಿಮಾ ಶೂಟಿಂಗ್ ಕತೆ ಏನು?, ತೆರೆಗೆ ಬರುತ್ತಾ ಎನ್ನುವುದೇ ಎಲ್ಲರಿಗೂ ಇರುವ ಕುತೂಹಲ. ಈ ಬಗ್ಗೆ ಅವರ ಸ್ನೇಹಿತರಾದ ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಇನ್ನಿತರರು ಮಾಧ್ಯಮಗಳ ಎದುರು ಬಂದಾಗ ಈ ಪ್ರಶ್ನೆ ಕೇಳಲಾಗುತ್ತದೆ. ಈ ಬಾರಿ ಇಂತದ್ದೇ ಪ್ರಶ್ನೆಗೆ ಉತ್ತರಿಸಿರುವ ಪ್ರಮೋದ್​ ಶೆಟ್ಟಿ ಟ್ರೋಲ್​ಗೆ ಗುರಿಯಾಗಿದ್ದಾರೆ.

ರಿಚರ್ಡ್ ಆಂಟನಿ ಸಿನಿಮಾ ಬಗ್ಗೆ

ರಿಚರ್ಡ್ ಆಂಟನಿ ಸಿನಿಮಾವು ಉಳಿದವರು ಕಂಡಂತೆಯ ಮುಂದುವರೆದ ಭಾಗವಾಗಿದೆ. ಜೊತೆಗೆ ಪ್ರೀಕ್ವೆಲ್ ಸಹ ಆಗಿರಲಿದೆ. ಉಳಿದವರು ಕಂಡಂತೆ ಪ್ರಮುಖ ಪಾತ್ರ 'ರಿಚಿ' (ರಿಚರ್ಡ್ ಆಂಟನಿ) ಜೀವನದ ಕುರಿತಾದ ಸಿನಿಮಾ ಇದು ಎನ್ನಲಾಗುತ್ತಿದೆ. ರಕ್ಷಿತ್​ ಶೆಟ್ಟಿ, ಪ್ರಮೋದ್ ​ ಶೆಟ್ಟಿ, ರಿಷಬ್ ​ ಶೆಟ್ಟಿ​​, ಅಚ್ಯುತ್ ಕುಮಾರ್​, ಕಿಶೋರ್, ಯಜ್ಞಾ ಶೆಟ್ಟಿ​ ಈ ಸಿನಿಮಾದಲ್ಲಿ ಇರಲಿದ್ದಾರೆ. ಸಿನಿಮಾ ನಿರ್ಮಾಣದ ಹೊಣೆಯನ್ನು ಹೊಂಬಾಳೆ ಫಿಲ್ಮ್ಸ್ ಹೊತ್ತಿದ್ದು...ಸಂಗೀತ ನಿರ್ದೇಶನವನ್ನು ಬಿ. ಅಜನೀಶ್ ಲೋಕನಾಥ್ ಮಾಡುತ್ತಿದ್ದಾರೆ. ಛಾಯಾಗ್ರಹಣವನ್ನು ಕರ್ಮ್ ಚಾವ್ಲಾ ನಿರ್ವಹಿಸುತ್ತಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ ಮತ್ತು ಬಿ ಭಾಗವೂ ರಿಲೀಸ್ ಆಗಿ ಸಕ್ಸಸ್​ ಕಂಡ ನಂತರ, ರಿಚರ್ಡ್​ ಆಂಟನಿ ಸಿನಿಮಾ ಬಗ್ಗೆ ರಕ್ಷಿತ್​ ಶೆಟ್ಟಿ ಫ್ಯಾನ್ಸ್​ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಸದ್ಯ ಕಣ್ಮರೆಯಾಗಿರುವ ರಕ್ಷಿತ್​ ಶೆಟ್ಟಿ ಹಾಗೂ ಸಿನಿಮಾ ಬಗ್ಗೆ ಪ್ರಸ್ತಾಪ ಮಾಡದ ಚಿತ್ರ ತಂಡದ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರಮೋದ್ ಹೇಳಿದ್ದೇನು?

ಇತ್ತೀಚೆಗೆ ಪ್ರಮೋದ್​ ಶೆಟ್ಟಿಯವರನ್ನು ರಕ್ಷಿತ್​ ಶೆಟ್ಟಿ ಹಾಗೂ ರಿಚರ್ಡ್ ಆಂಟನಿ ಸಿನಿಮಾ ಶೂಟಿಂಗ್ ಆರಂಭವಾಗಿರುವ ಬಗ್ಗೆ ಖಾಸಗಿ ಮಾಧ್ಯಮದ ನಿರೂಪಕಿ ಪ್ರಶ್ನೆ ಮಾಡಿದ್ದರು. ಈ ವೇಳೆ ಅವರು ಉತ್ತರ ಕೊಟ್ಟಿದ್ದು ಹೀಗೆ, ಕತೆ ಬರೆದು ಮುಗಿದಿದೆ. ಶೀಘ್ರದಲ್ಲೇ ಬರ್ತಾನೆ. ಪ್ರೀ ಪ್ರೊಡಕ್ಷನ್​​​​ ಶುರುವಾಗುತ್ತದೆ ಶೂಟಿಂಗ್​ ಸಹ ಆರಂಭವಾಗುತ್ತದೆ. ಗೊತ್ತಲ್ವ ಪ್ರೀ ಪ್ರೊಡಕ್ಷನ್​ಗೆ ಹೆಚ್ಚು ಸಮಯ ಹಿಡಿಯುತ್ತೆ ಎಂದು ಹೇಳಿದ್ದಾರೆ.

ಟ್ರೋಲ್​ಗೆ ಗುರಿ

ಇದನ್ನೇ ಗುರಿಯಾಗಿಸಿಕೊಂಡ ನೆಟ್ಟಿಗರು... ವರ್ಷಗಳು ಕಳೆದರೂ ಚಿತ್ರದ ಚಿತ್ರೀಕರಣ ಆರಂಭವಾಗದೆ, ಪ್ರಮೋದ್ ಶೆಟ್ಟಿ ನೀಡುವ ಹೇಳಿಕೆ ಮಾತ್ರ ಒಂದೇ ರೀತಿಯಿದೆ ಎಂದು ವ್ಯಂಗ್ಯವಾಡುತ್ತಿದ್ದಾರೆ.

  • ಪ್ರಮೋದ್ ಶೆಟ್ಟಿ (2024 ರಲ್ಲಿ): "ರಿಚರ್ಡ್ ಆಂಟನಿ ಸ್ಕ್ರಿಪ್ಟ್ ಮುಗಿದಿದೆ, ಇನ್ನೇನು ಪ್ರಿ-ಪ್ರೊಡಕ್ಷನ್ ಸ್ಟಾರ್ಟ್ ಆಗುತ್ತೆ..."

  • ಪ್ರಮೋದ್ ಶೆಟ್ಟಿ (2026 ರಲ್ಲಿ): "ರಿಚರ್ಡ್ ಆಂಟನಿ ಸ್ಕ್ರಿಪ್ಟ್ ಮುಗಿದಿದೆ, ಇನ್ನೇನು ಪ್ರಿ-ಪ್ರೊಡಕ್ಷನ್ ಸ್ಟಾರ್ಟ್ ಆಗುತ್ತೆ..."

  • ಪ್ರಮೋದ್ ಶೆಟ್ಟಿ (2036 ರಲ್ಲಿ): "ರಿಚರ್ಡ್ ಆಂಟನಿ ಸ್ಕ್ರಿಪ್ಟ್ ಮುಗಿದಿದೆ, ಇನ್ನೇನು ಪ್ರಿ-ಪ್ರೊಡಕ್ಷನ್ ಸ್ಟಾರ್ಟ್ ಆಗುತ್ತೆ...ಎಂದು ಬರೆದುಕೊಂಡು ಪ್ರಮೋದ್​ ಶೆಟ್ಟಿ ಅವರು ಮಾತನಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ನೆಟ್ಟಿಗರು ಏನಂದ್ರು?

ಇದಕ್ಕೆ ಕಾಮೆಂಟ್ ಮಾಡುತ್ತಿರುವ ನೆಟ್ಟಿಗರು..2047ರ ಸರ್ಕಾರದ ಯೋಜನೆಗಳನ್ನು ಫಾಲೋ ಮಾಡುತ್ತಿರಬೇಕು ಎಂದು ವ್ಯಂಗ್ಯವಾಡಿದ್ದಾರೆ. ಅವ್ರು ಕೊನೆಯ ಉಸಿರು ಹೋಗುವಾಗ..ಇದೇ ಪ್ರಶ್ನೆ ಕೇಳಿದ್ರೆ ಖಂಡಿತ ಇದನ್ನೇ ಹೇಳ್ತಾರೆ ಎಂದು ಟೀಕೆ ಮಾಡಿದ್ದಾರೆ.