ಸಿನಿವಾಣಿ

ರೈಮ್ಸ್​ ಸಿನಿಮಾಗೆ ಮಾಜಿ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಹಾರೈಕೆ

ಬೆಂಗಳೂರು: ಭೂಗತ ದೊರೆ ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್ ನಾಯಕನಾಗಿ ನಟಿಸಿರುವ ‘ರೈಮ್್ಸ’ ಸಿನಿಮಾ ಇದೀಗ ಮೊದಲ ಪೋಸ್ಟರ್ ಬಿಡುಗಡೆ ಮಾಡಿಕೊಂಡು ಸಂಭ್ರಮಿಸುತ್ತಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಮಾಜಿ ಪೊಲೀಸ್ ಅಧಿಕಾರಿ ಬಿ.ಬಿ. ಅಶೋಕ್ ಕುಮಾರ್ ಅತಿಥಿಯಾಗಿ ಆಗಮಿಸಿ, ‘ಪೊಲೀಸರನ್ನು ದ್ವೇಷಿಸುತ್ತಿದ್ದವರ ಮಗ ಇದೀಗ ‘ರೈಮ್್ಸ’ ಸಿನಿಮಾದಲ್ಲಿ ಖಾಕಿ ತೊಟ್ಟು ಖಡಕ್ ಪೊಲೀಸ್ ಅಧಿಕಾರಿಯಾಗಿದ್ದಾರೆ. ಈ ಚಿತ್ರದ ಮೂಲಕ ಅವರಿಗೆ ಯಶಸ್ಸು ಸಿಗಲಿ’ ಎಂದು ಶುಭ ಹಾರೈಸಿದರು. ಅಜಿತ್ ಕುಮಾರ್ ‘ರೈಮ್್ಸ’ಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಸ್ಕೆ್ವೕರ್ ಕಾನ್ಸೆಪ್ಟ್ ಬ್ಯಾನರ್​ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ,