ಸಿನಿವಾಣಿ

ರೇಣುಕಸ್ವಾಮಿ Murder Case: ದರ್ಶನ್​ಗೆ ಬೆಡ್​​ಶೀಟ್​, ದಿಂಬು ಕೋರಿ ಅರ್ಜಿ; ವಿಚಾರಣೆ ಮುಂದೂಡಿದ ಕೋರ್ಟ್​

Murder Case: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಎ2 ಆರೋಪಿ ನಟ ದರ್ಶನ್​ಗೆ ಜೈಲಿನಲ್ಲಿ ಬೆಡ್​ಶೀಟ್​, ದಿಂಬು ಮೆನೆ ಊಟಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸೆಷನ್ಸ್​​ ನ್ಯಾಯಾಲಯ ನಾಳೆ(ಸೆ.3ಕ್ಕೆ) ಮುಂದೂಡಿದೆ.

ಸುಪ್ರೀಂಕೋರ್ಟ್​ನಲ್ಲಿ ಜಾಮೀನು ವಜಾ ಆದ ಬೆನ್ನಲ್ಲೆ ಹೊರಗಿದ್ದ 7 ಆರೋಪಿಗಳು ಇದೇ ಆಗಷ್ಟ್​ನಲ್ಲಿ ಪರಪ್ಪನ ಆಗ್ರಹಾರ ಸೇರಿದ್ದಾರೆ. ಇದೀಗ ಜೈಲಿನಲ್ಲಿ ದರ್ಶನ್​ಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಆರೋಪಿ ಪರ ಅರ್ಜಿ ಸಲ್ಲಿದ್ದ ವಕೀಲ ಸುನೀಲ್​​ ಕುಮಾರ್​ ವಾದ ಮಂಡನೆ ಮಾಡಿದ್ದಾರೆ.

ಕನಿಷ್ಟ ಪಕ್ಷ ಆರೋಪಿಗೆ ಮೂಲಭೂತ ಸೌರ್ಕರ್ಯ ಕೂಡ ನೀಡುತ್ತಿಲ್ಲ. ಜೈಲಾಧಿಕಾರಿಗಳು ಅವರನ್ನು ಮೃಗದಂತೆ ನೋಡಿಕೊಳ್ಳುತ್ತಿದ್ದಾರೆ. ಜೈಲಿನಲ್ಲಿ ಶೂ ಬಿಚ್ಚಿ ಹೋಗು ಎನ್ನುತ್ತಿದ್ದಾರೆ. ಬ್ಯಾರಕ್​ನಲ್ಲಿ ಗಲೀಜು ಇದ್ದರೂ ಅಲ್ಲೆ ಮಲಗುವಂತೆ ಹೇಳುತ್ತಿದ್ದಾರೆ. ಇದರಿಂದ ದರ್ಶನ್​​ ತುಂಬಾನೇ ಕಷ್ಟ ಪಡುತ್ತಿದ್ದಾರೆ ಎಂದು ವಕೀಲ ಸುನೀಲ್​​ ಕುಮಾರ್​ ವಾದಿಸಿದ್ದಾರೆ.

ಇನ್ನು ಇದರ ಜತೆ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡುವಂತೆ ಸರ್ಕಾರದ ಪರ ಎಸ್​​ಪಿಪಿ ಪ್ರಸನ್ನ ಕುಮಾರ್​ ಕೋರಿದ್ದಾರೆ. ಇಬ್ಬರ ವಾದ ಆಲಿಸಿದ ಕೋರ್ಟ್​ ವಿಚಾರಣೆ ನಾಳೆ ಸಂಜೆ ನಾಲ್ಕು ಗಂಟೆಗೆ ಮುಂದೂಡಿಕೆ ಮಾಡಿದೆ.