ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಸಣ್ಣ ಸಿನಿಮಾಗಳು ಕೂಡ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಆ ಸಿನಿಮಾಗಳ ಜತೆಗೆ ನಾಯಕ, ನಾಯಕಿಯರು, ಸೈಡ್ ಕ್ಯಾರೆಕ್ಟರ್ಗಳಿಗೂ ಅದೇ ಮಟ್ಟದಲ್ಲಿ ಒಳ್ಳೆಯ ಮನ್ನಣೆ ಸಿಗುತ್ತಿದೆ. ಚಿಕ್ಕ ಪಾತ್ರ ಮಾಡಿದವರಿಗೂ ಪ್ರೇಕ್ಷಕರಿಗೆ ನೆನಪಾಗುವ ರೀತಿಯಲ್ಲಿ ಕ್ರೇಜ್ ಸಿಗುತ್ತದೆ. ಆದರೆ, ತೆರೆಗೆ ಪರಿಚಯವಾಗುವ ಮುನ್ನ ಕೆಲವರು ಡಬ್ಬಿಂಗ್ ಕಲಾವಿದರಾಗಿ, ರೂಪದರ್ಶಿಗಳಾಗಿ ನಾನಾ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.
ಹೌದು, ಈ ಮೇಲಿನ ಫೋಟೋದಲ್ಲಿ ಕಾಣುತ್ತಿರುವ ಈ ಯುವತಿ, ಸಾಯಿ ರಾಜೇಶ್ ನಿರ್ದೇಶನದ 'ಬೇಬಿ' ಚಿತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯವಾದಳು. ಅಂದಹಾಗೆ ಬೇಬಿ ಸಿನಿಮಾ 2023ರ ಜುಲೈ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಆನಂದ್ ದೇವರಕೊಂಡ, ವೈಷ್ಣವಿ ಚೈತನ್ಯ ಮತ್ತು ವಿರಾಜ್ ಅಶ್ವಿನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಕೂಡ ಆಯಿತು. ಅಷ್ಟೇ ಅಲ್ಲ, ಸಿನಿಮಾ ಬಿಡುಗಡೆಯಾದ 11 ದಿನಗಳಲ್ಲೇ ಸುಮಾರು 70 ಕೋಟಿ ಕಲೆಕ್ಷನ್ ಮಾಡಿದ್ದು ಗೊತ್ತೇ ಇದೆ.
ಇನ್ನು ಈ ಸಿನಿಮಾದಲ್ಲಿ ವೈಷ್ಣವಿಯ ಗೆಳತಿ ಪಾತ್ರ ನಿಮಗೆ ನೆನಪಿರಬಹುದು. ಸ್ವಲ್ಪ ಸಮಯ ಮಾತ್ರ ಕಾಣಿಸಿಕೊಳ್ಳುವ ಈ ಯುವತಿ ತನ್ನ ಮುಗ್ಧ ನಟನೆಯಿಂದಲೇ ಎಲ್ಲರನ್ನು ಆಕರ್ಷಿಸಿದರು. ಬೇಬಿ ಸಿನಿಮಾದಲ್ಲಿ ಬಡ ಕಾಲೇಜು ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚೆಲುವೆ ನಿಜ ಜೀವನದಲ್ಲಿ ಹೇಗಿದ್ದಾಳೆ ಅಂತ ತಿಳಿದರೆ ನಿಜಕ್ಕೂ ಶಾಕ್ ಆಗುತ್ತೀರಿ. ಇದೀಗ ಅವರ ಗ್ಲಾಮರಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಬೇಬಿ ಸಿನಿಮಾದಲ್ಲಿ ವೈಷ್ಣವಿ ಸ್ಕೂಲ್ ಫ್ರೆಂಡ್ ಆಗಿ ಕಾಣಿಸಿಕೊಂಡಿದ್ದ ಈ ಯುವತಿ ಹಲವರಿಗೆ ನೆನಪಿರಬಹುದು. ಸಿನಿಮಾದ ಸೆಕೆಂಡ್ ಆಪ್ನಲ್ಲಿ ವೈಷ್ಣವಿಯ ನಡವಳಿಕೆ ಇಷ್ಟವಾಗದೆ ಆಕೆಯನ್ನು ದೂರವಿಡುವ ಪಾತ್ರವಾಗಿ ತುಂಬಾ ಅದ್ಭುತವಾಗಿ ನಟಿಸಿದ್ದಾರೆ. ಈ ಯುವತಿಯ ನಿಜವಾದ ಹೆಸರು 'ಕುಸುಮಾ ದೇಗಲಮರಿ'. ಚಿತ್ರದಲ್ಲಿ ನಟಿಸುವ ಮೊದಲು, ಅವರು ವಾಯ್ಸ್ ಓವರ್ ಕಲಾವಿದೆ ಮತ್ತು ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ಡಿಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಈ ಚೆಲುವೆ ಹೊರನೋಟಕ್ಕೆ ತುಂಬಾ ಸುಂದರವಾಗಿದ್ದಾರೆ.
ಆಗಾಗ ತನ್ನ ಗ್ಲಾಮರಸ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಾಳೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಅನೇಕ ವಿಡಿಯೋಗಳು ಮತ್ತು ಮನಮೋಹಕ ಫೋಟೋಗಳನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. (ಏಜೆನ್ಸೀಸ್)