- ಗೋರಖ್ಪುಎದಲ್ಲಿ ಸಂಸದ, ನಟ ರವಿ ಕಿಶನ್ ಯೋಗಾಸನ
- ಯೋಗಾಸನದ ವೇಳೆ ಬಾಯಲ್ಲಿ ಗುಟ್ಕಾ ಜಗಿಯುತ್ತಿದ್ದರು ಎಂದ ಟ್ರೋಲರ್ಸ್
- ಇದು ಮುಖಕ್ಕೆ ಮಾಡುತ್ತಿರುವ ಎಕ್ಸಸೈಜ್ ಎಂದು ಮೀಮ್ಸ್ ಮಾಡಿದ ಟ್ರೋಲರ್ಸ್
Ravi Kishan Yoga Memes: ಬಹುತೇಕ ಸಿನಿಮಾಗಳಲ್ಲಿ ವಿಲನ್ ಆಗಿ ಗಂಭೀರ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಂಸದ ಮತ್ತು ನಟ ರವಿ ಕಿಶನ್, ಸದ್ಯ ನಗೆ ಪಾಟಲಿಗೆ ಈಡಾಗಿದ್ದಾರೆ. ಅಂತರಾಷ್ಟ್ರೀಯ ಯೋಗಾಸನ ದಿನಕ್ಕೆ ಇನ್ನೂ 3 ದಿನಗಳೂ ಬಾಕಿ ಇರುವ ಮುನ್ನವೇ ಗೋರಖ್‌ಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು, ಇಲ್ಲಿನ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಸದ್ದು ಮಾಡುತ್ತಿದೆ.
ಏನಿದು ಘಟನೆ?
ಗೋರಖ್‌ಪುರದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮಕ್ಕೆ ತೆರಳಿದ್ದ ರವಿ ಕಿಶನ್, ವಿವಿಧ ಭಂಗಿಯಲ್ಲಿ ಆಸನಗಳನ್ನು ಮಾಡಿದ್ದರು. ಇದೇ ವೇಳೆ ಅವರ ಬಾಯನ್ನು ಅಲುಗಾಡಿಸುತ್ತಿದ್ದರು. ಈ ವಿಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸಿದ ನೆಟ್ಟಿಗರು ರವಿ ಕಿಶನ್ ಅವರು ಯೋಗ ಡುತ್ತಾ ಗುಟ್ಕಾ ಜಗಿಯುತ್ತಿರುವುದು ನೋಡಿ ಎಂದು ಟೀಕೆ ಮಾಡಲು ಶುರುವಿಟ್ಟುಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಕ್ಸ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ರವಿ ಕಿಶನ್ ಅವರ ಭಂಗಿಗಳನ್ನು ಟ್ರೋಳ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.
ರವಿ ಕಿಶನ್ ಅವರು ಯಾರಿಗಾಗಿ ಯೋಗ ಮಾಡ್ತಿದ್ದಾರೆ. ಹೇಗಿದ್ದರೂ ನಟ ಅಲ್ವಾ? ಹೀಗಾಗಿ ಈ ಕಾರ್ಯಕ್ರನದಲ್ಲಿಯೂ ಅದನ್ನೇ ಮುಂದುವರೆಸಿದ್ದಾರೆ. ರೀಲ್ಸ್ ಮತ್ತು ಫೋಟೋ ಶೂಟ್ ಮುಗಿದ ನಂತರ ಯೋಗ ಮಾಡೋದು ಬಿಟ್ಟುಬಿಡುತ್ತಾರೆ ಎಂದು ಬಳಕೆದಾರರೊಬ್ಬರು ಟೀಕೆ ಮಾಡಿದ್ದಾರೆ.
ಆಮ್ಲಜನಕ ಎಳೆದುಕೊಳ್ತಿದ್ದಾರೆ
ಮತ್ತೊಬ್ಬರು ಹೇಳಿದ್ದು ಹೀಗೆ. ಹೇ ಅದು ಯೋಗಾಸನ ಮಾಡುತ್ತಿರುವುದು ಮುಖಕ್ಕೆ. ತಮ್ಮ ಬಾಯಿಯಲ್ಲಿರುವ ವಸಡುಗಳನ್ನು ಸಡಿಲಗೊಳಿಸಲು ಅವರು ಗುಟ್ಕಾ ಜಗಿಯುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ರವಿಕಿಶನ್ ಅವರ ಯೋಗಾಸನಕ್ಕೆ ಗುಟ್ಕಾಸನ ಎಂದು ಹೆಸರಿಟ್ಟದ್ದಾರೆ.
ರವಿಕಿಶನ್ ಅವರು ಗುಟ್ಕಾ ಜಗಿಯುತ್ತಾ ಯೋಗಾಸನ ಮಾಡುತ್ತಿದ್ದಾರೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಅವರು ದೇಹಕ್ಕೆ ಆಮ್ಲಜನಕವನ್ನು ಕಳಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಎಕ್ಸ್ ಬಳಕೆದಾರರೊಬ್ಬರು ಲೇವಡಿ ಮಾಡಿದ್ದಾರೆ.
ರವಿಕಿಶನ್ರ ಸಿನಿಮಾಗಳಿವು
ಪ್ರಸ್ತುತ ರಾಜಕೀಯದ ಜೊತೆಗೆ ಸಿನಿಮಾದಲ್ಲೂ ಸಕ್ರಿಯರಾಗಿರುವ ರವಿ ಕಿಶನ್, ಭೋಜ್‌ಪುರಿ ಚಿತ್ರರಂಗವನ್ನು ಪುನಶ್ಚೇತನಗೊಳಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಬಾಲಿವುಡ್‌ನಲ್ಲಿ ಪೋಷಕ ನಟನಾಗಿ ವೃತ್ತಿಜೀವನ ಆರಂಭಿಸಿದ ಅವರು, ನಂತರ ಭೋಜ್‌ಪುರಿಯಲ್ಲಿ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದರು. ಇತ್ತೀಚೆಗೆ ಅವರು 'ಲಾಪತಾ ಲೇಡೀಸ್', 'ಮಾಮ್ಲಾ ಲೀಗಲ್ ಹೈ', ಪೆದ್ದಿ ಮತ್ತು 'ಮಾ ಬೆಹನ್' ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬರುವ ಜುಲೈ 10, 2026 ರಂದು ತೆರೆಕಾಣಲಿರುವ ಬಹುನಿರೀಕ್ಷಿತ 'ಧಮಾಲ್ 4' ಚಿತ್ರದಲ್ಲಿ ರವಿ ಕಿಶನ್ ಪ್ರಮುಖ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.