ಸಿನಿವಾಣಿ

ಗರುಡ್ ಜತೆ ರವಿ ಬಸ್ರೂರು; ಹಿಂದಿ ಸಿನಿಮಾಗೆ ಸಂಗೀತ ಸಂಯೋಜನೆ

ಬೆಂಗಳೂರು: ಕನ್ನಡದ ಬಹುಬೇಡಿಕೆಯ ಸಂಗೀತ ನಿರ್ದೇಶಕ ರವಿ ಬಸ್ರೂರು ಇದೀಗ ‘ಗರುಡ್’ ಎಂಬ ಹಿಂದಿ ಚಿತ್ರಕ್ಕೆ ಸಂಗೀತ ಸಂಯೋಜಿಸುವುದಕ್ಕೆ ಸಜ್ಜಾಗಿದ್ದಾರೆ. ಅಜಯ್ ಕಪೂರ್ ಮತ್ತು ಸುಭಾಷ್ ಕಾಳೆ ನಿರ್ವಿುಸುತ್ತಿರುವ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಪೋಸ್ಟರ್​ನ್ನು ರವಿ ಬಸ್ರೂರು ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಅಫ್ಘಾನಿಸ್ತಾನ್​ದಲ್ಲಿ ಸಿಲುಕಿದ್ದ ಭಾರತೀಯರನ್ನು ಬಿಡಿಸಿ ಕರೆ ತರುವ ಕಥೆಯ ಈ ಚಿತ್ರವು ಮುಂದಿನ ವರ್ಷ ಆಗಸ್ಟ್ 15ರಂದು ಬಿಡುಗಡೆಯಾಗುತ್ತಿದೆ.

ಸದ್ಯ ಪೋಸ್ಟರ್ ಬಿಡುಗಡೆಯಾಗಿದ್ದು, ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಆಗಬೇಕಿದೆ. ಇದಕ್ಕೂ ಮುನ್ನ, ‘ಯುದ್ರ’ ಎಂಬ ಚಿತ್ರದ ಮೂಲಕ ರವಿ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆಂಬ ಸುದ್ದಿ ಬಂದಿತ್ತು. ಫರ್ಹಾನ್ ಅಖ್ತರ್, ಈ ಚಿತ್ರ ನಿರ್ವಿುಸುತ್ತಿದ್ದು, ರವಿ ಬಸ್ರೂರು ಹಿನ್ನೆಲೆ ಸಂಗೀತ ಸಂಯೋಜಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಇನ್ನಷ್ಟೇ ಈ ಬಗ್ಗೆ ಅಧಿಕೃತವಾಗಬೇಕಿದೆ.