- ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮತ್ತೊಮ್ಮೆ ಟ್ರೋಲ್
- ರಶ್ಮಿಕಾ ಮಂದಣ್ಣ ಏನೇ ಮಾಡಿದ್ರೂ ಟೀಕೆ ಮಾತ್ರ ತಪ್ಪದು
Rashmika Mandanna: ಕೊಡಗಿನ ಕುವರಿ, 'ನ್ಯಾಷನಲ್ ಕ್ರಶ್' ನಟಿ ರಶ್ಮಿಕಾ ಮಂದಣ್ಣ ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ಮೋಸ್ಟ್ ಬಿಝಿಯೆಸ್ಟ್ ಪ್ಯಾನ್ ಇಂಡಿಯನ್ ನಟಿ ಆಗಿದ್ದಾರೆ. ಪ್ರಸ್ತುತ ಬಿಡುಗಡೆಗೆ ಸಿದ್ಧವಿರುವ ತಮ್ಮ ಮುಂದಿನ ಬಾಲಿವುಡ್ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ತೊಡಗಿರುವ ರಶ್ಮಿಕಾಗೆ ಟ್ರೋಲ್, ಟೀಕೆಗಳು ಏನೇ ಮಾಡಿದರೂ ತಪ್ಪೋದಿಲ್ಲ ಎನ್ನುವಂತಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಟ್ರೋಲ್, ಟೀಕೆಗಳಿಗೆ ಗುರಿಯಾಗುವ ರಶ್ಮಿಕಾ ಮಂದಣ್ಣ, ತಾವು ಏನೇ ಮಾತನಾಡಿದರೂ, ಹೇಗೇ ನಡೆದುಕೊಂಡರು ಅಥವಾ ಸಣ್ಣ ಮಿಸ್ಟೇಕ್ ಮಾಡಿದರೂ ನೆಟ್ಟಿಗರ ಟೀಕೆಗಳಿಂದ ತಪ್ಪಿಸಿಕೊಳ್ಳಲು ಮಾತ್ರ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಇತ್ತೀಚಿನ ಘಟನೆ ಕೂಡ ಒಂದು ಬಲವಾದ ಉದಾಹರಣೆ ಎನ್ನಬಹುದು. ರಶ್ಮಿಕಾ, ಶಾಹೀದ್ ಕಪೂರ್ ಮತ್ತು ಕೃತಿ ಸನೋನ್ ಮುಖ್ಯಭೂಮಿಕೆಯಲ್ಲಿ ಅಭಿನಯದ 'ಕಾಕ್ಟೇಲ್ 2' ಚಿತ್ರದ ಪ್ರಚಾರದ ವೇಳೆ ನಟಿಯ ಒಂದು ಸಣ್ಣ ನಡೆ ಇದೀಗ ಟ್ರೋಲಿಗರಿಗೆ ಆಹಾರವಾಗಿದೆ.
ಇದೇ ಜೂ.19ಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಜ್ಜಾಗಿರುವ ಕಾಕ್ಟೇಲ್ 2 ಚಿತ್ರದ ಪ್ರಚಾರದ ಈವೆಂಟ್ನಲ್ಲಿ ಭಾಗಿಯಾಗಿದ್ದ ವೇಳೆ ನಟ ಶಾಹೀದ್ ತಲೆ ಮೇಲೆ ಕಲರ್ ಪೇಪರ್ಗಳು ಬಿದ್ದಿದ್ದವು. ಇದನ್ನು ನೋಡಿದ ರಶ್ಮಿಕಾ, ನಿಮ್ಮ ಕೂದಲಿನಲ್ಲಿ ಅವು ಸಿಲುಕಿವೆ ಎಂದು ಹೇಳಿದರು. ಆದರಿದು, ಶಾಹೀದ್ಗೆ ಅರ್ಥವಾಗಲಿಲ್ಲ. ತಕ್ಷಣವೇ, ಕೃತಿ ನಟನ ಕೂದಲಿನಿಂದ ಕಲರ್ ಪೇಪರ್ಗಳನ್ನು ತೆಗೆದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ನೆಟ್ಟಿಗರು, 'ಮದುವೆಯಾದ ಮೇಲೂ ಬಿಕಿನಿಯಲ್ಲಿ ನಟನ ಜೊತೆ ಕುಣಿಯೋದಿಕ್ಕೆ ಆಗುತ್ತೆ. ಅದೇ ಒಂದು ಪೇಪರ್ ತುಂಡನ್ನು ತೆಗೆಯಲು ನಿಮ್ಮಿಂದ ಆಗಲಿಲ್ಲ' ಎಂದು ಟೀಕಿಸಿದ್ದಾರೆ.
ಈ ಒಂದು ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದು, ರಶ್ಮಿಕಾ ನಟನ ಹೇರ್ಸ್ಟೈಲ್ ಹಾಳಾಗಬಹುದು ಎಂಬ ಕಾಳಜಿಯಲ್ಲಿ ತೆಗೆಯಲಿಲ್ಲ ಎಂದರೆ, ಅವರ ಮದುವೆಗೂ ಮುನ್ನವೇ ಈ ಚಿತ್ರದ ಶೂಟಿಂಗ್ ಆಗಿತ್ತು ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಾರೆ, ಸೋಷಿಯಲ್ ಮೀಡಿಯಾದಲ್ಲಿ ನಟಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿರುವ ನೆಟ್ಟಿಗರು, ರಶ್ಮಿಕಾ ಏನೇ ಮಾಡಿದ್ರೂ ನಾವಂತು ಅವರನ್ನು ಟೀಕಿಸುವುದನ್ನು ಬಿಡೋದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮುಖ್ಯವಾಗಿ, ರಶ್ಮಿಕಾಗೆ ಇದೆಲ್ಲವೂ ಅಭ್ಯಾಸವಾಗಿದ್ದು, ಇಂತಹ ಟ್ರೋಲ್, ನೆಗೆಟಿವ್ ರಿವ್ಯೂವ್, ಕಮೆಂಟ್ಗಳಿಗೆ ಕ್ಯಾರೇ ಎನ್ನದೆ ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಗಮನಾರ್ಹ,(ಏಜೆನ್ಸೀಸ್).