ಸಿನಿವಾಣಿ

ರಶ್ಮಿಕಾ ನೋಡಲು ಮಾತ್ರ ನಾಜೂಕು... ಆದ್ರೆ ವರ್ಕ್ಔಟ್ ಮಾತ್ರ ಯಾವ ಹೀರೋಗೂ ಕಮ್ಮಿ ಇಲ್ಲ!

ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಮಿಂಚಿ ಈಗ ಬಾಲಿವುಡ್ ಅನ್ನು ಆಳಲು ರೆಡಿಯಾಗಿರುವ ರಶ್ಮಿಕಾ ಮಂದಣ್ಣ ಅವರು ಸದಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಕೇವಲ ಅವರ ಸಿನಿಮಾಗಳಿಂದ ಅಲ್ಲದೇ, ವೈಯಕ್ತಿಕ ಜೀವನ, ಫಿಟ್ನೆಸ್, ಡ್ಯಾನ್ಸ್, ಲೈಫ್ ಸ್ಟೈಲ್ ಆಂತ ಹೀಗೆ ಹಲವಾರು ವಿಚಾರಗಳಿಗೆ ಅವರು ಮಾಧ್ಯಮಗಳಲ್ಲಿ ಹೆಡ್​ಲೈನ್ಸ್ ಆಗುತ್ತಾರೆ. ಇದೀಗ, ಅವರ ಹೊಸದೊಂದು ವಿಡಿಯೋದಿಂದ ಸುದ್ದಿಯಾಗುತ್ತಿದ್ದಾರೆ.
ಅಷ್ಟಕ್ಕೂ, ರಶ್ಮಿಕಾ ಮಂದಣ್ಣ ಅವರು ಹಂಚಿಕೊಂಡ ವಿಡಿಯೋ ಯಾವುದು? ಅದರಲ್ಲಿ ಏನಿದೆ?. ರಶ್ಮಿಕಾ ಮಂದಣ್ಣ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಅವರು ಹಂಚಿಕೊಳ್ಳುವ ಫೋಟೋಗಳು ಮತ್ತು ವಿಡಿಯೋಗಳು ಕಂಡರೆ ಗೊತ್ತಾಗುತ್ತಿದೆ. ಹಾಗೆಯೇ, ನಿನ್ನೆ ನಟಿ ರಶ್ಮಿಕಾ ಅವರ ಒಂದು ವರ್ಕ್ಔಟ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ನೋಡಲು ನಾಜೂಕಾಗಿ ಮತ್ತು ಬಹಳಷ್ಟು ಸುಂದರವಾಗಿ ಕಾಣುವ ನ್ಯಾಷನಲ್ ಕ್ರಶ್, ವರ್ಕೌಟ್ ವಿಚಾರಕ್ಕೆ ಬಂದರೆ ಮಾತ್ರ ಯಾವ ಸೂಪರ್ ಸ್ಟಾರ್ ನಟನಿಗೂ ಕಡಿಮೆ ಇಲ್ಲ.
ಅಂದಹಾಗೆ, ವಿಡಿಯೋದಲ್ಲಿ ಹಲವು ಬಗೆಯ ವ್ಯಾಯಾಮಗಳನ್ನು ಮಾಡಿದ್ದಾರೆ ರಶ್ಮಿಕಾ. ಇನ್ನು, ಯಾವ ಸಿನಿಮಾಗಾಗಿ ನಟಿ ಇಷ್ಟು ಕಸರತ್ತು ಮಾಡುತ್ತಿದ್ದಾರೆ ಎಂಬುದು ತಿಳಿಯದಿದ್ದರೂ, ನಟಿಯ ಅಭಿಮಾನಿಗಳಲ್ಲಿ ಮಾತ್ರ ಈ ವಿಡಿಯೋ ಅಚ್ಚರಿ ಮೂಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹೌದು, ಎಷ್ಟು ಬ್ಯೂಸಿಯಾಗಿದ್ದರೂ ರಶ್ಮಿಕಾ ವರ್ಕೌಟ್ ಮಾಡುವುದನ್ನು ಮಾತ್ರ ಯಾವತ್ತೂ ತಪ್ಪಿಸುವುದಿಲ್ಲ ಎಂಬ ಮಾತಿದೆ. ಹೀಗಾಗಿ, ರಶ್ಮಿಕಾ ಅವರ ಅಭಿಮಾನಿಗಳಿಗೆ ಮತ್ತು ಇತರೆ ಸೆಲೆಬ್ರಿಟಿಗಳಿಗೂ ಪ್ರೇರಣೆ ಎಂದೇ ಹೇಳಬೇಕು.
24 ಸೆಕೆಂಡ್​ಗಳ ಸಣ್ಣ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರು ಯಾವ ಯಾವ ರೀತಿಯ ವರ್ಕೌಟ್ ಮಾಡುತ್ತಾರೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇನ್ನು, ಅಪ್​ಲೋಡ್​ ಮಾಡಿದ ಕೆಲವೇ ಗಂಟೆಗಳಲ್ಲಿ ನಟಿಯ ವಿಡಿಯೋಗೆ 4.8 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದ್ದು, 10 ಸಾವಿರ ಕ್ಕೂ ಹೆಚ್ಚು ಕಮೆಂಟ್​ಗಳನ್ನು ಗಿಟ್ಟಿಸಿಕೊಂಡಿದೆ. ಕೆಲ ದಿನಗಳಿಂದ ನಟಿ ಕೇವಲ ತಮ್ಮ ವರ್ಕ್ಔಟ್ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದು, ಅವರ ಮುಂದಿನ ಯಾವುದೋ ಸಿನಿಮಾಗೆ ನಟಿ ತಯಾರಿ ಮಾಡುತ್ತಿದ್ದಾರೆ ಎಂದು ಭಾವಿಸಲಾಗಿದೆ.