ಬೆಂಗಳೂರು : ಟಾಲಿವುಡ್ನಲ್ಲಿ ನಟಿ ರಶ್ಮಿಕಾ ಮಂದಣ್ಣ ಸಖತ್ ಬಿಜಿಯಾಗಿದ್ದಾರೆ. ಒಂದಾದ ಮೇಲೊಂದರಂತೆ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಈಗಾಗಲೇ, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, ಅದರಲ್ಲಿ ಭಾಗವಹಿಸುತ್ತಿದ್ದಾರೆ. ಇದೆಲ್ಲದರ ನಡುವೆ ಅತಿಥಿ ಸಂಪಾದಕಿಯಾಗಿಯೂ ರಶ್ಮಿಕಾ ಕಾಣಿಸಿಕೊಂಡಿದ್ದಾರೆ ಎನ್ನುವುದು ವಿಶೇಷ.
ಟಾಲಿವುಡ್ ನಟ ರಾಮ್ಚರಣ್ ತೇಜ ಪತ್ನಿ ಉಪಾಸನಾ ಕೊನಿಡೇಲಾ ಯುವರ್ಲೈಫ್ ಹೆಸರಿನ ವೆಬ್ಸೈಟ್ ಶುರುಮಾಡಿದ್ದಾರೆ. ಆ ವೆಬ್ಸೈಟ್ಗೆ ಈ ಸಲದ ಅತಿಥಿ ಸಂಪಾದಕಿಯಾಗಿ ರಶ್ಮಿಕಾ ಆಗಮಿಸಿದ್ದು, ಆರೋಗ್ಯ, ಫಿಟ್ನೆಸ್ ಮತ್ತು ಡಯಟ್ ಪ್ಲಾನ್ ಬಗ್ಗೆ ಒಂದಷ್ಟು ಮಾಹಿತಿಯನ್ನು ನೀಡಿದ್ದಾರೆ.
ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಆರೋಗ್ಯ ಮತ್ತು ಡಯಟ್ ಬಗ್ಗೆ ಸಾಕಷ್ಟು ವಿಡಿಯೋ ತುಣುಕುಗಳನ್ನು ಶೇರ್ ಮಾಡಿಕೊಳ್ಳುವ ರಶ್ಮಿಕಾ, ತಮ್ಮ ಫಿಟ್ನೆಸ್ ಮತ್ತು ಆಹಾರ ಕ್ರಮದ ಬಗ್ಗೆಯೂ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಅದೇ ಮಾಹಿತಿಯನ್ನು ಯುವರ್ ಲೈಫ್ನಲ್ಲಿಯೂ ಹೇಳಿಕೊಂಡಿದ್ದಾರೆ. ಈ ಮೊದಲು ಸಮಂತಾ ಸಹ ಗೆಸ್ಟ್ ಎಡಿಟರ್ ಆಗಿ ಕಾಣಿಸಿಕೊಂಡು, ಆರೋಗ್ಯಕರ ಜೀವನಕ್ಕೆ ಬೇಕಾದ ಅತ್ಯುತ್ತಮ ಅವಶ್ಯಕತೆಗಳ ಬಗ್ಗೆ ಮಾತನಾಡಿದ್ದರು. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಕನ್ನಡದಲ್ಲಿ ‘ಪೊಗರು’ ಸಿನಿಮಾ ಬಿಟ್ಟರೆ ಬೇರಾವ ಚಿತ್ರವನ್ನೂ ರಶ್ಮಿಕಾ ಒಪ್ಪಿಕೊಂಡಿಲ್ಲ. ತೆಲುಗು ಮತ್ತು ತಮಿಳಿನಲ್ಲಿ ಸಾಲುಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.