- ಜೂನ್ 19 ರಂದು ಕಾಕ್ಟೇಲ್-2 ಸಿನಿಮಾ ರಿಲೀಸ್ ಆಗಲು ಸಜ್ಜು
- ಕಾಕ್ಟೇಲ್-2 ಸಿನಿಮಾದ ಹಾಡು ರಿಲೀಸ್ ಮಾಡಿದ ಚಿತ್ರ ತಂಡ
- ಕೃತಿ ಸನೂನ್ ಸೌಂದರ್ಯ ಹೊಗಳುವ ಬರದಲ್ಲಿ F** ಪದ ಬಳಕೆ ಮಾಡಿದ ಕೃತಿ
Cocktail 2ಸಿನಿಮಾದ ಹಾಡು ರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಅವರು, ಕೃತಿ ಸನೂನ್ ಅವರ ಸೌದರ್ಯ ಹಾಟ್ ಎಂದು ಹೊಗಳುವ ಬರದಲ್ಲಿ ಎಫ್**** ಪದ ಬಳಕೆ ಮಾಡಿ ಪೇಚಿಗೆ ಸಿಲುಕಿಕೊಂಡು, ವೇದಿಕೆಯಲ್ಲಿರುವವರೆಲ್ಲ ಹುಬ್ಬೇರಿಸುವಂತೆ ಮಾಡಿದರು.
ಭಾನುವಾರ ರಾತ್ರಿ ಕಾಕ್ಟೇಲ್ ಸಿನಿಮಾದ ಹಾಡು ರಿಲೀಸ್ ಈವೆಂಟ್ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ತಂಡವು ಹೊಸ ಟ್ರ್ಯಾಕ್ ಅನ್ನು ಅನಾವರಣಗೊಳಿಸಿತು. ಇದರಲ್ಲಿ ನಿರ್ಮಾಪಕ ದಿನೇಶ್ ವಿಜನ್, ನಿರ್ದೇಶಕ ಹೋಮಿ ಅದಜಾನಿಯಾ ಮತ್ತು ಸಂಗೀತ ಸಂಯೋಜಕ ಪ್ರೀತಮ್ ಭಾಗವಹಿಸಿದ್ದರು. ಕೃತಿ ಸನೂನ್, ರಶ್ಮಿಕಾ ಮಂದಣ್ಣ ಹಾಗೂ ಶಾಹಿದ್ ಕಪೂರ್ ವೇದಿಕೆ ಮೇಲೆ ನಿಂತಿದ್ದರು.
ಎಫ್ ಪದ ಬಳಸಿ ಮುಜುಗರಕ್ಕೀಡಾದ ರಶ್ಶು
ಈ ವೇಳೆ ರಶ್ಮಿಕಾ ಮಂದಣ್ಣ ಮಾತನಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾಕ್ಟೇಲ್ ಸಿನಿಮಾದಲ್ಲಿ ಏನೋ ಒಂದು ವಿಶೇಷತೆ ಇದೆ. ಕೃತಿ ಸನೂನು ನೀವು ಸಖತ್ ಹಾಟ್ ಆಗಿ ಕಾಣುತ್ತೀರ. ಅದು ಈ ಜಗತ್ತಿಗೆ ಗೊತ್ತು. ನೀವು ಎಫ್***ಹಾಟ್ ಎಂದಿದ್ದಾರೆ. ಅಯ್ಯೋ ಸ್ವಾರಿ ಅದನ್ನು ಸೈಲೆಂಟ್ ಮಾಡಿಬಿಡಿ ಎಂದು ದೊಡ್ಡದಾಗಿ ನಕ್ಕರು, ಬಾಯ್ಮುಚ್ಚಿಕೊಂಡರು. ಅತ್ತಿಂದ ಕೃತಿ ಸನೂನ್ ಅವರು ಓಡಿ ಬಂದು ರಶ್ಮಿಕಾ ಮಂದಣ್ಣ ಅವರನ್ನು ತಂಬ್ಬಿಕೊಂಡರು.
ಈ ಪ್ರಕ್ರಿಯೆಯಿಂದ ಕೊಂಚ ಮುಜುಗರಕ್ಕೊಳಗಾದರೂ ಸಹ ಅಲ್ಲಿದ್ದ ಪ್ರೇಕ್ಷಕರು, ಸಿನಿಮಾ ತಂಡ ಹಾಗೂ ಇನ್ನಿತರರು ಜೋರಾಗಿ ನಕ್ಕು ಚಪ್ಪಾಳೆ ತಟ್ಟಿದರು. ನಂತರ ರಶ್ಮಿಕಾ ಅವರು ತಮ್ಮ ಮಾತು ಮುಂದುವರೆಸಿದರು. ನಾವೆಲ್ಲ ಈ ಸಿನಿಮಾದಲ್ಲಿ ಚೆಂದವಾಗಿ ನಟಿಸಿದ್ದೇವೆ. ಪ್ರತಿಯೊಂದು ದೃಶ್ಯ ಮ್ಯಾಜಿಕಲ್ನಂತಿದೆ. ಈಗ ಟ್ರೈಲರ್ ಅಷ್ಟೇ ಇನ್ನು ಸಾಕಷ್ಟು ವಿಚಾರ ಇದೆ. ಸಿನಿಮಾಗಾಗಿ ಕಾದು ನೋಡಿ ಎಂದಿದ್ದಾರೆ.
ಕಾಕ್ಟೇಲ್ ರಿಲೀಸ್ ಯಾವಾಗಾ?
ಸೋಮಿ ಅದಾಜಾನಿಯಾ ನಿರ್ದೇಶನ ಕಾಕ್ಟೇಲ್ ಸಿನಿಮಾಗೆ ನಿರ್ಮಾಪಕ ದಿನೇಶ್ ವಿಜನ್ ಬಂಡವಾಳ ಹೂಡಿಕೆ ಮಾಡಿದ್ದಾರೆ. ಈ ಚಿತ್ರ ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.2012ರಲ್ಲಿ ಸೂಪರ್ ಹಿಟ್ ಎನಿಸಿಕೊಂಡಿದ್ದ ಕಾಕ್ಟೇಲ್ ಸಿನಿಮಾದ ಮುಂದುವರೆದ ಭಾಗ ಇದಾಗಿದೆ ಎನ್ನಲಾಗುತ್ತಿದೆ. ಕಾಕ್ಟೇಲ್ ಭಾಗ 1ರಲ್ಲಿ ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ನಟಿಸಿದ್ದಾರೆ. ಇದು ಮೂವರು ನಾಯಕಿಯರ ನಡುವಿನ ಪ್ರೇಮ ತ್ರಿಕೋನವನ್ನು ಒಳಗೊಂಡಿತ್ತು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯಿತು ಮತ್ತು 120 ಕೋಟಿ ರೂ.ಗಳಿಗೂ ಹೆಚ್ಚು ಸಂಗ್ರಹಿಸಿತು. (ಏಜೆನ್ಸೀಸ್).