ಬೆಂಗಳೂರು: ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟು ಇದೀಗ ಬಾಲಿವುಡ್ನಲ್ಲಿಯೂ ಹವಾ ಸೃಷ್ಟಿಸಿರುವ ರಶ್ಮಿಕಾ ಮಂದಣ್ಣ, ಇದೀಗ ಮತ್ತೆ ‘ಕಿರಿಕ್ ಪಾರ್ಟಿ’ ಬಗ್ಗೆ ಮಾತನಾಡಿರುವ ಅವರು, ಮತ್ತಿನ್ನೆಂದೂ ‘ಕಿರಿಕ್ ಪಾರ್ಟಿ’ ಮಾಡಲ್ಲ ಎಂದಿದ್ದಾರೆ! ಕನ್ನಡದಲ್ಲಿ ಸೂಪರ್ ಹಿಟ್ ಆದ ಮೇಲೆ ತೆಲುಗಿನಲ್ಲಿ ‘ಕಿರಾಕ್ ಪಾರ್ಟಿ’ ಹೆಸರಿನಲ್ಲಿ ರಿಮೇಕ್ ಆದರೂ ಚಿತ್ರ ಗೆಲ್ಲಲ್ಲಿಲ್ಲ. ಹೀಗಿರುವಾಗಲೇ, ಬಾಲಿವುಡ್ನಲ್ಲಿ ಆ ಚಿತ್ರ ರೀಮೇಕ್ ಆಗುತ್ತಿದ್ದು, ಅದರಲ್ಲಿ ಕಾರ್ತಿಕ್ ಆರ್ಯನ್ ಮತ್ತು ಜಾಕ್ಲೀನ್ ಫರ್ನಾಂಡೀಸ್ ನಾಯಕಿ ಎಂದು ಹೇಳಲಾಗಿತ್ತು.
ಇದುವರೆಗೂ ಆ ಸಿನಿಮಾ ಶುರುವಾಗಿಲ್ಲ. ಹೀಗಿರುವಾಗ ಬಾಲಿವುಡ್ ರಿಮೇಕ್ನಲ್ಲಿಯೂ ನೀವೇ ನಟಿಸಿ ಎಂಬಂಥ ಪ್ರಶ್ನೆಗಳು ರಶ್ಮಿಕಾ ಇನ್ಬಾಕ್ಸ್ಗೆ ಬಂದು ಬೀಳುತ್ತಿದ್ದವು. ಆ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ.
‘ಈಗಾಗಲೇ ನಾನು ‘ಕಿರಿಕ್ ಪಾರ್ಟಿ’ ಮಾಡಿದ್ದೇನೆ. ಒಂದು ಪಾತ್ರವನ್ನು ಅನುಭವಿಸಿ, ಆಸ್ವಾದಿಸಿದ್ದೇನೆ. ಮತ್ತೆ ಅಂಥದ್ದೇ ಪಾತ್ರ ಮಾಡಿದರೆ ಹೊಸತನ ನೀಡಲು ನನ್ನ ಬಳಿ ಏನೂ ಇಲ್ಲ. ನಾನು ಹೊಸ ಕಥೆಗಳನ್ನು ಇಷ್ಟಪಡುತ್ತೇನೆ. ಹೊಸತನದಿಂದ ಕೂಡಿದ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತೇನೆ’ ಎಂದಿದ್ದಾರೆ. ಇನ್ನೂ ಹಲವು ವಿಚಾರಗಳನ್ನು ರಶ್ಮಿಕಾ ಲೈವ್ ಚಾಟ್ನಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಬಾಲಿವುಡ್ನಲ್ಲಿ ಎರಡು ಸಿನಿಮಾ ಒಪ್ಪಿಕೊಂಡಿರುವ ರಶ್ಮಿಕಾ, ಹಿಂದಿ ಕಲಿಯುವಿಕೆಯಲ್ಲಿಯೂ ಬಿಜಿಯಾಗಿದ್ದಾರೆ. ಹಿಂದಿ ಜ್ಞಾನ ಹೆಚ್ಚಿಸಿಕೊಳ್ಳಲು ವಿಶೇಷ ಬೋಧಕರೊಬ್ಬರನ್ನು ನೇಮಿಸಿಕೊಂಡಿದ್ದಾರೆ.