ರಾಮಾಯಣ 
ಸಿನಿವಾಣಿ

ರಾಮಾಯಣ ರಿಲೀಸ್​ ಡೇಟ್​ನಲ್ಲಿ ಬದಲಾವಣೆ; ದೀಪಾವಳಿಗೂ ಮುನ್ನವೇ ಯಶ್​​-ರಣಬೀರ್​ ನಟನೆಯ ಸಿನಿಮಾ ತೆರೆಗೆ..Ramayana

  • ನವೆಂಬರ್​6ಕ್ಕಲ್ಲ ಇದಕ್ಕೂ ಮುನ್ನವೇ 'ರಾಮಾಯಣ' ರಿಲೀಸ್​ಗೆ ಮುಂದಾದ ಸಿನಿಮಾ ತಂಡ

  • ನವೆಂಬರ್​ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ರಿಲೀಸ್

  • ನವೆಂಬರ್ 4 ರಂದು ಭಾರತದಲ್ಲಿ ಪೇಯ್ಡ್​ ಪ್ರಿವ್ಯೂ ಪ್ರದರ್ಶನ

Ramayana Part One' locks its release plan: ನಿತೀಶ್​ ತಿವಾರಿ ಆಕ್ಷನ್​ ಕಟ್ ಹೇಳಿರುವ ಬಹುನಿರೀಕ್ಷಿತ, ದೊಡ್ಡ ಬಜೆಟ್​ ಸಿನಿಮಾ ರಾಮಾಯಣ ರಿಲೀಸ್​ ಬಗ್ಗೆ ಸಿನಿಮಾ ತಂಡ ಬಿಗ್​ ಅಪಡೇಟ್​ವೊಂದನ್ನು ಕೊಟ್ಟಿದೆ. ಪೌರಾಣಿಕ ಕತೆ ಹೇಳುವ ರಾಮಾಯಣ ಪಾರ್ಟ್​ ಒನ್​​ ನವೆಂಬರ್​ 5ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಸಿನಿಮಾ ತಂಡ ಮಾಹಿತಿ ಹಂಚಿಕೊಂಡಿದೆ.

ಹೌದು, ರಣಬೀರ್​ ಕಪೂರ್ ರಾಮನಾಗಿ ನಟಿಸಿರುವ ರಾಮಾಯಣ ಸಿನಿಮಾವು ಭಾರೀ ನಿರೀಕ್ಷೆಯನ್ನು ಹುಟ್ಟಿಸಿದೆ. ನಟಿ ಸಾಯಿಪಲ್ಲವಿ ಸೀತಾ ಮಾತೆಯಾಗಿ, ಯಶ್​ ರಾವಣನಾಗಿ ಅಬ್ಬರಿಸಿದ್ದಾರೆ. ಈ ಸಿನಿಮಾವು ದೀಪಾವಳಿಯಂದು ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ, ಅದಕ್ಕೂ ಮುನ್ನವೇ ಸಿನಿಮಾ ರಿಲೀಸ್​ ಆಗಲಿದೆ.

'ರಾಮಾಯಣ: ಪಾರ್ಟ್ ಒನ್' ಸಿನಿಮಾವು ಭಾರತದಲ್ಲಿ ನವೆಂಬರ್​ 6ಕ್ಕೆ ರಿಲೀಸ್​ ಆಗಲಿದೆ ಎನ್ನಲಾಗಿತ್ತು. ಆದರೆ ಪಿಂಕ್​ ವಿಲ್ಲಾ ವರದಿ ಪ್ರಕಾರ ನವೆಂಬರ್ 5 ಕ್ಕೆ ಮುಂಚಿತವಾಗಿ ಸಿನಿಮಾ ರಿಲೀಸ್ ಆಗಲಿದೆ. ನಿಗದಿಪಡಿಸಲಾಗಿದೆ ನವೆಂಬರ್ 4 ರಂದು ಪೇಯ್ಡ್​ ಪ್ರಿವ್ಯೂ ಪ್ರದರ್ಶನವಿರಲಿದೆ ಎಂದು ಸಿನಿಮಾ ತಂಡ ಮಾಹಿತಿ ಹಂಚಿಕೊಂಡಿದೆ

ವಿದೇಶದಲ್ಲಿ ಬಿಡುಗಡೆ ಎಂದು?

ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ, ಜರ್ಮನಿ, ಯುರೋಪ್ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ರಾಮಾಯಣ ಸಿನಿಮಾವು ನವೆಂಬರ್​ 5ರಂದು ರಿಲೀಸ್​ ಆಗಲಿದೆ. ಇನ್ನೂ ಬಿಟ್ರನ್​, ದಕ್ಷಿಣ ಆಫ್ರೀಕಾ, ಮಾರಿಷಸ್​ನಲ್ಲಿ ನವೆಂಬರ್ 6ರಂದು ರಿಲೀಸ್. ಚೀನಾ, ಜಪಾನ್, ದಕ್ಷಿಣ ಕೊರಿಯಾ, ತೈವಾನ್ ಮತ್ತು ಹಾಂಗ್ ಕಾಂಗ್ ದೇಶಗಳಲ್ಲಿ ರಾಮಾಯಣ ದರ್ಶನವಾಗೋದು ಯಾವಾಗ ಎನ್ನುವ ಫೈನಲ್​ ಡೇಟ್​ ಅನೌನ್ಸ್​ ಆಗಿಲ್ಲ

ಎರಡು ಭಾಗಗಳಾಗಿ ರಿಲೀಸ್​

ರಾಮಾಯಣ ಸಿನಿಮಾವನ್ನು ಎರಡು ಭಾಗಗಳಾಗಿ ವಿಂಗಡನೆ ಮಾಡಲಾಗುತ್ತಿದೆ. ಮೊದಲಾರ್ಧ 'ರಾಮಾಯಣ: ಪಾರ್ಟ್ 1' ನವೆಂಬರ್​5ರಂದು ರಿಲೀಸ್​ ಆಗಲಿದೆ. ಎರಡನೇ ಭಾಗ 'ರಾಮಾಯಣ: ಪಾರ್ಟ್ 2' ಅನ್ನು 2027 ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲು ಸಿನಿಮಾ ತಂಡ ಯೋಜನೆ ಹಾಕಿಕೊಂಡಿದೆ.

ಘಟಾನುಘಟಿ ನಟರಿರುವ ಸಿನಿಮಾ

ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ , ಸಾಯಿ ಪಲ್ಲವಿ ಹಾಗೂ ಯಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇವರೊಂದಿಗೆ ಸನ್ನಿ ಡಿಯೋಲ್, ರವಿ ದುಬೆ, ಇಂದಿರಾ ಕೃಷ್ಣನ್, ಶೀಬಾ ಚಡ್ಡಾ, ಲಾರಾ ದತ್ತಾ, ರಕುಲ್ ಪ್ರೀತ್ ಸಿಂಗ್, ಅರುಣ್ ಗೋವಿಲ್, ವಿವೇಕ್ ಒಬೆರಾಯ್ ಮತ್ತು ಕಾಜಲ್ ಅಗರ್ವಾಲ್​ರಂತಹ ಘಟಾನುಘಟಿ ನಟ-ನಟಿಯರು ಸಿನಿಮಾಕ್ಕಾಗಿ ಬಣ್ಣ ಹಚ್ಚಿದ್ದಾರೆ.

ರಣಬೀರ್​ ಎನು ಹೇಳಿದ್ದರು?

ಶ್ರೀರಾಮನ ಅತಿ ದೊಡ್ಡ ಶಕ್ತಿ ಅವನ ಧನಸ್ಸು ಅಲ್ಲ. ಅವನ ಕ್ಷಮೆ ಅಂದರೆ ಅವರಲ್ಲಿದ್ದ ಕ್ಷಮಿಸುವ ಗುಣ. ಈ ಪಾತ್ರದಲ್ಲಿ ನಟಿಸಲು ನನಗೆ ಎಕ್ಸೈಟ್​ಮೆಂಟ್ ಇರಲಿಲ್ಲ. ಇದೊಂದು ದೊಡ್ಡ ಜವಾಬ್ದಾರಿ ದಿನವೂ ನಾನು ಈ ಪಾತ್ರಕ್ಕೆ ಅರ್ಹನಾಗುವುದಕ್ಕಿಂತ, ಈ ಕಥೆಯ ಮೇಲೆ ಜನರು ಇಟ್ಟಿರುವ ನಂಬಿಕೆಗೆ ಅರ್ಹನಾಗುವುದು ನನ್ನ ಕರ್ತವ್ಯ ಎಂದುಕೊಳ್ಳುತ್ತಿದ್ದೆ ಎಂದು ರಣಬೀರ್​ ಕಪೂರ್​ ಮಾತನಾಡಿದ್ದಾರೆ, (ಏಜೆನ್ಸೀಸ್).