ಸಿನಿವಾಣಿ

ಸೌರವ್ ಆಗ್ತಾರೆ ರಣಬೀರ್; ಕ್ರಿಕೆಟಿಗ ಗಂಗೂಲಿ ಬಯೋಪಿಕ್

ಬಾಲಿವುಡ್​ಗೂ ಬಯೋಪಿಕ್​ಗಳಿಗೂ ಬಿಡದ ನಂಟಿದೆ. ಈಗಲೂ ಸಾಕಷ್ಟು ಬಯೋಪಿಕ್​ಗಳು ನಿರ್ಮಾಣ ಹಂತದಲ್ಲಿದ್ದರೆ, ಮತ್ತೆ ಕೆಲವು ಬಿಡುಗಡೆಗೆ ಸಿದ್ಧವಾಗಿವೆ. ಇದೀಗ ಆ ಪಟ್ಟಿಗೆ ಹೊಸದಾಗಿ ಸೇರ್ಪಡೆ ಆಗುತ್ತಿದೆ ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ ಜೀವನ! ಹೌದು, ಕಳೆದ ಕೆಲ ವರ್ಷಗಳಿಂದ ಇಂಥದ್ದೊಂದು ಸುದ್ದಿ ಹರಿದಾಡುತ್ತಿದೆಯಾದರೂ, ದಾದಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದೀಗ ಕಾಲ ಕೂಡಿ ಬಂದಿದೆ. ಬಯೋಪಿಕ್ ನಿರ್ವಣಕ್ಕೆ ಅವರ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ತೆರೆಮೇಲೆ ರಣಬೀರ್ ಕಪೂರ್ ಗಂಗೂಲಿ ಪಾತ್ರ ಮಾಡಲಿದ್ದಾರಂತೆ. ಈ ವಿಚಾರವನ್ನು ಸ್ವತಃ ಗಂಗೂಲಿ ಹೇಳಿದ್ದಾರೆ. ನಿರ್ದೇಶಕರು ಯಾರು, ನಿರ್ಮಾಣ ಸಂಸ್ಥೆ ಯಾವುದು ಈ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. 250 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ನಿರ್ವಣವಾಗಲಿದೆಯಂತೆ.