ಬಾಲಿವುಡ್ನ ಮುದ್ದಾದ ಜೋಡಿ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಸುದ್ದಿಯನ್ನು ನೀವು ಬಹುಶಃ ಇದೀಗ 9ನೇ ಬಾರಿ ಕೇಳುತ್ತಿರಬೇಕು. ಹೀಗಿದ್ದರೂ, ಈ ಸುದ್ದಿಯ ಬಗೆಗಿನ ಇತ್ತೀಚಿನ ಅಪ್ಡೇಟ್ ಅಂದರೆ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಮದುವೆಯಾಗಲಿದ್ದಾರೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ. ಹೌದು, ಕಳೆದ ವರ್ಷವೇ ಈ ಜೋಡಿಯ ಮದುವೆ ಆಗಬೇಕಿತ್ತು. ನಂತರ, ಈ ವರ್ಷದ ಏಪ್ರಿಲ್ನಲ್ಲಿ ಆಗಬೇಕಿತ್ತು. ಆದರೆ ಏಪ್ರಿಲ್ ತಿಂಗಳಿನಲ್ಲಿ ಅಂತೂ ಖಚಿತವಾಗಿ ಆಗುವುದಿಲ್ಲ ಎಂಬಂತೆ ಕಾಣುತ್ತಿದೆ.
ಯಾಕೆಂದರೆ, ಕೇವಲ 20 ದಿನಗಳ ದೂರದಲ್ಲಿರುವ ಏಪ್ರಿಲ್ 2022 ರಲ್ಲಿ ಮದುವೆಯಾಗಲು ಸಾಧ್ಯವಿಲ್ಲ ಎನ್ನುತ್ತಿವೆ ಕೆಲವು ವರದಿಗಳು. ಹೀಗಾಗಿ, ಸದ್ಯದ ಮಾಹಿತಿಗಳ ಪ್ರಕಾರ, ಕಪೂರ್ ಮತ್ತು ಭಟ್ ಅವರು ಈ ವರ್ಷದ ಅಕ್ಟೋಬರ್‌ನಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರಂತೆ. ಮೂಲಗಳ ಪ್ರಕಾರ, "ನಟಿ ಆಲಿಯಾ ಮತ್ತು ನಟ ರಣಬೀರ್ ಮದುವೆ ವಿಷಯ ಬಂದಾಗ ದಿನಾಂಕಗಳು ಏಕೆ ಹಿಂದಕ್ಕೆ ಮತ್ತು ಮುಂದಕ್ಕೆ ಹೋಗುತ್ತಿವೆ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಈ ಜೋಡಿ," ಎಂದು ತಿಳಿಸಿದ್ದಾರೆ. ಇದೀಗ, ಈ ಜೋಡಿಯ ಅಭಿಮಾನಿಗಳಂತೂ ಅಕ್ಟೋಬರ್ನಲ್ಲಿಯಾದರೂ ಇವರಿಬ್ಬರು ಮದುವೆಯಾಗಲಿ ಎಂದು ಭಾವಿಸುತ್ತಿದ್ದಾರೆ.