ಸಿನಿವಾಣಿ

ಬೋಲ್ಡ್​ ರೀತಿಯ ಪಾತ್ರ ಮಾಡಲು ಸಜ್ಜಾದರೇ ರಮ್ಯಾ ಕೃಷ್ಣ; ತೆಲುಗಲ್ಲಿ ರಿಮೇಕ್​ ಆಗ್ತಿದೆ ಬಾಲಿವುಡ್​ನ ಸೂಪರ್​ ಹಿಟ್​ ಚಿತ್ರ

manjunathktgns

ಬಹುಭಾಷಾ ನಟಿ ರಮ್ಯಾ ಕೃಷ್ಣ ತೆಲುಗು ತಮಿಳು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಪೋಷಕ ಪಾತ್ರಗಳ ಮೂಲಕವೇ ಗಮನಸೆಳೆಯುವ ರಮ್ಯಾ ಕೃಷ್ಣ, ಇದೀಗ ಹೊಸ ಪ್ರಯೋಗವೊಂದಕ್ಕೆ ಅಡಿಯಿಟ್ಟಿದ್ದಾರೆ. ಅಂದರೆ, ಬೋಲ್ಡ್​ ರೀತಿಯ ಪಾತ್ರವನ್ನು ಮೈಮೇಲೆ ಎಳೆದುಕೊಳ್ಳಲು ತಯಾರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಹೌದು, ಬಾಲಿವುಡ್​ನಲ್ಲಿ 2018ರಲ್ಲಿ ತೆರೆಕಂಡು ರಾಷ್ಟ್ರ ಪ್ರಶಸ್ತಿ ಗಿಟ್ಟಿ ಸಿಕೊಂಡ ಅಂಧಾದುನ್​ ಚಿತ್ರ ತೆಲುಗಿನಲ್ಲಿ ರಿಮೇಕ್​ ಆಗುತ್ತಿದ್ದು, ಮೂಲ ಚಿತ್ರದಲ್ಲಿ ಟಬು ಮಾಡಿದ್ದ ಮಾತ್ರವನ್ನು ರಮ್ಯಾ ಕೃಷ್ಣ ನಿಭಾಯಿಸಲಿದ್ದಾರಂತೆ.
ಅಂದಹಾಗೆ ಈಗಾಗಲೇ ವೆಂಕಟಾದ್ರಿ ಎಕ್ಸ್​ಪ್ರೆಸ್​ , ಎಕ್ಸ್​ಪ್ರೆಸ್​ ರಾಜ, ಕೃಷ್ಣಾರ್ಜುನ ಯುದ್ಧಂ ಸಿನಿಮಾ ನಿರ್ದೇಶನ ಮಾಡಿದ್ದ ಮೆರ್ಲಪಾಕ ಗಾಂಧಿ ಇನ್ನು ಶೀರ್ಷಿಕೆ ಅಂತಿಮವಾಗದ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಆಯುಷ್ಮಾನ್ ಖುರಾನಾ ಮಾಡಿದ್ದ ಮಾತ್ರವನ್ನು ತೆಲುಗಿನಲ್ಲಿ ನಿತಿನ್ ನಿಭಾಯಿಸುವುದರ ಜತೆಗೆ ಚಿತ್ರಕ್ಕೆ ಬಂಡವಾಳವನ್ನೂ ಹೂಡುತ್ತಿದ್ದಾರೆ. ಸದ್ಯ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾರಂಗ ಸ್ತಗಿತಗೊಂಡಿದ್ದು, ಲಾಕ್​ಡೌನ್​ ತೆರವು ಮುಗಿಯುತ್ತಿದ್ದಂತೆ ಸಿನಿಮಾ ಕೆಲಸಗಳು ಶುರುವಾಗಲಿವೆ. (ಏಜೆನ್ಸೀಸ್​)