ಸಿನಿವಾಣಿ

ರಂಗಸ್ಥಳಂ ನಂತ್ರ ರಾಮ್ ಚರಣ್-ಸುಕುಮಾರ್ ಕಾಂಬಿನೇಷನ್​ನ ಹೊಸ ಸಿನಿಮಾ ಅನೌನ್ಸ್; ಹೆಸರಿಡದ RC17 ಚಿತ್ರಕ್ಕೆ ಚಿರಂಜೀವಿ ಬೆಂಬಲ

  • ರಂಗಸ್ಥಳಂ ಸಿನಿಮಾ ನಂತರ ಮತ್ತೆ ಒಂದಾದ ನಿರ್ದೇಶಕ ಸುಕುಮಾರನ್​ ಹಾಗೂ ನಟ ರಾಮ್​ ಚರಣ್​​

  • 'RC17'ಗೆ ಹೊಸ ಪ್ರಾಜೆಕ್ಟ್​ಗೆ ತಂದೆ ಚಿರಂಜೀವಿ ಅವರಿಂದ ಸಿಕ್ತು ಭಾರಿ ಬೆಂಬಲ

  • ಮೈತ್ರಿ ಮೂವಿ ಮೇಕರ್ಸ್​​​​ ಹಾಗೂ ಸುಕುಮಾರ್​ ರೈಟಿಂಗ್ಸ್ ಮತ್ತು ಟಿ ಸೀರಿಸ್​ ಬ್ಯಾನರ್​ ಅಡಿ ಸಿನಿಮಾ ನಿರ್ಮಾಣ

ರಂಗಸ್ಥಳಂ ಸಿನಿಮಾ ನಂತರ ನಿರ್ದೇಶಕ ಸುಕುಮಾರನ್​ ಹಾಗೂ ನಟ ರಾಮ್​ ಚರಣ್​​ ಒಟ್ಟಾಗಿ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಭಾನುವಾರ ಇನ್ನೂ ಹೆಸರಿಡದ 'RC17'ಗೆ ಮುಹೂರ್ತ, ಪೂಜಾ ಕೈಂಕರ್ಯ ನಡೆದಿದ್ದು, ಪುತ್ರನ ಹೊಸ ಸಿನಿಮಾಕ್ಕೆ ನಟ ಚಿರಂಜೀವಿ ಕ್ಲಾಪ್ ಮಾಡುವ ಮೂಲಕ ಬೆಂಬಲಕೊಟ್ಟಿದ್ದಾರೆ.

ನ.1ರಂದು ಹೈದರಾಬಾದ್​ನಲ್ಲಿ ನಡೆದ ಪೂಜಾ ಸಮಾರಂಭಕ್ಕೆನಿರ್ದೇಶಕ ಸುಕುಮಾರನ್​, ನಟ ರಾಮ್ ​ಚರಣ್ ಮೈತ್ರಿ ಮೂವಿ ಮೇಕರ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಟ ಚಿರಂಜೀವಿ ಅತಿಥಿಯಾಗಿ ಆಗಮಿಸಿ ತಮ್ಮ ಪುತ್ರನ ಮೊದಲ ಸಿನಿಮಾಕ್ಕೆ ಕ್ಲಾಪ್ ಮಾಡಿದರು. ಈ ಬಗ್ಗೆ ಸಿನಿಮಾ ತಂಡ ಹಾಗೂ ನಟ ರಾಮ್​ ಚರಣ್​ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಆರ್​ಸಿ 17 ಸಿನಿಮಾಕ್ಕೆ ಮುಹೂರ್ತ

ಮೈತ್ರಿ ಮೂವಿ ಮೇಕರ್ಸ್​​​​ ಹಾಗೂ ಸುಕುಮಾರ್​ ರೈಟಿಂಗ್ಸ್ ಮತ್ತು ಟಿ ಸೀರಿಸ್​ ಬ್ಯಾನರ್​ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಇದಾಗಿದೆ. ತಾತ್ಕಾಲಿಕವಾಗಿ ಸಿನಿಮಾಕ್ಕೆ ಆರ್​ಸಿ 17ರಂದು ಇಡಲಾಗಿದೆ. ಸಿನಿಮಾಕ್ಕೆ ನಟಿ ಯಾರು ಎನ್ನುವ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ರಂಗಸ್ಥಳಂ ನಂತರ ಎಂಟು ವರ್ಷದ ಬಳಿಕ ರಾಮ್​ ಚರಣ್​​ ಹಾಗೂ ಸುಕುಮಾರನ್​ ಅವರು ಒಟ್ಟಾಗಿ ಕೆಲಸ ಮಾಡಲು ಸಜ್ಜಾಗಿದ್ದಾರೆ. ಸಿನಿಮಾ ಕಾರ್ಯಕ್ರಮದಲ್ಲಿ ಡೊರೋಥಿ, ಮೊದ ರಾತ್ರಿ ಖ್ಯಾತಿಯ ರಿಷಿಕಾಂತ್​ ಸಹ ಹಾಜರಿದ್ದರು. ಅವರು ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಚರ್ಚೆಗಳು ಆಗುತ್ತಿವೆ.

ಫಸ್ಟ್ ಪೋಸ್ಟರ್ ಹೀಗಿದೆ

ನೀಲಿ ವರ್ಣದ ನವಿಲುಗರಿಯಲ್ಲಿ ಅರ್ಧ ರಾಮ್​ ಚರಣ್​ ಅವರ ಮುಖವಿದೆ. ನೀವು ಎಲ್ಲವನ್ನೂ ಊಹೆ ಮಾಡಿಕೊಳ್ಳಬಹುದು. ಆದರೆ ಅದು ಎಲ್ಲರ ನಿರೀಕ್ಷೆಗೆ ಮೀರಿದ್ದು ಎನ್ನುವ ಶೀರ್ಷಿಕೆಯಡಿ ಇದೆ. ಪೋಸ್ಟರ್​ ಪ್ರಕಾರ ಇದೊಂದು ಆಧ್ಯಾತ್ಮಿಕ ಕೃಷ್ಣನಿಗೆ ಆಧಾರಿಸಿದ ಸಿನಿಮಾವಿರಬಹುದು ಎಂದು ಕೆಲ ನೆಟ್ಟಿಗರು ಊಹೆ ಮಾಡಿಕೊಳ್ಳುತ್ತಿದ್ದರೆ ಇನ್ನೂ ಕೆಲವರು ಇದೊಂದು ಫೀಲ್​ ಗುಡ್ ಮೂವಿಯಾಗಿರಬಹುದು ಎನ್ನುವ ಕಾಮೆಂಟ್​​ಗಳನ್ನು ಮಾಡುತ್ತಿದ್ದಾರೆ.

ಯಾರೆಲ್ಲ ಸಿನಿಮಾದಲ್ಲಿದ್ದಾರೆ?

ಸಿನಿಮಾದ ತಾಂತ್ರಿಕ ತಂಡದಲ್ಲಿ ಛಾಯಗ್ರಾಹಕರಾಗಿ ರತ್ನವೇಲು ಕೆಲಸ ಮಾಡುತ್ತಿದ್ದರೆ, ಅನಿರುದ್ಧ ರವಿಚಂದರ್​​ ಸಂಗೀತ ನಿರ್ದೇಶಕರಾಗಿ ಕೈ ಜೋಡಿಸಿದ್ದಾರೆ. ಉಳಿದ ತಾರಾಗಣ ಮತ್ತು ಇನ್ನಿತರ ತಾಂತ್ರಿಕ ಮುಖ್ಯಸ್ಥರ ಬಗ್ಗೆ ಸಿನಿಮಾ ತ.ಡ ಮಾಹಿತಿ ನೀಡಬೇಕಾಗಿದೆ. ಕಳೆದ 2024ರ ಮಾರ್ಚ್​​ನಲ್ಲಿ ರಾಮ್​ಚರಣ್​ ಅವರು ನಿರ್ದೇಶಕ ಸುಕುಮಾರನ್​ ಅವರೊಂದಿಗೆ ಸಿನಿಮಾ ಮಾಡುತ್ತಿರುವ ಬಗ್ಗೆ ಸೋಶಿಯಲ್​ ಮೀಡಿಯದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ರಾಮ್​ ಚರಣ್​ ಅವರ ಮಗಧೀರ, ರಂಗಸ್ಥಳಂ, ಆರ್​ಆರ್​​ಆರ್​​, ಧ್ರುವ, ಚಿರತಾ,ಎವುಡು ಸಿನಿಮಾಗಳು ಸಾಕಷ್ಟು ಹಿಟ್​ ಕಂಡಿರುವಂತದ್ದು. ಜೊತೆಗೆ ಇವು ಫೀಲ್​ ಗುಡ್ ಸಿನಿಮಾಗಳು. ಹೆಚ್ಚು ಹಿಟ್ ತಂದು ಕೊಟ್ಟ ಸಿನಿಮಾಗಳಾಗಿವೆ. ಆದರೆ, ಪೆದ್ದಿ ಸಿನಿಮಾವು ಅಂದುಕೊಂಡಷ್ಟು ಮಟ್ಟಕ್ಕೆ ಬ್ಲಾಕ್​ ಬ್ಲಸ್ಟರ್ ಹಿಟ್ ಕಂಡಿಲ್ಲ. ಜೊತೆಗೆ ಜಾನ್ವಿ ಕಪೂರ್​ ಅವರನ್ನು ಸಿನಿಮಾಕ್ಕೆ ಬಳಸಿಕೊಂಡ ವಿಧಾನವು ವಿವಾದಕ್ಕೆ ಕಾರಣವಾಗಿತ್ತು.

ರಂಗಸ್ಥಳಂ ನಂತ್ರ ಒಟ್ಟಾದ ಡೈರೆಕ್ಟರ್, ಆಕ್ಟರ್

ಆರ್ಯ, ಆರ್ಯ2, ನೇನೊಕ್ಕಡೆ, ಪುಷ್ಪ, ಜಗದಮ್ ಎನ್ನುವ ಹಿಟ್ ಸಿನಿಮಾಗಳನ್ನು ಸುಕುಮಾರ್​ ಟಾಲಿವುಡ್​ಗೆ ಕೊಟ್ಟಿದ್ದಾರೆ. ಆ ಲಿಸ್ಟ್​ನಲ್ಲಿ ರಂಗಸ್ಥಳಂ ಸಹ ಒಂದು. 2018ರಲ್ಲಿ ರಿಲೀಸ್ ಆದ ರಂಗಸ್ಥಳಂ ಸಿನಿಮಾ ಬ್ಲಾಕ್​ ಬ್ಲಸ್ಟರ್ ಹಿಟ್ ಆಗಿತ್ತು. ರಾಮ್​ ಚರಣ್​, ಸಮಂತಾ ರುತ್​​ ಪ್ರಭು, ಜಗಪತಿ ಬಾಬು, ಪ್ರಕಾಶ್​ ರಾಜ್​ರಂತಹ ಘಟಾನುಘಟಿಯರು ಈ ಸಿನಿಮಾಕ್ಕಾಗಿ ಬಣ್ಣ ಹಚ್ಚಿದ್ದರು. ಸದ್ಯ ಆರ್​​ಸಿ 17 ಸಿನಿಮಾದಲ್ಲಿ ನಟ ರಾಮ್​ ಚರಣ್​ ಹಾಗೂ ನಿರ್ದೇಶಕ ಸುಕುಮಾರನ್​ ಒಟ್ಟಾಗಿ ಕೆಲಸ ಮಾಡಲಿದ್ದಾರೆ, (ಏಜೆನ್ಸೀಸ್).