ಸಿನಿವಾಣಿ

ನಟ ರಾಮ್​ ಚರಣ್ ಜನ್ಮದಿನಕ್ಕೆ ವಿಶೇಷ ಗಿಫ್ಟ್​​ ಕೊಟ್ಟ ಆರ್​ಆರ್​ಆರ್​ ನಿರ್ದೇಶಕ ರಾಜಮೌಳಿ !

ಹೈದರಾಬಾದ್: ಈ ವರ್ಷ ಎಸ್​ಎಸ್ ರಾಜಮೌಳಿ ನಿರ್ದೇಶನದ ಆರ್​​ಆರ್​ಆರ್​ ಸಿನಿಮಾ ಸಿನಿ ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ಚಿತ್ರತಂಡ ಆಲಿಯಾ ಭಟ್ ಜನ್ಮದಿನದ ಪ್ರಯುಕ್ತ ಸೀತಾ ಪಾತ್ರವನ್ನು ರಿವೀಲ್ ಮಾಡಿತ್ತು.

ಇಂದು ಚಿತ್ರದ ಅಲ್ಲೂರಿ ಸೀತಾರಾಮ ರಾಜು ಪಾತ್ರಧಾರಿ ರಾಮ್​ಚರಣ್ ತೇಜ್ ಅವರಿಗೆ ಆರ್​ಆರ್​ಆರ್​ ಚಿತ್ರತಂಡ ಭರ್ಜರಿ ಗಿಪ್ಟ್​ ನೀಡಿದೆ. ಮಾರ್ಚ್ 27 ರಂದು ರಾಮ್​ಚರಣ್ ಅವರ ಜನ್ಮದಿನದ ಪ್ರಯುಕ್ತ ಒಂದು ದಿನ ಮುಂಚಿತವಾಗಿಯೇ ಅಲ್ಲೂರಿ ಸೀತಾರಾಮ ರಾಜು ಪಾತ್ರದ ಪೋಸ್ಟ್​ರ್​ನ್ನು ಬಿಡುಗಡೆ ಮಾಡಿದೆ.

ನಿರ್ದೇಶಕ ಎಸ್​ಎಸ್ ರಾಜಮೌಳಿ ಹಂಚಿಕೊಂಡಿರುವ ಈ ನೂತನ ಪೋಸ್ಟ್​ರ್​ನಲ್ಲಿ ರಾಮ್​ಚರಣ್ ಬಿಲ್ಲು ಬಾಣ ಹಿಡಿದು ಖಡಕ್ ಆಗಿ ಮಿಂಚಿದ್ದಾರೆ. The man of bravery, honour and integrity. Presenting my #AlluriSitaRamaraju to you all... ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಇದೇ ಪೋಸ್ಟ್​ರನ್ನು ರಾಮ್​ಚರಣ್ ಅವರೂ ಕೂಡ ಹಂಚಿಕೊಂಡಿದ್ದು, Bravery, honour and integrity. A man who defined it all! It's my privilege to take on the role of #AlluriSitaRamaraju ಎಂದು ಧನ್ಯವಾದ ತಿಳಿಸಿದ್ದಾರೆ. ಅಂದಹಾಗೇ ರಾಮ್​ಚರಣ್ ಮಾ 27 ಕ್ಕೆ 37 ನೇ ವರ್ಷಕ್ಕೆ ಕಾಲಿಡಲಿದ್ದಾರೆ.

ಸುಮಾರು 400 ಕೋಟಿ ರೂಪಾಯಿ ಬಜೆಟ್​ನ ಚಿತ್ರವಾದ ಆರ್​ಆರ್​ಆರ್​ ನಲ್ಲಿ ರಾಮಚರಣ್, ಜೂನಿಯರ್ ಎನ್​ಟಿಆರ್​, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಅನೇಕ ಖ್ಯಾತ ನಾಮರು ನಟಿಸುತ್ತಿದ್ದಾರೆ. ಈ ವರ್ಷ ಅಕ್ಟೋಬರ್ 31 ಕ್ಕೆ ಸಿನಿಮಾ ರಿಲೀಸ್ ಆಗಲಿದೆ. (ಏಜೇನ್ಸಿಸ್).