ರಾಕುಲ್ ಪ್ರೀತ್ ಸಿಂಗ್ ಕೊನೆಗೂ ತನ್ನ ಪ್ರೇಮಿ ಯಾರು ಎಂಬ ರಹಸ್ಯ ಬಿಚ್ಚಿಟ್ಟಿದ್ದಾರೆ. ರಾಕುಲ್ಗೆ ಲವ್ ಆಗಿದೆ ಎಂಬ ಸುದ್ದಿ ಈ ಹಿಂದೆ ಹಲವು ಸಲ ಮುನ್ನೆಲೆಗೆ ಬಂದಿತ್ತು. ಆದರೆ, ಆ ಅದೃಷ್ಟವಂತ ಯಾರಿರಬಹುದು ಎಂಬ ವಿಚಾರ ಮಾತ್ರ ಗೊತ್ತಾಗಿರಲಿಲ್ಲ. ಅವರಿವರ ಹೆಸರು ತಳುಕು ಹಾಕಿಕೊಂಡರೂ ಅಧಿಕೃತ ಇವರೇ ಎಂದು ಸ್ವತಃ ರಾಕುಲ್ ಹೇಳಿಕೊಂಡಿರಲಿಲ್ಲ. ಇದೀಗ ಆ ಎಲ್ಲದಕ್ಕೂ ರಾಕುಲ್ ಪೂರ್ಣವಿರಾಮ ಇಟ್ಟಿದ್ದಾರೆ.
‘ಈತನೇ ನನ್ನ ಜೀವ, ಈತನೇ ನನ್ನ ಎಲ್ಲ ...’ ಎಂದು ಬಹಿರಂಗವಾಗಿ ಸೋಷಿಯಲ್ ಮೀಡಿಯಾದಲ್ಲಿ ಆತನ ಫೋಟೋ ಜತೆಗೆ ಪೋಸ್ಟ್ ಹಾಕಿದ್ದಾರೆ. ಹಾಗಾದರೆ ಯಾರವರು? ಬಾಲಿವುಡ್ನ ಜನಪ್ರಿಯ ನಟ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ. ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ, ಶುಭಾಶಯಗಳ ಸುರಿಮಳೆಯೇ ಹರಿದುಬಂದಿದೆ. ದಕ್ಷಿಣದ ಮತ್ತು ಬಾಲಿವುಡ್ನ ಸಿನಿಮಾ ಸ್ನೇಹಿತರೆಲ್ಲರೂ ಈ ಜೋಡಿಗೆ ಕಂಗ್ರಾಟ್ಸ್ ಹೇಳಿದ್ದಾರೆ. ‘ಧನ್ಯವಾದ ನನ್ನ ಲವ್. ಈ ವರ್ಷದ ಅತ್ಯುತ್ತಮ ಉಡುಗೊರೆ ನೀನು. ನನ್ನ ಜೀವನಕ್ಕೆ ಬಣ್ಣ ತುಂಬಿದ್ದಕ್ಕೆ ಥ್ಯಾಂಕ್ಯೂ’ ಎಂದು ರಾಕುಲ್ ಹೇಳಿಕೊಂಡಿದ್ದಾರೆ. -ಏಜೆನ್ಸೀಸ್