ಕರಾವಳಿ ಕುವರ ನಟ ರಕ್ಷಿತ್ ಶೆಟ್ಟಿ ಕೇವಲ ಒಳ್ಳೆಯ ನಟ ಮತ್ತು ನಿರ್ದೇಶಕ ಮಾತ್ರವಲ್ಲ, ಅವರು ಒಂದು ಉತ್ತಮ ಬರಹಗಾರ ಎನ್ನುವುದರಲ್ಲಿ ತಪ್ಪಿಲ್ಲ. ನಟ ರಕ್ಷಿತ್ ಅವರು ಬರೆದು ನಿರ್ದೇಶಿಸಿದ 'ಉಳಿದವರು ಕಂಡಂತೆ' ಚಿತ್ರ ನೋಡಿದವರಿಗೆ ನಟನ ಬರವಣಿಗೆಯ ಪ್ರತಿಭೆಯ ಬಗ್ಗೆಯೂ ಪಕ್ಕಾ ಗೊತ್ತಾಗಿರುತ್ತದೆ. ಇನ್ನು, ಸದ್ಯ ರಕ್ಷಿತ್ ಅವರು ಒಳ್ಳೆಯ ಮೂಡ್‌ನಲ್ಲಿ ತಮ್ಮ ಟ್ವಿಟ್ಟರ್‌ನಲ್ಲಿ ಕವನವೊಂದನ್ನು ಬರೆದು ಶೇರ್ ಮಾಡಿಕೊಂಡಿದ್ದಾರೆ.
ಮತ್ತೊಂದೆಡೆ, ರಕ್ಷಿತ್ ಶೆಟ್ಟಿ ಅವರ ಕವನಕ್ಕೆ ಜೊತೆಯಾಗಿ ತಮ್ಮ ಕವನಗಳನ್ನೂ ಹಂಚಿಕೊಳ್ಳುತ್ತಿರುವವರ ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ. ನಟ ರಕ್ಷಿತ್ ಶೆಟ್ಟೆ, ''ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ... ಎದ್ದಾಗ ಹೊಗಳದಿರಿ, ಬಿದ್ದಾಗ ತೆಗಳದಿರಿ... ಆಗು ಹೋಗುಗಳಲಿ ನನ್ನ ಅರಿಯುವ ಯತ್ನ ಮಾಡದಿರಿ ಆಡದಿರಿ ಕಾಡದಿರಿ, ಅಂತ್ಯವ ನಾ ಕಂಡಿಲ್ಲ... ಹಾಡದಿರಿ ಮಂಗಳವ, ಕಥೆ ಇನ್ನು ಮುಗಿದಿಲ್ಲ... '' ಎಂಬ ಈ ಸುಂದರ ಕವನವನ್ನು ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ನಟನ ಈ ಕವತೆಗೆ ನೆಟ್ಟಿಗರು ಅವರ ಕವನನವನ್ನು ಜತೆಗೂಡಿಸಿ ಕಾಮೆಂಟ್ ವಿಭಾಗದಲ್ಲಿ ಬರೆದುಕೊಂಡಿದ್ದಾರೆ.
ಹೀಗೆ ಕಂಡ ಕಾಮೆಂಟ್ಗಳಲ್ಲಿ ಒಂದು ಕವಿತೆ ಮಾತ್ರ ಬಹಳಷ್ಟು ಗಮನ ಸೆಳೆಯುತ್ತಿದೆ. ಅದುವೆ, ''ಕಟ್ಟುಕಥೆ ಕೇಳದಿರಿ,ನಿಟ್ಟುಸಿರ ಬಿಡದಿರಿ ಇರುವ ಜೋಪಡಿಯೆ ನನ್ನ ಅರಮನೆಯು ಎದ್ದಾಗ ಬಿಳದಿರಿ,ಬಿದ್ದಾಗ ಎದ್ದೇಳಿರಿ ಹಾಡದಿರಿ ಮಂಗಳವ,ಕಥೆ ಇನ್ನು ಮುಗಿದಿಲ್ಲ.. ಅಂತ್ಯವ ನಾ ಕಂಡಿಲ್ಲ..'' ಎಂದು 'ಗಿರಿಶ್ ಮೈಸೆಲ್ಫ್' ಎಂಬ ಒಬ್ಬ ಟ್ವಿಟರ್ ಬಳಕೆದಾರರು ಬರೆದುಕೊಂಡಿರುವುದು. ಸದ್ಯ, ಅವರ ಕವಿತೆಗೆ ಬರುತ್ತಿರುವ ಪ್ರತಿಕ್ರಿಯೆಗಳು ಕಂಡು ನಟ ರಕ್ಷಿತ್ ಶೆಟ್ಟಿ ದಿಲ್ ಖುಷ್ ಆಗಿದ್ದಾರೆ.