ಸಿನಿವಾಣಿ

ಮಧ್ಯಮ ವರ್ಗದ ಜನರ ಮರ್ಯಾದೆ ಪ್ರಶ್ನೆ ; ಆ್ಯಂತೆಮ್​ ರಿಲೀಸ್​ ಮಾಡಿದ ಚಿತ್ರತಂಡ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಾಗರಾಜ್​ ಸೋಮಯಾಜಿ ಚೊಚ್ಚಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳಿರುವ ಸಿನಿಮಾ ಮರ್ಯಾದೆ ಪ್ರಶ್ನೆ. ಈ ಚಿತ್ರವನ್ನು ಸಕ್ಕತ್​ ಸ್ಟುಡಿಯೋ ಬ್ಯಾನರ್​ನಲ್ಲಿ ಆರ್​ಜೆ ಪ್ರದೀಪಾ ಮೊದಲ ಬಾರಿಗೆ ನಿರ್ಮಿಸಿದ್ದು, ಇತ್ತೀಚೆಗಷ್ಟೆ ಚಿತ್ರದ ಮೊದಲ ಹಾಡು, ಮಿಡಲ್​ ಕ್ಲಾಸ್​ ಆ್ಯಂತೆಮ್​ ರಿಲಿಸ್​ ಮಾಡಲಾಗಿದೆ.

ಪ್ರಮೋದ್​ ಮರವಂತೆ ಸಾಹಿತ್ಯ, ಅರ್ಜುನ್​ ರಾಮು ಸಂಗೀತದಲ್ಲಿ ನಟ ಶರಣ್​ ಈ ಹಾಡಿಗೆ ಧ್ವನಿಯಾಗಿದ್ದಾರೆ. ಹಾಡಿನಲ್ಲಿ ಚಿತ್ರದ ಕಲಾವಿದರ ಪಾತ್ರ ಪರಿಚಯ ಮಾಡುವುದರ ಜತೆಗೆ ಅವರ ಮಿಡಲ್​ ಕ್ಲಾಸ್​ ಜೀವನದ ಝಲಕ್​ ನೀಡಲಾಗಿದೆ. ಮರ್ಯಾದೆ ಪ್ರಶ್ನೆಯಲ್ಲಿ ರಾಕೇಶ್​ ಅಡಿಗ ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ, ಸುನಿಲ್​ ರಾವ್​ ಡೆಲಿವರಿ ಬಾಯ್​ ಪಾತ್ರದಲ್ಲಿ, ಪೂರ್ಣಚಂದ್ರ ಮೈಸೂರು ಕ್ಯಾಬ್​ ಡ್ರೈವರ್​ ಆಗಿ, ನಟಿ ತೇಜು ಬೆಳವಾಡಿ ಸೇಲ್ಸ್​ ಗರ್ಲ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಧ್ಯಮ ವರ್ಗದ ಜನರ ಜೀವನದ ಕುರಿತ ಕಥೆಯಿರುವ ಈ ಚಿತ್ರವನ್ನು ನಿರ್ದೇಶಕ ನಾಗರಾಜ ಸೋಮಯಾಜಿ ಹಾಸ್ಯದ ಮೂಲಕ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಸಿನಿಮಾ ಇದೇ ನ. 22ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.