ಮೈಸೂರಿನಲ್ಲಿ ಕಾಲಿವುಡ್ನ ಧರ್ಮನ್ ಸಿನಿಮಾ ಶೂಟಿಂಗ್
ಆಟೋದಲ್ಲಿ ಸಿನಿಮಾಕ್ಕಾಗಿ ಪ್ರಯಾಣಿಸಿದ ಸೂಪರ್ ಸ್ಟಾರ್ ರಜನಿಕಾಂತ್
ಮೈಸೂರಿನ ಚಾಮುಂಡಿ ದರ್ಶನ ಪಡೆದ ವಿಡಿಯೋಗಳು ವೈರಲ್
Rajinikanth in Mysuru for dharman cinema shooting: ಅಕ್ಟೋಬರ್ 15ರಂದು ಜೈಲರ್ 2 ಸಿನಿಮಾ ಬೆಳ್ಳಿತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಈ ಹೊತ್ತಿನಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಅವರ ಮುಂಬರುವ ಸಿನಿಮಾ ಧರ್ಮನ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಮೈಸೂರಿನಲ್ಲಿ ಚಿತ್ರದ ಸೆಟ್‌ನಲ್ಲಿ ಹಾಗೂ ಚಾಮುಂಡೇಶ್ವರಿ ದರ್ಶನ ಪಡೆದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಓ ಮೈ ಕಡುವುಲೆ, ಡ್ರ್ಯಾಗನ್, ತೆಲುಗು ರಿಮೇಕ್ ಸಿನಿಮಾವಾದ ಒರಿ ದೇವುಡ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿ ಹಿಟ್ ಕೊಟ್ಟಿರುವ ನಿರ್ದೇಶಕ ಅಶ್ವಥ್ ಮಾರಿಮುತ್ತು ಅವರು ರಜನೀಕಾಂತ್ ಅವರ ಮುಂದಿನ ಸಿನಿಮಾ ಧರ್ಮನ್ಗಾಗಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಧರ್ಮನ್ ಸಿನಿಮಾದ ಚಿತ್ರೀಕರಣಕ್ಕಾಗಿ ಸೂಪರ್ ಸ್ಟಾರ್ ರಜನೀಕಾಂತ್ ಅವರು ಮೈಸೂರಿನಲ್ಲಿ ತಂಗಿದ್ದು, ಸೋಮಾನಾಥ ಪುರದಲ್ಲಿ ಸಿನಿಮಾದ ಹಲವು ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದೆ. ಬುಧವಾರಚಾಮುಂಡೇಶ್ವರಿ ದರ್ಶನ ಪಡೆದುಕೊಂಡಿದ್ದಾರೆ. ಬಿಳಿ ಪಂಚೆ, ಶರ್ಟ್ ಹಾಗೂ ಶಾಲು ಧರಿಸಿ ದೇಗುಲದಿಂದ ಹೊರಕ್ಕೆ ಬರುವಾಗ ಅವರನ್ನು ಕಂಡ ಅಭಿಮಾನಿಗಳು ಹೋ ಎಂದು ಕೂಗಾಡಿದ್ದಾರೆ.
ಧರ್ಮನ್ ಸಿನಿಮಾವು ಶೂಟಿಂಗ್ ನಡೆಯುತ್ತಿದ್ದ ಸೆಟ್‌ನಲ್ಲಿ ರಜನೀಕಾಂತ್ ನೋಡಲು ಫ್ಯಾನ್ಸ್ ದಂಡು ಆಗಮಿಸಿತ್ತು. ಈ ವೇಳೆ ಹಳದಿ ಹಾಗೂ ಹಸಿರು ಮಿಶ್ರಿತ ಆಟೋದಲ್ಲಿ ಬಂದರು. ಭದ್ರತಾ ತಂಡ ಗೇಟ್ ಮುಚ್ಚಲು ಯತ್ನಿಸಿತು. ಆದರೂ ಆಟೋದಿಂದ ಕೆಳಕ್ಕಿಳಿದು ಬಂದ ಅವರು ನೇರ ಫ್ಯಾನ್ಸ್ನತ್ತ ತೆರಳಿ, ಕೈ ಬೀಸಿ ಎಲ್ಲರಿಗೂ ಜೊತೆಗೆ 2002ರಲ್ಲಿ ರಿಲೀಸ್ ಆಗಿದ್ದ ಬಾಬಾ ಚಿತ್ರದದಲ್ಲಿ ನಮಸ್ಕರಿಸುವಂತೆ ಅಭಿಮಾನಿಗಳತ್ತ ಕೈ ಸನ್ನೆ ಮಾಡಿದರು. ಈ ವೇಳೆ ಬಿಳಿ ಪಂಚೆ ಹಾಗೂ ಮರೂನ್ ಬಣ್ಣದ ಶರ್ಟ್ ಅನ್ನು ಅವರು ತೊಟ್ಟಿದ್ದರು.
ಧರ್ಮನ್ ಸಿನಿಮಾದಲ್ಲಿ ರಜನಿಕಾಂತ್, ಸಿಮ್ರಾನ್, ರಾಶಿ ಖನ್ನಾ ಮತ್ತು ಯೋಗಿ ಬಾಬು ಹಾಗೂ ರಾಮ್ ಪೋತಿನೇನಿ, ಶ್ರೀ ಲೀಲಾ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಪ್ರಕಾರ ಶ್ರೀಲೀಲಾ ಮೈಸೂರಿನ ಧರ್ಮನ್ ಸೆಟ್‌ನಲ್ಲಿ ಗುಲಾಬಿ ಮತ್ತು ನೀಲಿ ಬಣ್ಣದ ಲಂಗದಾವಣಿ ತೊಟ್ಟಿರುವುದು ದೃಶ್ಯದಲ್ಲಿ. ಜೊತೆಗೆ ರಾಮ್ ಪೋತಿನೇನಿ, ರಾಶಿ ಖನ್ನಾ ಹಾಗೂ ರಜನೀಕಾಂತ್ ಅವರು ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋಗಳು ಸಹ ಇವೆ. ಆದರೆ, ಈ ಸಿನಿಮಾದ ಭಾಗವಾಗಿ ಇವರು ಇದ್ದಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಈ ವರ್ಷದ ಜೂನ್‌ನಲ್ಲಿ ಅನೌನ್ಸ್ ಮಾಡಲಾಗಿದ್ದ ಕಮಲ್ ಹಾಸನ್ ನಿರ್ಮಿಸುತ್ತಿರುವ ಚಿತ್ರಕ್ಕೆ ಧರ್ಮನ್ ಎಂದು ಹೆಸರಿಸಲಾಗಿದೆ. ಅಶ್ವತ್ ಮಾರಿಮುತ್ತು ಅದನ್ನು ನಿರ್ದೇಶಿಸಲಿದ್ದಾರೆ ಎಂದು ಘೋಷಿಸಿದರು. ಫಸ್ಟ್-ಲುಕ್ ಪೋಸ್ಟರ್‌ನಲ್ಲಿ ರಜನಿಕಾಂತ್ ಅವರು ಡಾಕ್ಟರ್ ಕೋಟ್ ತೊಡ್ಡು ರಕ್ತಸಿಕ್ತ ಸ್ಕಾಲ್ಪೆಲ್‌ನೊಂದಿಗೆ ಶಸ್ತ್ರಚಿಕಿತ್ಸಾ ಥಿಯೇಟರ್‌ನಲ್ಲಿ ನಿಂತಿರುವುದು ಇದೆ. ಅವರ ಪಾದಗಳ ಬಳಿ ಮೃತ ದೇಹಗಳನ್ನು ಹೊಲಿಯಲಾಗಿರುವುದನ್ನು ತೋರಿಸಲಾಗಿದೆ, (ಏಜೆನ್ಸೀಸ್).