ಸಿನಿವಾಣಿ

ಮತ್ತೆ ಫೀಲ್ಡಿಗಿಳಿದ ನಟಿ ರಾಗಿಣಿ; ಸ್ಮಶಾನ ಸಿಬ್ಬಂದಿಗೆ ಆಹಾರ ಸಾಮಾಗ್ರಿ ವಿತರಣೆ

Mandara

ಬೆಂಗಳೂರು: ಕರೊನಾದ ಎರಡನೇ ಅಲೆ ಕರ್ನಾಟಕ ಜನರ ಜೀವನವನ್ನು ಸಂಪೂರ್ಣವಾಗಿ ಹಾಳುಗೆಡವಿದೆ. ಹೀಗಿರುವಾಗ ಅನೇಕ ತಾರೆಯರು, ನಾಯಕರು ಸಹಾಯ ಹಸ್ತ ಚಾಚುವುದಕ್ಕೆ ಮುಂದಾಗಿದ್ದಾರೆ. ಅದೇ ನಿಟ್ಟಿನಲ್ಲಿ ನಟಿ ರಾಗಿಣಿ ದ್ವಿವೇದಿ ಕೂಡ ಬಡವರ ಸಹಾಯಕ್ಕೆ ಮುಂದಾಗಿದ್ದಾರೆ.

ನಟಿ ರಾಗಿಣಿ ದ್ವಿವೇದಿ ಜಿನೆಕ್ಸ್ಟ್‌ ಚಾರಿಟೆಬಲ್‌ ಟ್ರಸ್ಟ್‌ ನೇತೃತ್ವದಲ್ಲಿ ಸ್ಮಶಾನ ಸಿಬ್ಬಂದಿಯ ಸಹಾಯ ಮಾಡಿದ್ದಾರೆ. ಕಾಕ್ಸ್‌ ಟೌನ್‌ ಹತ್ತಿರ ಕಲ್ಪಹಳ್ಳಿ ಹಾಗೂ ಭಾರತಿ ನಗರದ ಸ್ಮಶಾನದಲ್ಲಿ ದುಡಿಯುವ ಸಿಬ್ಬಂದಿಗೆ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗಿದೆ.

ಅಂದ ಹಾಗೆ ಕಳೆದ ವರ್ಷ ಕರೊನಾ ಅಲೆ ಹೆಚ್ಚಿದ್ದಾಗಲೂ ರಾಗಿಣಿ ಬಡವರ ಕಷ್ಟಕ್ಕೆ ಮಿಡಿದಿದ್ದರು. ಬೆಂಗಳೂರಿನ ಗಲ್ಲಿ ಗಲ್ಲಿಗಳಿಗೆ ಅಲೆದು ಸಾಕಷ್ಟು ಜನರಿಗೆ ಆಹಾರ ಸಾಮಾಗ್ರಿ ನೀಡಿದ್ದರು.