ಸಿನಿವಾಣಿ

ಮೂಕ ಪ್ರಾಣಿಗಳ ಸಹಾಯಕ್ಕೆ ರಾಗಿಣಿ

chetannadiger

ಇತ್ತೀಚೆಗಷ್ಟೇ ತಮ್ಮ ಕುಟುಂಬದವರ ಜತೆಗೆ ಸೇರಿ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಆಹಾರ ತಯಾರಿಸಿ, ಅವರ ಹೊಟ್ಟೆ ತುಂಬಿಸಿದ್ದ ರಾಗಿಣಿ, ಈಗ ಇನ್ನೊಂದು ಜನ ಮೆಚ್ಚುವ ಕೆಲಸ ಮಾಡಿದ್ದಾರೆ.

ಶುಕ್ರವಾರ ಫ್ರೇರೇಜರ್ ಟೌನ್‌ನಲ್ಲಿರುವ ಅತೀ ಪುರಾತನವಾದ ಕೊಟ್ಟಿಗೆಗೆ ಭೇಟಿ ಕೊಟ್ಟ ಅವರು, ಹಸುಗಳಿಗೆ ಮೇವು ಹಾಕಿದ್ದಾರೆ. ಫ್ರೇಜರ್​ ಟೌನ್​ನ ಕೊಟ್ಟಿಗೆಯಲ್ಲಿ 13 ರಾಸುಗಳಿದ್ದು, ಅವುಗಳಿಗೆ ಸೂಕ್ತವಾದ ಮೇವು ಇಲ್ಲದೆ ಕಸಾಯಿಖಾನೆಗೆ ಕಳಿಸುಲು ತೀರ್ಮಾನಿಸಲಾಗಿತ್ತಂತೆ. ಈ ಸಂದರ್ಭದಲ್ಲಿ ಅಲ್ಲಿಗೆ ಹೋದ ರಾಗಿಣಿ ಮತ್ತು ತಂಡ, ಅದನ್ನು ತಡೆದಿದ್ದಲ್ಲದೆ, ಹಸುಗಳಿಗೆ ಮೇವು ಹಾಕಿದ್ದಾರೆ.

ಅಷ್ಟೇ ಅಲ್ಲ, ಅಲ್ಲಿರುವ ಹಸುಗಳಿಗೆ ಅಗತ್ಯವಿರುವ ಮೇವನ್ನು ಪೂರೈಸುವ ಮೂಲಕ ಮೂಕ ಪ್ರಾಣಿಗಳ ಸಹಾಯಕ್ಕೆ ನಿಂತಿರುವ ರಾಗಿಣಿ, ಇತರರಿಗೂ ಸಹಾಯ ಮಾಡುವುದಕ್ಕೆ ಮನವಿ ಸಲ್ಲಿಸಿದ್ದಾರೆ.