ಚಿತ್ರರಂಗದಿಂದ ದೂರವಿದ್ದ ರಾಘವೇಂದ್ರ ರಾಜ್ಕುಮಾರ್ ‘ಅಮ್ಮನ ಮನೆ’ ಮೂಲಕ ಕಮ್್ಯಾಕ್ ಮಾಡಿದ್ದರು. ಆ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ‘ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ’ ಲಭಿಸಿದ ಖುಷಿಯನ್ನು ವಿಜಯವಾಣಿ ಜತೆ ಹಂಚಿಕೊಂಡಿದ್ದಾರೆ.
ನನಗೆ ಒಂದು ಸ್ಪೂರ್ತಿ ಸಿಕ್ಕಿತು. ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದು ಖುಷಿ ತಂದಿದೆ. ನಮ್ಮ ಮನೆಯ ವರೇ ಬೆನ್ನು ತಟ್ಟಿದಂತೆ ಆಯಿತು. ಅಪ್ಪಾಜಿ-ಅಮ್ಮ ಇಬ್ಬರನ್ನೂ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರಿಬ್ಬರೂ ಇದ್ದಿದ್ದರೆ ಹಬ್ಬ ಮಾಡಿರೋರು, ಖುಷಿ ಪಟ್ಟಿರೋರು, ಬಿಗಿದಪ್ಪಿ ಮುತ್ತಿಕ್ಕಿರೋರು.
ತುಂಬ ಖುಷಿಯಾಯ್ತು. ಯಾವಾಗ ಪ್ರಶಸ್ತಿಗೆ ಆಯ್ಕೆ ಆದೆ ಎಂಬುದು ಮಹತ್ವದ್ದು. ಜೀವನ ಮುಗಿದು ಹೋಯಿತು ಎಂದುಕೊಂಡಿದ್ದ ನನಗೆ, ‘ಇಲ್ಲಪ್ಪ, ಇನ್ಮೇಲೇ ಇರೋದು ಜೀವನ.. ಇನ್ನೂ ಬೇಕಾದಷ್ಟಿದೆ..’ ಎಂದು ಅನಿಸುವಂತೆ ಈ ಪ್ರಶಸ್ತಿ ಮಾಡಿದೆ. ಇನ್ನೂ ಹಲವು ಸಿನಿಮಾ ಮಾಡೋಣ. ಇದೆಲ್ಲದಕ್ಕಿಂತ ಇನ್ನೂ ಬೇರೆ ಏನೋ ಬರುವುದಿದೆ. ಸದ್ಯಕ್ಕೆ ದೇವರು ಸ್ಯಾಂಪಲ್ ತೋರಿಸಿದ್ದಾನೆ. ಅದಕ್ಕೆ ನನ್ನ ಉಳಿಸಿರಬೇಕು ಅನಿಸುತ್ತಿದೆ.
ಹಾಗೇನೂ ಇಲ್ಲ, ಖುಷಿ ಇದೆ. ನಮ್ಮ ಮನೆಯಲ್ಲಿ ನಮ್ಮತಂದೆಗೆ, ತಾಯಿಗೆ, ಅಣ್ಣನಿಗೆ, ತಮ್ಮನಿಗೆ, ‘ಪ್ರೇಮದ ಕಾಣಿಕೆ’ ಸಿನಿಮಾದಲ್ಲಿ ಬಾಲನಟಿಯಾಗಿದ್ದ ತಂಗಿ ಪೂರ್ಣಿಮಾಗೂ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಆದರೆ, ನನಗೆ ಒಂದೂ ಪ್ರಶಸ್ತಿ ಸಿಕ್ಕಿರಲಿಲ್ಲ. ಕಮ್್ಯಾಕ್ ಮಾಡಿದ ‘ಅಮ್ಮನ ಮನೆ’ ಚಿತ್ರಕ್ಕೆ ಬಂದಿದೆ ಎಂದರೆ, ಅದು ಅಮ್ಮನ ಆಶೀರ್ವಾದವೇ ಇರಬೇಕು. ಈ ಪ್ರಶಸ್ತಿ ನನಗೊಬ್ಬನಿಗಲ್ಲ, ನನ್ನ ಕಮ್್ಯಾಕ್ಗೆ ಕಾರಣರಾದವರಿಗೆಲ್ಲ ಸಲ್ಲಬೇಕು.
ಧ್ರುವ ಜತೆ ‘ಪೊಗರು’ ಶೂಟಿಂಗ್ ಮುಗಿಯಿತು, ಡಬ್ಬಿಂಗ್ ಕೂಡ. ನಿಜಜೀವನದಲ್ಲಂತೂ ರಾಜಕೀಯಕ್ಕೆ ಹೋಗಲ್ಲ. ‘ವಾರ್ಡ್ ನಂಬರ್ 11’ರಲ್ಲಿ ರಾಜಕಾರಣಿ ಆಗಿದ್ದೇನೆ. ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಕುರಿತ ‘ಶ್ರೀ’ ಸಿನಿಮಾ ಕೆಲಸಗಳು ನಡೆಯುತ್ತಿವೆ.
ಈ ವರೆಗೂ ನನಗೆ ಯಾವುದೇ ಅವಾರ್ಡ್ ಬಂದಿಲ್ಲ. ಸ್ಟೇಜ್ ಮೇಲೆ ಹೋಗಿ ಪಡೆಯುತ್ತಿರುವ ಮೊದಲ ಪ್ರಶಸ್ತಿ ಇದು. ಇದಕ್ಕೆ ಕಾರಣರಾದ ನಿರ್ದೇಶಕ ನಿಖಿಲ್ ಮಂಜೂ ಅವರಿಗೆ ಈ ಪ್ರಶಸ್ತಿ ಸಲ್ಲಬೇಕು. ಏಕೆಂದರೆ, ಸ್ಟ್ರೋಕ್ ಆದಾಗ, ಡಾಕ್ಟರ್ ನನಗೆ ಬರೀ 48 ಗಂಟೆ ಸಮಯ ಕೊಟ್ಟಿದ್ದರು. ಮನೆಗೆ ಬರುವುದು ಗ್ಯಾರಂಟಿ ಇರಲಿಲ್ಲ. ‘ರಾಘಣ್ಣ ಎದ್ದು ಮನೆಗೆ ಬರುತ್ತಾರೆ ನೋಡಿ’ ಎಂದಿದ್ದರು. ಈಗ ಅದೇ ರಾಘಣ್ಣ ಎದ್ದು ಬಂದು ಸಿನಿಮಾ ಮಾಡಿದ್ದಾನೆ. ಇದು ಸುಲಭವೂ ಅಲ್ಲ. 40 ದಿನ ನಟಿಸಿ, ಜನರ ಮೆಚ್ಚುಗೆ ಪಡೆದು, ಅವಾರ್ಡ್ ಪಡೆಯುವುದು ಸಣ್ಣ ವಿಷಯವಲ್ಲ. ನನ್ನ ಕಮ್್ಯಾಕ್ ಒಂಥರಾ ಮಿರಾಕಲ್. ಇಡೀ ಚಿತ್ರತಂಡಕ್ಕೆ ಈ ಪ್ರಶಸ್ತಿ ಸಲ್ಲಬೇಕು.