ಮಹಾವೀರ ಕರ್ಣ ಪೋಸ್ಟರ್ instagram
ಸಿನಿವಾಣಿ

ರಾಘವ ಲಾರೆನ್ಸ್ ‘ಮಹಾವೀರ ಕರ್ಣ’: ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ತಮಿಳು ನಟ

ಮಹಾಭಾರತದಲ್ಲಿ ವೀರ, ಶೌರ್ಯ ಹಾಗೂ ದಾನಕ್ಕೆ ಹೆಸರುವಾಸಿಯಾಗಿದ್ದ ಕರ್ಣನ ಕುರಿತಂತೆ ಪ್ಯಾನ್ ಇಂಡಿಯಾ ಚಿತ್ರವೊಂದು ಇತ್ತೀಚೆಗೆ ಘೋಷಣೆಯಾಗಿದೆ. ಚಿತ್ರಕ್ಕೆ ‘ಮಹಾವೀರ ಕರ್ಣ’ ಎಂದು ಹೆಸರಿಡಲಾಗಿದೆ. ತೆಲುಗಿನ ‘ರಾಕ್ಷಸುಡು’, ‘ಖಿಲಾಡಿ’ ಖ್ಯಾತಿಯ ರಮೇಶ್ ವರ್ಮಾ ಆ್ಯಕ್ಷನ್-ಕಟ್ ಹೇಳುತ್ತಿದ್ದು, ತಮಿಳು ನಟ, ನಿರ್ದೇಶಕ, ನೃತ್ಯ ನಿರ್ದೇಶಕ ರಾಘವ ಲಾರೆನ್ಸ್ ‘ಕರ್ಣ’ನಾಗಿ ಕಾಣಿಸಿಕೊಳ್ಳಲಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಪೌರಾಣಿಕ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಆಧರಿಸಿ ಹಲವು ಸಿನಿಮಾಗಳು ಬಂದಿವೆ, ಬರುತ್ತಿವೆ. ಇದೇ 25ರಂದು ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ತೆರೆಗೆ ಬರುತ್ತಿದ್ದು, ನಿತೇಶ್ ತಿವಾರಿ ನಿರ್ದೇಶನದಲ್ಲಿ ಯಶ್, ರಣಬೀರ್ ಕಪೂರ್, ಸಾಯಿಪಲ್ಲವಿ ನಟಿಸಿರುವ ‘ರಾಮಾಯಣ’ ದೀಪಾವಳಿ ಹಬ್ಬದ ಸಮಯದಲ್ಲಿ ರಿಲೀಸ್ ಆಗಲಿದೆ. ಹಾಗೆಯೇ, ಮಹಾಭಾರತ ಆಧಾರಿಸಿ ಸಿನಿಮಾಗಳನ್ನು ನಿರ್ಮಿಸಲು ಹಲವು ಚಿತ್ರತಂಡಗಳು ಮುಂದೆ ಬರುತ್ತಿವೆ. ಹೀಗಿರುವಾಗಲೇ, ಮಹಾಭಾರತದಲ್ಲಿ ವೀರ, ಶೌರ್ಯ ಹಾಗೂ ದಾನಕ್ಕೆ ಹೆಸರುವಾಸಿಯಾಗಿದ್ದ ಕರ್ಣನ ಕುರಿತಂತೆ ಪ್ಯಾನ್ ಇಂಡಿಯಾ ಚಿತ್ರವೊಂದು ಇತ್ತೀಚೆಗೆ ಘೋಷಣೆಯಾಗಿದೆ. ಚಿತ್ರಕ್ಕೆ ‘ಮಹಾವೀರ ಕರ್ಣ’ ಎಂದು ಹೆಸರಿಡಲಾಗಿದೆ. ತೆಲುಗಿನ ‘ರಾಕ್ಷಸುಡು’, ‘ಖಿಲಾಡಿ’ ಖ್ಯಾತಿಯ ರಮೇಶ್ ವರ್ಮಾ ಆ್ಯಕ್ಷನ್-ಕಟ್ ಹೇಳುತ್ತಿದ್ದು, ತಮಿಳು ನಟ, ನಿರ್ದೇಶಕ, ನೃತ್ಯ ನಿರ್ದೇಶಕ ರಾಘವ ಲಾರೆನ್ಸ್ ‘ಕರ್ಣ’ನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಘೋಷಣೆ ಹಿನ್ನೆಲೆಯಲ್ಲಿ ‘ಮಹಾವೀರ ಕರ್ಣ’ನ ಸ್ಟ್ ಲುಕ್ ರಿವೀಲ್ ಮಾಡಲಾಗಿದ್ದು, ರಕ್ಷಾಕವಚ ಧರಿಸಿ, ಪೌರಾಣಿಕ ಲುಕ್‌ನಲ್ಲಿ ರಾಘವ್ ಮಿಂಚಿದ್ದಾರೆ. ಇನ್ನು ನಟ ಇದೇ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೈ-ಬಜೆಟ್‌ನಲ್ಲಿ ಕನ್ನಡ, ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳಿನಲ್ಲಿ ಮೂಡಿಬರಲಿರುವ ಈ ಚಿತ್ರವು 2027ರಲ್ಲಿ ತೆರೆಗೆ ಬರಲಿದೆ. ಉಳಿದಂತೆ ರಾಘವ್ ಲಾರೆನ್ಸ್ ತಮಿಳಿನ ‘ಕಾಂಚನಾ 4’, ‘ಬೆಂಜ್‌’, ‘ಕಾಲಭೈರವ’, ‘ಬುಲೆಟ್’, ‘ಹಂಟರ್’ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. -ಏಜೆನ್ಸೀಸ್