ಸಿನಿವಾಣಿ

ರಾಧಿಕಾ ಪಂಡಿತ್​ ಅವರ ಮಗಳ ಪುಸ್ತಕ ಪ್ರೀತಿ

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಲಾಕ್​ಡೌನ್ ಸಮಯವನ್ನು ತಮ್ಮ ಇಬ್ಬರು ಮಕ್ಕಳೊಂದಿಗೆ ಕಳೆಯುತ್ತಿದ್ದಾರೆ. ಅವರ ಲಾಲನೆ, ಪಾಲನೆಯಲ್ಲಿಯೇ ಖುಷಿ ಕಾಣುತ್ತಿದ್ದಾರೆ. ಆಗೊಂದು ಈಗೊಂದು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ಅಭಿಮಾನಿಗಳಿಗೂ ಪುಟಾಣಿಗಳ ಬಗ್ಗೆ ಅಪ್​ಡೇಟ್ ನೀಡುತ್ತಿರುತ್ತಾರೆ.

ಇದೀಗ ರಾಧಿಕಾ ತಮ್ಮ ಮಗಳ ಕುರಿತು ಹೊಸ ಪೋಸ್ಟ್ ಹಾಕಿದ್ದಾರೆ. ಐರಾ ಪುಸ್ತಕವನ್ನು ಗಂಭೀರವಾಗಿ ನೋಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿರುವ ರಾಧಿಕಾ, ‘ನಾನು ನನ್ನ ಪರೀಕ್ಷಾ ದಿನಗಳಲ್ಲಿಯೇ ಇಷ್ಟೊಂದು ಗಂಭೀರವಾಗಿ ಓದಿಲ್ಲ’ ಎಂದು ಹೇಳಿದ್ದಾರೆ.

‘ಐರಾಗೆ ಫೋನ್ ಮತ್ತು ಟಿವಿಯ ಬದಲು ಹೆಚ್ಚೆಚ್ಚು ಪುಸ್ತಕಗಳನ್ನು ನೀಡುತ್ತ ಅವಳ ಗಮನವೆಲ್ಲ ಪುಸ್ತಕದ ಕಡೆ ಸೆಳೆಯುವಂತೆ ಮಾಡುತ್ತಿದ್ದೇನೆ. ಮುಂದೆ ಅದೇ ಅವಳಿಗೆ ಒಳ್ಳೆಯ ಹವ್ಯಾಸ ಆಗಲಿದೆ’ ಎಂದಿದ್ದಾರೆ. ಅಂದಹಾಗೆ, ಐರಾಗೆ ಈ ಪುಸ್ತಕಗಳನ್ನು ರವಾನಿಸಿದ್ದು, ನಟಿ ಅನು ಪ್ರಭಾಕರ್ ಮುಖರ್ಜಿ.