ಸಿನಿವಾಣಿ

ಆಹಾರ ಪದಾರ್ಥ ಹಂಚಿದ ರಾಧಿಕಾ ಕುಮಾರಸ್ವಾಮಿ

chetannadiger

ಲಾಕ್‌ಡೌನ್ ಹಿನ್ನೆಲೆಯಲ್ಲಿ ದಿನಗೂಲಿ ಕಾರ್ಮಿಕರು ಸಾಕಷ್ಟು ಸಂಕಷ್ಟಪಡುತ್ತಿದ್ದಾರೆ. ಹಣ, ಆಹಾರ ಪದಾರ್ಥಗಳಿಲ್ಲದೆ ಒದ್ದಾಡುತ್ತಿದ್ದಾರೆ. ಹೀಗಿರುವಾಗ ಚಿತ್ರರಂಗದಿಂದ ಕೆಲವರು ಧನಸಹಾಯ ಮಾಡುತ್ತಿದ್ದರೆ, ಇನ್ನೂ ಕೆಲವರು ಆಹಾರ ಪದಾರ್ಥಗಳನ್ನು ಒದಿಗಸುವ ಕೆಲಸ ಮಾಡುತ್ತಿದ್ದಾರೆ. ಈಗ ರಾಧಿಕಾ ಕುಮಾರಸ್ವಾಮಿ ಸಹ ಕೈಜೋಡಿಸಿದ್ದಾರೆ.

ರಾಧಿಕಾ ತಮ್ಮ ತಂಡದೊಂದಿಗೆ ಬೆಂಗಳೂರಿನ ನಾಯಂಡಹಳ್ಳಿ, ದೀಪಾಂಜಲಿ ನಗರ, ಕೆಂಗೇರಿ, ಮೂಡಲಪಾಳ್ಯ ಸೇರಿದಂತೆ ಹಲವು ಭಾಗಗಳಲ್ಲಿ ಅಗತ್ಯವಿರುವವರಿಗೆ ಆಹಾರ ಪದಾರ್ಥಗಳನ್ನು ಪೂರೈಸಿದ್ದಾರೆ. ಆಹಾರ ಪದಾರ್ಥಗಳನ್ನು ಪಡೆಯುವುದಕ್ಕೆ ಸಾಲುಗಟ್ಟಿ ಜನರು ನಿಂತಿದ್ದು, ಅವರಿಗೆಲ್ಲಾ ರಾಧಿಕಾ ನೆರವು ನೀಡಿದ್ದಾರೆ. ಆಹಾರ ಪದಾರ್ಥಗಳ ವಿತರಣೆ ಮಾಡುವಾಗ ಮಾಸ್ಕ್ ಧರಿಸಿದ್ದ ಅವರು, ಎಲ್ಲರಿಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.