ಸಿನಿವಾಣಿ

ಪ್ರಿಯಾಂಕಾ, ಲೋಹಿತ್ ಹ್ಯಾಟ್ರಿಕ್ ; ರಾಧಿಕಾ ಸಹೋದರ ರವಿರಾಜ್ ನಿರ್ಮಾಣದ ಹಾರರ್ ಚಿತ್ರ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಪ್ರಿಯಾಂಕಾ ಉಪೇಂದ್ರ ಮತ್ತು ನಿರ್ದೇಶಕ ಲೋಹಿತ್ ಮೂರನೇ ಬಾರಿಗೆ ಒಂದಾಗಿದ್ದಾರೆ. ಈ ಹಿಂದೆ ಲೋಹಿತ್ ಆ್ಯಕ್ಷನ್-ಕಟ್ ಹೇಳಿದ್ದ ‘ದೇವಕಿ’ ಹಾಗೂ ‘ಮಮ್ಮಿ ಸೇವ್ ಮಿ’ ಚಿತ್ರಗಳಲ್ಲಿ ಪ್ರಿಯಾಂಕಾ ನಾಯಕಿಯಾಗಿ ನಟಿಸಿದ್ದರು. ಇದೀಗ ನಟಿ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ನಿರ್ಮಿಸುತ್ತಿರುವ ಮೊದಲ ಚಿತ್ರದಲ್ಲಿ ಪ್ರಿಯಾಂಕಾ, ಲೋಹಿತ್ ಮತ್ತೆ ಕೈಜೋಡಿಸಿದ್ದಾರೆ.

ಇದು ಹಾರರ್ ಜಾನರ್‌ನ ಕಥೆಯಾಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದೆ ಎನ್ನಲಾಗಿದೆ. ಅದೇ ಖುಷಿಯಲ್ಲಿ ಚಿತ್ರತಂಡ ಪ್ರಿಯಾಂಕಾ ಉಪೇಂದ್ರ ಅವರ ಸ್ಟ್ ಲುಕ್ ರಿಲೀಸ್ ಮಾಡಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಉಳಿದ ತಾರಾಗಣ ಹಾಗೂ ತಂತ್ರಜ್ಞರ ಕುರಿತು ಮಾಹಿತಿ ನೀಡುವ ಆಲೋಚನೆ ಚಿತ್ರತಂಡದ್ದು. ಶಮಿಕಾ ಎಂಟರ್‌ಪ್ರೈಸಸ್ ಮೂಲಕ ರಾಧಿಕಾ ‘ಲಕ್ಕಿ’, ‘ಸ್ವೀಟಿ ನನ್ನ ಜೋಡಿ’ ಹಾಗೂ ಭೈರಾದೇವಿ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಆ ಸಿನಿಮಾಗಳ ನಿರ್ಮಾಣ ಮತ್ತು ವಿತರಣೆಯಲ್ಲಿ ರಾಧಿಕಾ ಜತೆ ರವಿರಾಜ್ ಕೂಡ ಕೈಜೋಡಿಸಿದ್ದರು. ಇದೀಗ ತಮ್ಮದೇ ಬ್ಯಾನರ್ ಪ್ರಾರಂಭಿಸಿರುವ ಅವರು, ಮೊದಲ ಚಿತ್ರದ ರಿಲೀಸ್‌ಗೆ ಸಿದ್ಧತೆ ನಡೆಸುತ್ತಿದ್ದಾರೆ.