ಮುಂಬೈ: ಸಲ್ಮಾನ್ ಖಾನ್ ಅಭಿನಯದ ರಾಧೇ – ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರ ಬಿಡಗುಡೆಯಾಗಿ ಒಂದು ವಾರ ಮುಗಿಯುತ್ತಾ ಬಂದಿದೆ. ಈ ಚಿತ್ರವನ್ನು 8.9 ಮಿಲಿಯನ್ ಜನ ಇದುವರೆಗೂ ಜಗತ್ತಿನಾದ್ಯಂತ ವೀಕ್ಷಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಶೂಟಿಂಗ್ ಮಾಡುವಾಗ ಪ್ರಿಯಾಂಕಾ ಗಂಡನಿಗೆ ಗಾಯ …
ಈ ಮಧ್ಯೆ, ರೇಟಿಂಗ್ ವಿಷಯದಲ್ಲಿ ಚಿತ್ರವು ಇನ್ನಷ್ಟು ಕುಸಿದಿದೆ. ಬಿಡುಗಡೆಯಾದ ಮೊದಲ ದಿನವೇ ಐಎಂಡಿಬಿಯಲ್ಲಿ ಚಿತ್ರಕ್ಕೆ ಕೆಟ್ಟ ರೇಟಿಂಗ್ ಸಿಕ್ಕಿದ್ದು, 10ಕ್ಕೆ ಕೇವಲ 2.5 ರೇಟಿಂಗ್ ಮಾತ್ರ ಸಿಕ್ಕಿತ್ತು.
ಸಲ್ಮಾನ್ ಮಟ್ಟಿಗೆ ಇದು ಸ್ವಲ್ಪ ಸಮಾಧಾನಕರ ವಿಷಯವಾಗಿತ್ತು. ಏಕೆಂದರೆ, ಅವರ ಇನ್ನೂ ಎರಡು ಚಿತ್ರಗಳು ಅದಕ್ಕಿಂತ ಕಡಿಮೆ ರೇಟಿಂಗ್ ಪಡೆದಿತ್ತು. ಹಾಗಾಗಿ, ಸಲ್ಮಾನ್ ವೃತ್ತಿಜೀವನದಲ್ಲೇ ಮೂರನೇ ಕೆಟ್ಟ ಚಿತ್ರ ಎಂಬ ಹೆಗ್ಗಳಿಕೆಗೆ ಚಿತ್ರ ಪಾತ್ರವಾಗಿತ್ತು.
ಇದನ್ನೂ ಓದಿ: ಹಾಲಿವುಡ್ ನಟಿಯ ಹಾಸಿಗೆಯ ಮೇಲೆ ಟಾಲಿವುಡ್ ನಿರ್ದೇಶಕ
ಆದರೆ, ಇದೀಗ ಚಿತ್ರ ಇನ್ನೊಂದು ದಾಖಲೆ ಮಾಡಿದೆ. ಇದುವರೆಗೂ ಮೂರನೇ ಸ್ಥಾನದಲ್ಲಿದ್ದ ರಾಧೇ, ಈಗ 1.7ಕ್ಕೆ ಕುಸಿಯುವ ಮೂಲಕ ಸಲ್ಮಾನ್ ಕೆರಿಯರ್ನಲ್ಲೇ ಅತೀ ಕಡಿಮೆ ರೇಟಿಂಗ್ ಪಡೆದಂತಹ ಚಿತ್ರ ಎಂಬ ಖ್ಯಾತಿಗೆ ಒಳಗಾಗಿದೆ.