ಸಿನಿವಾಣಿ

ಲೋಕೇಶ್​ ಕನಗರಾಜ್​ ಜೊತೆ ರಚಿತಾ ರಾಮ್​ ರೊಮ್ಯಾನ್ಸ್​: ಕೂಲಿ ಕಲ್ಯಾಣಿಗೆ ಲೋಕಿ ಹೀರೋ! Rachita Ram

Rachita Ram : ಸಾಮಾನ್ಯವಾಗಿ ಸಿನಿಮಾ ನಿರ್ದೇಶಕರು ಹೆಚ್ಚಾಗಿ ತೆರೆಮರೆಯಲ್ಲಿ ಇರುತ್ತಾರೆ. ಅವರು ತೆರೆಯ ಮೇಲೆ ಕಾಣಿಸಿಕೊಳ್ಳುವುದು ತುಂಬಾನೇ ವಿರಳ. ಇದುವರೆಗೂ ಸಾಕಷ್ಟು ನಿರ್ದೇಶಕರನ್ನು ಸಿನಿಮಾರಂಗ ಕಂಡಿದೆ. ಅವರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ತಮ್ಮ ನಿರ್ದೇಶನದ ಪ್ರತಿಭೆ ಮಾತ್ರವಲ್ಲದೇ ನಟನಾ ಪ್ರತಿಭೆಯನ್ನು ಸಹ ತೋರಿದ್ದಾರೆ. ನಿರ್ದಶಕರು ನಟರಾದ ಸಾಕಷ್ಟು ಉದಾಹರಣೆಗಳಿವೆ. ಇದೀಗ ಆ ಸಾಲಿಗೆ ತಮಿಳು ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ಕೂಡ ಸೇರಿದ್ದಾರೆ. ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವಾಗಲೇ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಈ ವಿಷಯ ವರ್ಷಗಳ ಹಿಂದೆಯೇ ಹೊರಬಿದ್ದರೂ, ಈಗ ಮತ್ತೊಂದು ಕ್ರೇಜಿ ಅಪ್‌ಡೇಟ್ ಹೊರಬಿದ್ದಿದೆ. ಅದನ್ನು ಕೇಳಿ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ.

ಇತ್ತೀಚೆಗೆ 'ಕೂಲಿ' ಚಿತ್ರದ ಮೂಲಕ ಮತ್ತೊಂದು ಭರ್ಜರಿ ಯಶಸ್ಸು ಕಂಡಿರುವ ನಿರ್ದೇಶಕ ಲೋಕೇಶ್ ಕನಗರಾಜ್, ಮುಂದೆ ಯಾವ ಸಿನಿಮಾ ಮಾಡಬೇಕೆಂದು ಯೋಚಿಸುತ್ತಿದ್ದಾರೆ. ಸಿನಿ ಲೆಕ್ಕಾಚಾರದ ಪ್ರಕಾರ, ಅವರು 'ಖೈದಿ 2' ಮಾಡಬೇಕು. ಆದರೆ, ಅವರು ಆಮೀರ್ ಖಾನ್ ಜತೆ ಸೂಪರ್ ಹೀರೋ ಸಿನಿಮಾ ಮಾಡುತ್ತಾರೆ ಎಂಬ ವದಂತಿಗಳಿವೆ. ಆದರೆ, ಈ ವಿಷಯಗಳ ಬಗ್ಗೆ ಇನ್ನೂ ಸ್ಪಷ್ಟನೆ ನೀಡಬೇಕಿದೆ.

ಮತ್ತೊಂದೆಡೆ, ತಮಿಳು ನಿರ್ದೇಶಕ ಅರುಣ್ ಮಾಥೇಶ್ವರನ್ ನಿರ್ಮಿಸಲಿರುವ ಹೊಸ ಸಿನಿಮಾದ ಮೂಲಕ ಲೋಕೇಶ್ ಕನಗರಾಜ್ ನಾಯಕನಾಗಲಿದ್ದಾರೆ. ಲೋಕೇಶ್ ಈಗಾಗಲೇ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆಯುತ್ತಿದ್ದು, ಸಿನಿಮಾಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ. ಇದರ ನಡುವೆ ಒಂದು ಕ್ರೇಜಿ ಅಪ್​ಡೇಟ್​ ಹೊರಬಿದ್ದಿದೆ.

ತಾಜಾ ಸಂಗತಿ ಏನೆಂದರೆ, ಈ ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಲೋಕೇಶ್ ಕನಗರಾಜ್ ನಿರ್ದೇಶನದ 'ಕೂಲಿ' ಚಿತ್ರದಲ್ಲಿ ಕಲ್ಯಾಣಿ ಪಾತ್ರವನ್ನು ರಚಿತಾ ರಾಮ್​ ನಿರ್ವಹಿಸಿದರು. ತಮ್ಮ ನಟನೆಗಾಗಿ ರಚಿತಾ ಅವರಿಗೆ ಉತ್ತಮ ಕ್ರೇಜ್ ಕೂಡ ಸಿಕ್ಕಿದೆ. ಕನ್ನಡದಲ್ಲಿ ಸ್ಟಾರ್ ನಾಯಕಿಯಾಗಿರುವ ರಚಿತಾ, 'ಕೂಲಿ' ಚಿತ್ರದ ಮೂಲಕ ದಕ್ಷಿಣದಲ್ಲಿ ಖ್ಯಾತಿ ಗಳಿಸಿದ್ದಾರೆ. ಈಗ ಲೋಕೇಶ್ ಎದುರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದು ದೃಢಪಟ್ಟಿದ್ದು, ಶೀಘ್ರದಲ್ಲೇ ಘೋಷಣೆಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಅಂದಹಾಗೆ, ಕೆಲವು ವರ್ಷಗಳ ಹಿಂದೆ ಲೋಕೇಶ್ ಕನಗರಾಜ್, ಶ್ರುತಿ ಹಾಸನ್ ಜೊತೆ ಆಲ್ಬಮ್ ಹಾಡಿನಲ್ಲಿ ನಟಿಸಿದ್ದರು. ಈಗ ತಮ್ಮ ನಿರ್ದೇಶನದಲ್ಲಿ ನಟಿಸಿರುವ ರಚಿತಾ ಜೊತೆ ನಾಯಕನಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)