ಮುಂಬೈ: ಬಾಲಿವುಟ್ ಸ್ಟಾರ್ ನಟ ರಣವೀರ್ ಸಿಂಗ್ ಅವರ ಬೆತ್ತಲೆ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹು ಚರ್ಚಿತ ವಿಷಯವಾಗಿದೆ. ತಮ್ಮ ವಿಭಿನ್ನ ಉಡುಗೆ ಮತ್ತು ಫ್ಯಾಷನ್ನಿಂದಲೇ ಹೆಸರಾಗಿರುವ ರಣವೀರ್, ತಮ್ಮ ಬೆತ್ತಲೆ ಫೋಟೋಶೂಟ್ ಮೂಲಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ಮಾಡೆಲ್ ಕಂ ನಟಿ ಪೂನಂ ಪಾಂಡೆ ಮಾಡಿರುವ ಕಾಮೆಂಟ್ ಸಹ ಭಾರೀ ವೈರಲ್ ಆಗಿದೆ.
ಮ್ಯಾಗಜಿನ್ ಒಂದರ ಮುಖಪುಟಕ್ಕಾಗಿ ರಣವೀರ್ ಬೆತ್ತಲೆ ಫೋಟೋಶೂಟ್ ಮಾಡಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ, ಪರಿಣಿತಿ ಚೋಪ್ರಾ ಮತ್ತು ಅನುರಾಗ್ ಕಶ್ಯಪ್ ಸೇರಿದಂತೆ ಅನೇಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರ ವಿರೋಧದ ನಡುವೆಯೂ ರಣವೀರ್ ಪತ್ನಿ ದೀಪಿಕಾ ಪಡುಕೋಣೆ ಪತಿಗೆ ಬೆಂಬಲ ನೀಡಿದ್ದಾರೆ. ಫೋಟೋಗಳು ಜಾಲತಾಣದಲ್ಲಿ ಹರಿದಾಡುವ ಮುನ್ನವೇ ದೀಪಿಕಾ ವೀಕ್ಷಿಸಿದ್ದರಂತೆ, ಅಲ್ಲದೇ ತುಂಬಾ ಚೆನ್ನಾಗಿವೆ ಎಂದು ಪ್ರತಿಕ್ರಿಯೆ ಕೂಡ ನೀಡಿದ್ದರಂತೆ. ಈ ಫೋಟೋ ವೈರಲ್ ಆದ ಬಳಿಕವೂ ದೀಪಿಕಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪತಿಗೆ ಬೆಂಬಲವಾಗಿ ನಿಂತಿದ್ದಾರೆ.
ಇದೀಗ ಪೂನಂ ಪಾಂಡೆ ಕಾಮೆಂಟ್ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಟ್ವೀಟ್ ಮಾಡಿರುವ ಪೂನಂ, ರಣವೀರ್ ಅವರ ಬೆತ್ತಲೆ ಫೋಟೋಗಳನ್ನು ಶೇರ್ ಮಾಡಿ, "ನನ್ನದೇ ಆಟದಲ್ಲಿ ನನ್ನನ್ನು ಸೋಲಿಸಿದ್ದೀರಿ" ಎಂದಿದ್ದಾರೆ. ಅಂದಹಾಗೆ ಪೂನಂ ಕೂಡ ತಮ್ಮ ವಿಭಿನ್ನ ಉಡುಗೆ ಮತ್ತು ಹಾಟ್ ಅವತಾರಗಳಿಂದಲೇ ಫೇಮಸ್. ಸಾರ್ವಜನಿಕರ ಎದುರು ಬೆತ್ತಲಾಗುವುದಾಗಿ ಅನೇಕ ಬಾರಿ ಹೇಳಿದ್ದಾರೆ. ಇಂತಹ ವಿಚಾರಗಳಿಂದಲೇ ಪೂನಂ ಆಗಾಗಾ ಭಾರೀ ಸುದ್ದಿಯಾಗುತ್ತಿರುತ್ತಾರೆ.
ಇನ್ನು ತಮ್ಮ ಬೆತ್ತಲೆ ಫೋಟೋಶೂಟ್ ಬಗ್ಗೆ ಮಾತನಾಡಿರುವ ರಣವೀರ್, ದೈಹಿಕವಾಗಿ ಬೆತ್ತಲೆ ಆಗುವುದು ನನಗೆ ಸುಲಭ. ಆದರೆ, ನನ್ನ ಕೆಲವು ನಟನೆಯಲ್ಲಿ ಇನ್ನಷ್ಟು ಬೆತ್ತಲಾಗಿದ್ದೇನೆ. ನೀವು ನನ್ನ ಆತ್ಮವನ್ನು ನೋಡಬಹುದು. ಅದು ಎಷ್ಟು ಬೆತ್ತಲೆಯಾಗಿದೆ? ಅದು ನಿಜವಾಗಿಯು ಬೆತ್ತಲೆಯಾಗಿದೆ. ನಾನು ಸಾವಿರಾರು ಜನರ ಮುಂದೆ ಬೆತ್ತಲೆಯಾಗಬಲ್ಲೆ, ಆದರೆ ಹೊಲಸು ನೀಡುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್)