ಸಿನಿವಾಣಿ

ಯಶಿಕಾ ಆನಂದ್​ ಬೋಲ್ಡ್​ ಫೋಟೋಗಳು ವೈರಲ್: ನಟಿಯ ಹಾಟ್​ ಅವತಾರಕ್ಕೆ ಫ್ಯಾನ್ಸ್​ ಫಿದಾ!

ಚೆನ್ನೈ: ಕಾಲಿವುಡ್​ನ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಹೆಸರಿನ ವಯಸ್ಕರ ಕಾಮಿಡಿ ಚಿತ್ರ ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್ ಅವರು ಕಳೆದ ವರ್ಷ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚೇತರಿಸಿಕೊಂಡಿದ್ದು, ಸಂಪೂರ್ಣ ಸಹಜ ಜೀವನಕ್ಕೆ ಮರಳಿದ್ದಾರೆ. ಸಾವಿನ ಹೊಸ್ತಿಲಿಗೆ ಹೋಗಿ ಅದೃಷ್ಟವಶಾತ್​ ಬದುಕಿ ಬಂದಿರುವ ಯಶಿಕಾ, ಹಿಂದಿನ ನೋವೆಲ್ಲ ಮರೆತು ಮತ್ತೆ ಗ್ಲಾಮರ್​ ಲೋಕದ ಕ್ಷಣಗಳನ್ನು ಸವಿಯುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಯಶಿಕಾ, ಅಪಘಾತದ ನಂತರ ಸಾಕಷ್ಟು ದಿನಗಳ ಕಾಲ ಜಾಲತಾಣದಿಂದ ದೂರ ಉಳಿದಿದ್ದರು. ಇದೀಗ ಸಂಪೂರ್ಣ ಗುಣಮುಖರಾಗಿ ಸಹಜ ಜೀವನಕ್ಕೆ ಮರಳಿರುವ ಯಶಿಕಾ ಮತ್ತೆ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿದ್ದು, ಗ್ಲಾಮರಸ್​ ಫೋಟೋಗಳನ್ನು ಹರಿಬಿಡುವ ಸಂಚಲನ ಸೃಷ್ಟಿಸುತ್ತಿದ್ದಾರೆ. ಆಗಾಗಾ ಅಭಿಮಾನಿಗಳ ಜತೆ ಸಂವಹನವನ್ನು ನಡೆಸುತ್ತಿರುತ್ತಾರೆ.

ಇದೀಗ ಯಶಿಕಾ ಇನ್​​ಸ್ಟಾಗ್ರಾಂನಲ್ಲಿ ಹರಿಬಿಟ್ಟಿರುವ ಹಾಟ್​ ಫೋಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಕ್ಯಾಂಡಿ ಬೇಬಿ ಎಂಬ ಅಡಿಬರಹದೊಂದಿಗೆ ಕಿತ್ತಳೆ ಮತ್ತು ಗುಲಾಬಿ ಬಣ್ಣ ಮಿಶ್ರಿತ ಉಡುಪು ಧರಿಸಿ ಕ್ಯಾಮೆರಾಗೆ ಪೋಸ್​​ ನೀಡಿದ್ದಾರೆ. ಫೋಟೋಗಳು ವೈರಲ್​ ಆಗಿದ್ದು, 1.5 ಲಕ್ಷಕ್ಕೂ ಹೆಚಚು ಲೈಕ್ಸ್​ ಬಂದಿದ್ದು, ಯಶಿಕಾ ಹಾಟ್​ನೆಸ್​ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಮಧ್ಯರಾತ್ರಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯಶಿಕಾ ಆನಂದ್ ದೀರ್ಘ ಕಾಲ ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಪಡೆಯಬೇಕಾಯಿತು. ಎದ್ದು ನಡೆದಾಡಲು ಸಹ ಅವರಿಗೆ ಆಗುತ್ತಿರಲಿಲ್ಲ. ಅಪಘಾತದಲ್ಲಿ ಯಶಿಕಾ ಅವರ ಆಪ್ತ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, 22 ವರ್ಷದ ಯಶಿಕಾ, ಎಸ್​.ಜೆ. ಸೂರ್ಯ ಅಭಿನಯದ “ಕಡಮೈಯೆ ಸೈ” ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. (ಏಜೆನ್ಸೀಸ್​)