ಸಿನಿವಾಣಿ

PHOTOS| ಎದೆಸೀಳು ಕಾಣಿಸುವ ಡ್ರೆಸ್​ ಧರಿಸಿ ಬಂದು ಮುಜುಗರಕ್ಕೀಡಾದ ಬಾಲಿವುಡ್​ ಬ್ಯೂಟಿ ನೋರಾ ಫತೇಹಿ!

ಮುಂಬೈ: ಬಾಲಿವುಡ್​ ನಟಿ ಹಾಗೂ ಫ್ಯಾಶನ್​ ಐಕಾನ್ ನೋರಾ ಫತೇಹಿ​ ತಮ್ಮ ಹಾಟ್​ ಆ್ಯಂಡ್​ ಬೋಲ್ಡ್​ ಲುಕ್​ನಿಂದಲೇ ಸುದ್ದಿಯಾದವರು. ಕೆನಡಿಯನ್​ ಮೂಲದ ನೋರಾ ಬಾಲಿವುಡ್​ನಲ್ಲಿ ತಮ್ಮ ಮಾದಕತೆಯಿಂದಲೇ ಮಿಂಚು ಹರಿಸುತ್ತಿದ್ದು, ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ಸದಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲ ತಮ್ಮ ಮೈಮಾಟ ಪ್ರದರ್ಶಿಸುವಂತಹ ಉಡುಪು ಧರಿಸಿ ಕ್ಯಾಮರಾಗೆ ಪೋಸ್​​ ನೀಡುವ ನೋರಾ, ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಾರೆ. ಅದೇ ರೀತಿ ನಿನ್ನೆಯು ಕೂಡ ಮುಂಬೈ ಬೀದಿಯಲ್ಲಿ ಕಾಣಿಸಿಕೊಂಡ ನೋರಾ ತಮ್ಮ ಎದೆ ಸೀಳು ಕಾಣುವಂತಹ ಕಟೌಟ್​ ಡ್ರೆಸ್​​ ಧರಿಸಿ ಎಲ್ಲರ ಕಣ್ಣನ್ನು ತಮ್ಮತ್ತ ಸೆಳೆದುಕೊಂಡರು.

ಕ್ಯಾಮರಾಮನ್​ಗಳು ನೋರಾ ಅವರ ಮಾದಕ ನೋಟವನ್ನು ಸೆರೆಹಿಡಿಯಬೇಕಾದರೆ, ನೋರಾ ಅವರಿಗೆ ತಮ್ಮ ಉಡುಗೆಯಿಂದ ಕೊಂಚ ಮುಜುಗರ ಅನುಭವಿಸಿದರು. ಇದು ಅವರ ಹಾವಾಭಾವದಿಂದಲೇ ತಿಳಿಯಿತು. ಪ್ರತಿ ಬಾರಿ ಪೋಸ್​ ಕೊಡುವಾಗ ತಮ್ಮ ಬಟ್ಟೆಯನ್ನು ಸರಿಪಡಿಸಿಕೊಳ್ಳುತ್ತಿದ್ದರು.

ಮಾದಕ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ಲೈಕ್ಸ್​ ಮತ್ತು ಕಾಮೆಂಟ್​ಗಳು ಹರಿದುಬರುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್​ ಆಗಿವೆ. ನೋರಾ ಅವರ ಮಾದಕ ಫೋಟೋ ನೋಡಿ ನೆಟ್ಟಿಗರು ಕಳೆದುಹೋಗಿದ್ದಾರೆ. (ಏಜೆನ್ಸೀಸ್​)