ಸಿನಿವಾಣಿ

#BBK8: ಬಿಗ್​ಬಾಸ್​ ಸೀಸನ್​ 8ರ ಟಾಪ್​ 3 ಫೈನಲಿಸ್ಟ್​ಗಳು ಖಚಿತವಾಗಿಯೂ ಇವರಂತೆ!

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8ನೇ ಆವೃತ್ತಿಯು ಮುಗಿಯುವ ಹಂತಕ್ಕೆ ಬಂದಿದ್ದು, ಈಗಾಗಲೇ ಫೈನಲ್​ನಲ್ಲಿ ಯಾರು ಗೆಲ್ಲಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿದೆ. ಎಲ್ಲವು ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಶೋ ಮುಗಿಯಬೇಕಿತ್ತು. ಆದರೆ, ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಶೋ ಅರ್ಧಕ್ಕೆ ಮೊಟಕುಕೊಂಡು ಮತ್ತೆ ಆರಂಭವಾಗಿದೆ. ಆದರೂ ಶೋ ಮೇಲಿನ ವೀಕ್ಷಕರ ಆಸಕ್ತಿಯೇನೂ ಕಡಿಮೆ ಆಗಿಲ್ಲ.

ಬಿಗ್​ಬಾಸ್​ ಶೋ ಮುಗಿಯಲು ಇನ್ನು ಮೂರೇ ವಾರ ಬಾಕಿ ಇದೆ. ಇದರ ನಡುವೆ ಬಿಗ್​ಬಾಸ್​ ವೀಕ್ಷಕರು ಈ ಬಾರಿ ಯಾರು ಗೆಲ್ಲಬಹುದು ಎಂದು ಊಹಿಸಿದ್ದಾರೆ. ಸದ್ಯದ ಟ್ರೆಂಡ್​ ಪ್ರಕಾರ ಫೈನಲ್​ ರೇಸ್​ನಲ್ಲಿ ಅರವಿಂದ್​, ಮುಂಜು ಪಾವಗಡ ನಡುವೆ ಫೈಟ್​ ನಡೆಯಲಿದೆ.

ಟಾಪ್​ ಮೂರರಲ್ಲಿ ಅರವಿಂದ್​, ಮಂಜು ಮತ್ತು ದಿವ್ಯಾ ಉರುಡುಗ ಇರಲಿದ್ದಾರಂತೆ. ಸೆಕೆಂಡ್​ ರನ್ನರ್​ ಅಪ್​ಗಾಗಿ ದಿವ್ಯಾ ಮತ್ತು ವೈಷ್ಣವಿ ನಡುವೆ ಪೈಪೋಟಿ ನಡೆಯಬಹುದು ಎನ್ನಲಾಗುತ್ತಿದೆ. ಆದರೆ, ಈ ನಾಲ್ಕು ಮಂದಿಯಂತೆ ಫೈನಲ್​ ತಲುಪುವುದು ಖಚಿತ ಎಂಬುದು ವೀಕ್ಷಕರ ಊಹೆ ಆಗಿದೆ.

ಬಹುಶಃ ಈ ವಾರ ಬಿಗ್​ಬಾಸ್​ ಮನೆಯಲ್ಲಿ ಡಬಲ್​ ಎಲಿಮಿನೇಶನ್​ ನಡೆಯಲಿದೆ. ಅಥವಾ ಯಾರಾದರೂ ಒಬ್ಬರನ್ನು ಸೀಕ್ರೆಟ್​ ರೂಮ್​ಗೆ ಕಳುಹಿಸುವ ಸಾಧ್ಯತೆಯು ಇದೆ. ಸದ್ಯ ನಿಧಿ ಮತ್ತು ಪ್ರಿಯಾಂಕ ತಿಮ್ಮೇಶ್​ ಡೇಂಜರ್​ ಝೋನ್​ನಲ್ಲಿದ್ದು ಇಬ್ಬರಲ್ಲಿ ಒಬ್ಬರು ಈ ವಾರ ಮನೆಯಿಂದ ಆಚೆ ಬರಲಿದ್ದಾರೆ ಎಂದು ಊಹಿಸಲಾಗಿದೆ. ಇದು ಎಷ್ಟು ನಿಜವಾಗುತ್ತದೆ ಎಂದು ತಿಳಿಯಲು ವೀಕೆಂಡ್​ ಎಪಿಸೋಡ್​ಗಾಗಿ ಕಾಯಬೇಕಿದೆ.