ಸಿನಿವಾಣಿ

ನೀವು ಯಾವಾಗಲೂ ಖುಷಿಯಾಗಿರುತ್ತೀರಲ್ಲ ಹೇಗೆ? ಜನರ ಪ್ರಶ್ನೆಗೆ ಕಿರಿಕ್​ ಬ್ಯೂಟಿ ಕೊಟ್ಟ ಉತ್ತರ ಹೀಗಿದೆ...

ಹೈದರಾಬಾದ್​: ಚರಿಷ್ಮಾ ಸುಂದರಿ ಹಾಗೂ ನ್ಯಾಷನಲ್​ ಕ್ರಷ್​ ಎಂದೇ ಖ್ಯಾತಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್​ ಆಗಿರುತ್ತಾರೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಕೇಳುವ ಪ್ರಶ್ನೆಗಳಿಗೆ ಸದಾ ಉತ್ತರ ನೀಡುವ ರಶ್ಮಿಕಾ, ಕೆಲವೊಮ್ಮೆ ವಿವಾದಗಳಿಂದಲೇ ಸುದ್ದಿಯಾಗುತ್ತಾರೆ. ಆದರೆ, ಇದೀಗ ವಿವಾದವನ್ನು ಬಿಟ್ಟು ಜನರ ಸಂದೇಹವೊಂದನ್ನು ಬಗೆಹರಿಸಿದ್ದಾರೆ.

ನೀವು ಯಾವಾಗಲೂ ಖುಷಿಯಾಗಿರುತ್ತೀರಲ್ಲ ಅದು ಹೇಗೆ? ಎಂದು ಜನರು ರಶ್ಮಿಕಾರನ್ನು ಯಾವಾಗಲೂ ಪ್ರಶ್ನಿಸುತ್ತಾರಂತೆ. ಎಲ್ಲಿ ಹೋದರು ಇದೇ ಪ್ರಶ್ನೆಯನ್ನು ಕೇಳುತ್ತಾರಂತೆ. ಆ ಪ್ರಶ್ನೆಗೆ ಕೊನೆಗೂ ರಶ್ಮಿಕಾ ಉತ್ತರ ನೀಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹರಿಬಿಡುವ ಮೂಲಕ ರಶ್ಮಿಕಾ ಉತ್ತರಿಸಿದ್ದಾರೆ. ವಿಡಿಯೋದಲ್ಲಿ ರಶ್ಮಿಕಾ ಅವರು ನೀರು ತುಂಬಿರುವ ಒಂದು ಗಾಜಿನ ಲೋಟವನ್ನು ಹಿಡಿದು, ನೀರು ಕುಡಿಯುತ್ತಾ ಮನೆಯಲ್ಲೆಲ್ಲ ಓಡಾಡಿಕೊಂಡು ಡಾನ್ಸ್ ಮಾಡುತ್ತಾ ಸಖತ್​ ಎಂಜಾಯ್​ ಮಾಡುತ್ತಿರುವ ದೃಶ್ಯವಿದೆ. ಶುದ್ಧ ನೀರು, ಸಕಾರಾತ್ಮಕ ಮನಸ್ಸು ಮತ್ತು ನೃತ್ಯ ತನ್ನ ಸಂತೋಷದ ರಹಸ್ಯ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ರಶ್ಮಿಕಾ ಅವರ ಸಿನಿಮಾ ಸಹೋದ್ಯೋಗಿಗಳು ಸೇರಿದಂತೆ ಹಲವರು ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, 22 ಲಕ್ಷಕ್ಕೂ ಅಧಿಕ ಲೈಕ್ಸ್​ಗಳನ್ನು ಪಡೆದುಕೊಂಡಿದೆ.

ಸಿನಿಮಾ ವಿಚಾರಕ್ಕೆ ಬಂದರೆ, ಪುಷ್ಪ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ರಶ್ಮಿಕಾ, ಸದ್ಯ ಮಿಷನ್​ ಮಜ್ನು ಚಿತ್ರದ ಮೂಲಕ ಬಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಮತ್ತು ಪುಷ್ಪ ಚಿತ್ರದ ಮುಂದುವರಿದ ಭಾಗದ ಚಿತ್ರೀಕರಣದಲ್ಲಿ ಶೀಘ್ರವೇ ತೊಡಗಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)