ಸಿನಿವಾಣಿ

ನಮ್ಮ ಊಹೆ ತಪ್ಪಾಯಿತು, ನೀವು ಮಾಡಿದ್ದು ಸರಿಯಲ್ಲ: ಸುದೀಪ್​ ಮೇಲೆ ನೆಟ್ಟಿಗರ ಬೇಸರ..!

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8ನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಶೋ ಮುಕ್ತಾಯಗೊಳ್ಳಲಿದೆ. ಈ ಬಾರಿ ಟ್ರೋಫಿಯನ್ನು ಯಾರು ಎತ್ತಿ ಹಿಡಿಯಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.

ಎಂದಿನಂತೆಯೇ ಈ ವೀಕೆಂಡ್​ ಕೂಡ ಸುದೀಪ್​ ಅವರ ಮಾತುಕತೆ ಎಲ್ಲರಿಗೂ ಇಷ್ಟವಾಗಿದೆ. ಈ ವಾರವೂ ಸಹ ಚಕ್ರವರ್ತಿ ಚಂದ್ರಚೂಡ್​ ಅವರು ಸಾಕಷ್ಟು ವಿವಾದಗಳನ್ನು ಮನೆಯಲ್ಲಿ ಸೃಷ್ಟಿ ಮಾಡಿದರು. ತಮ್ಮ ಎಲ್ಲೆಯನ್ನು ಮೀರಿ ಅತಿಯಾಗಿ ವರ್ತಿಸಿದರು. ಈ ವಾರವೂ ಸುದೀಪ್​ ಅವರು ಚಂದ್ರಚೂಡ್​ ಅವರಿಗೆ ಕ್ಲಾಸ್​ ತೆಗೆದುಕೊಳ್ಳುತ್ತಾರೆಂದು ವೀಕ್ಷಕರು ಹಾಗೂ ನೆಟ್ಟಿಗರು ಅಂದಾಜಿಸಿದ್ದರು. ಆದರೆ, ಅವರ ಊಹೆ ತಪ್ಪಾಗಿದ್ದು, ಇದರಿಂದ ನಿರಾಸೆಗೊಂಡಿದ್ದಾರೆ.

ಕಳೆದ ವಾರ ಚಂದ್ರಚೂಡ್​ ಅವರಿಗೆ ಸುದೀಪ್​ ಸಿಕ್ಕಾಪಟ್ಟೆ ಕ್ಲಾಸ್​ ತಗೆದುಕೊಳ್ಳುವ ಮೂಲಕ ವೀಕ್ಷಕರ ಮನಗೆದ್ದಿದ್ದರು. ಈ ವಾರವು ಕೂಡ ಚಂದ್ರಚೂಡ್​ ವರ್ತನೆ ಎಲ್ಲೆ ಮೀರಿತ್ತು. ಅವರನ್ನು ಶೋನಿಂದ ಹೊರಗೆ ಹಾಕುವಂತೆ ವೀಕ್ಷಕರು ಕಲರ್ಸ್​ ಕನ್ನಡವನ್ನು ಒತ್ತಾಯ ಸಹ ಮಾಡಿದ್ದರು. ಅಲ್ಲದೆ, ಈ ಬಾರಿ ಸುದೀಪ್​, ಚಂದ್ರಚೂಡ್​ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಂದು ಎದುರು ನೋಡುತ್ತಿದ್ದರು. ಆದರೆ, ಸುದೀಪ್​, ಚಂದ್ರಚೂಡ್​ ಬಗ್ಗೆ ಅಷ್ಟಾಗಿ ಮಾತನಾಡಲಿಲ್ಲ. ಇದರಿಂದ ನೆಟ್ಟಿಗರು ಬೇಸರಗೊಂಡಿದ್ದಾರೆ. (ಏಜೆನ್ಸೀಸ್​)